ಉದಯವಾಹಿನಿ, ಬಾದಾಮಿಯ ಮೂಲಸ್ಥಾನ ಪಶ್ಚಿಮ ಏಷ್ಯಾ, ನಮ್ಮ ದೇಶದಲ್ಲಿ ಪಂಜಾಬ್, ಕಾಶ್ಮೀರ ಹಾಗೂ ಆಫ್ಘಾನಿಸ್ಥಾನದಲ್ಲಿ ಹೆಚ್ಚಾಗಿ ಇತ್ತೀಚಿನ ದಿನಗಳಲ್ಲಿ ಬೆಳೆಯುತ್ತಿದ್ದಾರೆ.
ಉಪಯುಕ್ತ ಭಾಗಗಳು: ಬೀಜ, ಕವಚ, ಬಾದಾಮಿ ಎಣ್ಣೆ, ಬಾದಾಮಿಯಲ್ಲಿ ೨ ಬಗೆ ಸಿಹಿ ಬಾದಾಮಿ, ಕಹಿ ಬಾದಾಮಿ
ಪೋಷಕಾಂಶಗಳು: ಅತ್ಯಧಿಕವಾದಂತಹ ಇ ಜೀವಸತ್ವ, ಅಧಿಕವಾದ ಮ್ಯಾಂಗನೀಸ್, ಬಯೋಟಿನ್, ತಾಮ್ರ, ಮೆಗ್ನೀಷಿಯಂ, ಫಾಸ್ಪರಸ್, ನಾರಿನಂಶ, ಸುಣ್ಣ, ಕಬ್ಬಿಣ, ಪ್ರೋಟೀನ್,
೧. ಬಾದಾಮಿ ಎಣ್ಣೆ: ಬಾದಾಮಿ ಎಣ್ಣೆಯನ್ನು ಸೇವನೆ ಮಾಡುವುದರಿಂದ ಮಲಬದ್ಧತೆ ನಿವಾರಣೆಯಾಗುತ್ತದೆ.
೨. ಕಿವಿನೋವು: ಬಾದಾಮಿ ಎಣ್ಣೆಯನ್ನು ೨-೨ ಹನಿಯಷ್ಟು ಎರಡೂ ಕಿವಿಗಳಿಗೆ ಹಾಕುವುದರಿಂದ ಕಿವಿನೋವು ನಿವಾರಣೆಯಾಗುತ್ತದೆ.
೩. ಮಕ್ಕಳ ಸ್ನಾನಕ್ಕೆ: ಮಕ್ಕಳಿಗೆ ಅಭ್ಯಂಗ ಸ್ನಾನ ಮಾಡಿಸುವಾಗ ಬಾದಾಮಿ ಎಣ್ಣೆಯನ್ನು ಹಚ್ಚಿ ಮಾಲೀಷು ಮಾಡಿ ಸ್ನಾನ ಮಾಡಿಸುವುದರಿಂದ ಚರ್ಮವು ಕಾಂತಿಯುತ ವಾಗುತ್ತದೆ, ನುಣುಪಾಗಿರುತ್ತದೆ. ಆರೋಗ್ಯಪೂರ್ಣ ತ್ವಚೆ ಉಂಟಾಗುತ್ತದೆ.
೪. ಎಣ್ಣೆಯನ್ನು ತೆಗೆದು ನಂತರದ ಚರಟವು ಅತಿ ಉಪಯುಕ್ತ ಅದನ್ನು ಹಿಟ್ಟಿನೊಡನೆ ಬೆರಸಿ ರೊಟ್ಟಿಯನ್ನು ಮಾಡಿ ಉಪಯೋಗಿಸಬಹುದಾಗಿದೆ. ಇದರಲ್ಲೂ ಪೌಷ್ಠಿಕಾಂಶಗಳು ಸಾಕಷ್ಠಿರುತ್ತದೆ.
೫. ಅಸ್ಥಿಕ್ಷಯೆ: ಬಾದಾಮಿಯಲ್ಲಿ ಹಸುವಿನ ಹಾಲಿಗಿಂತ ಅಧಿಕವಾದ ಕ್ಯಾಲ್ಸಿಯಂ ಇರುತ್ತದೆ. ಹಾಗಾಗಿ ಮಕ್ಕಳ ಬೆಳವಣಿಗೆಗೆ ಅತ್ಯಂತ ಸಹಕಾರಿ. ಮೂಳೆಗಳು ಗಟ್ಟಿಯಾಗುತ್ತದೆ. ಮಕ್ಕಳಲ್ಲಿ ಕಂಡುಬರುವ ಅಸ್ಥಿಕ್ಷಯದಂತಹ ಸಮಸ್ಯೆಗಳಿಗೆ ಕೂಡ ಉತ್ತಮ ಪರಿಹಾರ ಇದರಲ್ಲಿದೆ.
೬. ನರಗಳ ದೌರ್ಬಲ್ಯಕ್ಕೆ: ನರಗಳಿಗೆ ಸಂಬಂಧಪಟ್ಟಂತಹ ಸಮಸ್ಯೆಗಳಿದ್ದಾಗ ಬಾದಾಮಿಯನ್ನು ಯಾವುದೇ ರೂಪದಲ್ಲಿ ಸೇವಿಸಿದರೂ ನರಗಳಿಗೆ ಚೈತನ್ಯ ಬರುತ್ತದೆ.
೭. ಮಲಬದ್ಧತೆ: ಬಾದಾಮಿಯ ಜೊತೆಯಲ್ಲಿ ಅಂಜೂರ ಅಥವಾ ಒಣದ್ರಾಕ್ಷಿಯನ್ನು ಸೇರಿಸಿಕೊಂಡು ತಿನ್ನುತ್ತಾ ಬಂದರೆ ಮಲಬದ್ಧತೆ ನಿವಾರಣೆಯಾಗುತ್ತದೆ.
೮. ಸೌಂದರ್ಯವರ್ಧಕ: ಬಾದಾಮಿಯನ್ನು ಹಾಲಿನಲ್ಲಿ ತೇಯ್ದು, ಅದನ್ನು ಮುಖ ಹಾಗೂ ಕುತ್ತಿಗೆಯ ಭಾಗಕ್ಕೆ ಹಚ್ಚಿಕೊಳ್ಳಿ. ೨೦ ನಿಮಿಷದ ನಂತರ ಸ್ವಚ್ಛಮಾಡಿಕೊಳ್ಳಿ ಮುಖದ ಕಲೆಗಳು ಹೋಗುತ್ತದೆ. ಹಾಗೆಯೇ ಮುಖದ ಕಾಂತಿಯೂ ಇಮ್ಮಡಿಯಾಗುತ್ತದೆ.
೯. ಕೂದಲ ಬೆಳವಣಿಗೆಗೆ: ಬಾದಾಮಿ ಎಣ್ಣೆಯನ್ನು ತಲೆಯ ಬುಡದ ಭಾಗಕ್ಕೆ ಚೆನ್ನಾಗಿ ಹಚ್ಚಿ ಹಗುರವಾಗಿ ಮಾಲೀಷು ಮಾಡಿಕೊಳ್ಳಿ ಕೂದಲು ಕಾಂತಿಯುತವಾಗಿ, ಚೆನ್ನಾಗಿ ಬೆಳೆಯಲು ಸಹಕಾರಿಯಾಗುತ್ತದೆ.
ನಮ್ಮ ಪ್ರಕೃತಿ ನಮಗೆ ಬೇಕಾದುದನ್ನೆಲ್ಲಾ ಸಮೃದ್ಧವಾಗಿ ಕೊಟ್ಟಿದೆ. ಅದನ್ನು ಪೊಷಿಸಿ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ.

Leave a Reply

Your email address will not be published. Required fields are marked *

error: Content is protected !!