
ಉದಯವಾಹಿನಿ,ಅಫಜಲಪುರ: ತಾಲೂಕಿನ ಕರಜಗಿ ಗ್ರಾಮದ ಶ್ರೀ ವಿದ್ಯಾ ದರ್ಶನ ಸಂಸ್ಥೆಯಲ್ಲಿ ಡಾ: ಸರ್ವಪಲ್ಲಿ ರಾಧಾಕೃಷ್ಣನ್ ರವರ ಜಯಂತಿ ಹಾಗೂ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು ನಂತರ ಮಾತನಾಡಿದ ಸಂಸ್ಥೆಯ ಕಾರ್ಯದರ್ಶಿಯಾದ ಪ್ರೇಮಾ ಎಂ ನಾಯಕೋಡಿ ರವರು ಮಾತನಾಡಿ ಇಂದಿನ ಶಿಕ್ಷಕರೆಲ್ಲರೂ ಗುರುಗಳಾಗಿ ಪರಿವರ್ತನೆಯಾದರೆ ಭಾರತ ಮತ್ತೇ ವಿಶ್ವ ಗುರುವಾಗುತ್ತದೆ.ಗುರು ಎಂದರೆ ಜ್ಞಾನ, ಗುರು ಎಂದರೆ ಬೆಳಕು, ಗುರು ಎಂದರೆ ಜೀವನ ರೂಪಿಸುವ ಶಿಲ್ಪಿ ಶಿಲ್ಪಿ ಒಂದು ಕಲ್ಲನ್ನು ಕಟೆದು ಸುಂದರ ವಿಗ್ರಹ ಮಾಡುತ್ತಾನೆ.ಕಲ್ಲಿನಂತಿರುವ ಮಕ್ಕಳನ್ನು ಸುಂದರ ಮೂರ್ತಿಯನ್ನಾಗಿ ರೂಪಿಸುವ ಶಕ್ತಿ ಗುರುವಿನಲ್ಲಿರುತ್ತದೆ. ವಿದ್ಯಾರ್ಥಿಗಳಿಗೆ ಕೇವಲ ನಾಲ್ಕು ಅಕ್ಷರ ಕಲಿಸಿದರೆ ಸಾಲದು.ಭವ್ಯ ಭಾರತದ ಸತ್ಪ್ರಜೆಯನ್ನಾಗಿ ರೂಪಿಸುವವರೇ ನಿಜವಾದ ಗುರು ಒಂದು ಕಾಲದಲ್ಲಿ ವಿಶ್ವಕ್ಕೆ ಜ್ಞಾನ ನೀಡಿದ ಕೀರ್ತಿ ನಮ್ಮ ದೇಶಕ್ಕಿದೆ.ಆದರೆ ಇಂದು ನಮ್ಮ ದೇಶದವರು ವಿದ್ಯೆ ಕಲಿಯಲು ಬೇರೆ ದೇಶಕ್ಕೆ ಹೋಗುತ್ತಾರೆ ಅನ್ಯ ದೇಶಗಳಿಗೆ ವಿದ್ಯೆ ಕಲಿಸಲು ಹೋಗಬೇಕೇ ವಿನಹ ವಿದ್ಯೆ ಕಲಿಯಲು ಅಲ್ಲ ಸಾಧಕರ ಮುಂದೆ ಗುರಿ ಇರಬೇಕು ಹಿಂದೆ ಗುರು ಇರಬೇಕು ಎಂಬ ಮಾತಿದೆ.ಗುರಿ ತಲುಪಿಸಲು ಗುರುವಿನ ಕರುಣೆ ಬೇಕು ನಮ್ಮ ದೇಶದಲ್ಲಿ ಗುರುವಿಗೆ ದೊಡ್ಡ ಸ್ಥಾನ ನೀಡಲಾಗಿದೆ.ಮಕ್ಕಳು ಶಿಕ್ಷಕರ ಮಾತೇ ನಿಜ ಎಂದು ನಂಬುತ್ತಾರೆ ಶಿಕ್ಷಕರು ರಾಷ್ಟ್ರ ರಕ್ಷಕರಾಗಬೇಕು ಇದಕ್ಕಾಗಿಯೇ ಶಿಕ್ಷಕರನ್ನು ಗುರು ಎಂದು ಕರೆಯುವುದು.ಭವ್ಯ ರಾಷ್ಟ್ರ ನಿರ್ಮಾಣ ಗುರುವಿನ ಕೈಯಲ್ಲಿದೆ ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಮಂಜುನಾಥ ನಾಯಕೋಡಿ ಸಹಶಿಕ್ಷಕರಾದ ಅಶ್ಪಾಕ್ ಬಾಸಗಿ ವಾಣಿಶ್ರೀ ಪತ್ತಾರ್ ಮೀನಾಕ್ಷಿ ಕೋಳಿ ಅಶ್ವಿನಿ ತೇಲಿ ರೇಖಾ ರಾಮನಗರ ಐಶ್ವರ್ಯ ಜಿಡ್ಡಗಿ ರವಿಕಾಂತ ಶಿವೂರ ಸೈಫನ್ ಅಳ್ಳಗಿ ಮಹದೇವ ಬಳಗಾರಿ ಸೇರಿದಂತೆ ವಿದ್ಯಾರ್ಥಿಗಳು ಭಾಗಿಯಾಗಿದ್ದರು.
