ಉದಯವಾಹಿನಿ,ದೇವರಹಿಪ್ಪರಗಿ : ಪಟ್ಟಣದ 110/11ಕೆ.ವ್ಹಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ 1*10ಎಂವಿಎ ಸಾಮರ್ಥ್ಯದ ಪರಿವರ್ತಕ ಬದಲು 1*20ಎಂವಿಎ ಸಾಮರ್ಥ್ಯದ ಪರಿವರ್ತಕ ಅಳವಡಿಸುವ ಕಾಮಗಾರಿಯನ್ನು ದಿ.07-09-2023 ರಂದು ಬೆಳಿಗ್ಗೆ 7-00 ಗಂಟೆಯಿಂದ ದಿ.09-09-2023ರ ಸಾಯಂಕಾಲ 7-00 ಗಂಟೆಯ ವರೆಗೆ ದೇವರಹಿಪ್ಪರಗಿ 11ಕೆ.ವಿ ಬ್ಯಾಂಕ್ ನಂ-2 ಮೇಲೆ ಎಲ್ ಸಿ ತೆಗೆದುಕೋಳ್ಳುತ್ತಿರುವದರಿಂದ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಾದ ದೇವರಹಿಪ್ಪರಗಿ, ಪಡಗಾನೂರ, ದೇವೂರ,ಮಣ್ಣೂರ, ಇಂಗಳಗಿ, ಹರನಾಳ,ಇತಿಹಾಳ, ಕನ್ನೋಳ್ಳಿ ಹಾಗೂ ಬಮ್ಮನಜೋಗಿ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಸದರಿ ಗ್ರಾಮದ ಎಲ್ಲಾ ಗ್ರಾಹಕರು ಹಾಗೂ ಸಾರ್ವಜನಿಕರು ಸಹಕರಿಸಬೇಕೆಂದು ಹೆಸ್ಕಾಂನ ಸಹಾಯಕ ಅಭಿಯಂತರ ಅಧಿಕಾರಿಗಳಾದ ವಿಜಯಕುಮಾರ ಹವಾಲ್ದಾರ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
