
ಉದಯವಾಹಿನಿ ಪೀಣ್ಯ ದಾಸರಹಳ್ಳಿ : ಸಮೀಪದ ಆರ್ ಆರ್ ನಗರ ವಿಧಾನಸಭಾ ಕ್ಷೇತ್ರದ ಲಗ್ಗೆರೆ ವಾರ್ಡಿನ ಲಕ್ಷ್ಮೀದೇವಿನಗರ,ಲಗ್ಗೆರೆ ಮತ್ತು ರಾಜೀವ ಗಾಂಧಿನಗರ ಸರಕಾರಿ ಶಾಲೆಗಳಲ್ಲಿ ಮತ್ತು ಬಿ ಬೆಸ್ಟ್ , ಮಾನಸ, ಎಸ್.ವಿ.ಎಸ್, ಹೋಲಿ ಏಂಜೆಲ್ ಮತ್ತು ಶಾರದ ಶಾಲೆಗಳಲ್ಲಿ ಸೇರಿದಂತೆ ವಿವಿಧ ಶಾಲೆಗಳಲ್ಲಿ ನಡೆದ 77ನೇ ಸ್ವಾಂತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಲಗ್ಗೆರೆ ವಾರ್ಡಿನ ಮಾಜಿ ಪಾಲಿಕೆ ಸದಸ್ಯೆ ಹಾಗೂ ಶಿಕ್ಷಣ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷೆ ಶ್ರೀಮತಿ ಮಂಜುಳಾ ನಾರಾಯಣ ಸ್ವಾಮಿ ಮತ್ತು ಕಾಂಗ್ರೆಸ್ ಪ್ರಭಾವಿ ನಾಯಕ ಲಗ್ಗೆರೆ ನಾರಾಯಣ ಸ್ವಾಮಿ ಅವರ ಸುಪುತ್ರ ವಕೀಲ್(‘ಲಾ’ ವಿದ್ಯಾರ್ಥಿ)ಕುಶಲ್ ಗೌಡ ಅವರು ಧ್ವಜಾರೋಹಣ ನೆರವೇರಿಸಿದರು.ನಂತರ ಅವರು ಮಾತನಾಡಿ ಈಗಿನ ಮಕ್ಕಳು ಮುಂದಿನ ಪ್ರಜಾಗಳು ಎಂದು ವಿದ್ಯಾರ್ಥಿಗಳಿಗೆ ಸಿಹಿ ತಿನ್ನಿಸಿ ಶುಭ ಕೋರಿ ಅವರು ಮಾತಾಡಿದರು. ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯರು ಶಿಕ್ಷಕ ಶಿಕ್ಷಕಿಯರು ಸಿಬ್ಬಂದಿ ವರ್ಗದವರು ಸಾರ್ವಜನಿಕರು ಮತ್ತು ಪೋಷಕರು ಮುಂತಾದವರು ಇದ್ದರು.
