
ಉದಯವಾಹಿನಿ ಕುಶಾಲನಗರ:- ಸುಂಟಿಕೊಪ್ಪ ಸಮೀಪದ ಕೆದಕಲ್ ನಲ್ಲಿ ಈ ಘಟನೆ ಸಂಭವಿಸಿದ್ದು ಆನೆ ಕಾರ್ಯಚರಣೆ ತಂಡದ (ಆರ್ ಆರ್ ಟಿ) ಗಿರೀಶ್ 35 ಮೃತಪಟ್ಟ ದುರ್ದೈವಿ. ಬೆಳಿಗ್ಗೆ 9ರ ಸುಮಾರಿಗೆ ಕೆದಕಲ್ ನಲ್ಲಿ ಮುರುಗೇಶ್ ಎಂಬುವರು ಬೈಕ್ ನಲ್ಲಿ ಬರುವ ಆನೆ ರಸ್ತೆಯಲ್ಲಿ ಎದುರಾಗಿ ದಾಳಿ ನಡೆಸಿದೆ ಕೂದಲೆಳೆ ಅಂತರದಲ್ಲಿ ಪ್ರಾಣಪಾಯದಿಂದ ಮುರುಗೇಶ್ ಪಾರಾಗಿದ್ದಾರೆ.
ಇವರು ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಪಡೆದು ಬಿಡುಗಡೆಗೊಂಡಿದ್ದಾರೆ. ಆನೆ ದಾಳಿಯ ವಿಚಾರ ಅರಣ್ಯ ಇಲಾಖೆಗೆ ತಿಳಿದ ತಕ್ಷಣ ಆನೆ ಓಡಿಸುವ ಕಾರ್ಯಚರಣೆಗೆ ಮುಂದಾಗಿದೆ ಈ ಹಿನ್ನಲೆ ಆರ್ ಆರ್ ಟಿ ಹಾಗೂ ಇ ಟಿ ಎಫ್ ಪಡೆಯ 15 ಮಂದಿ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಕೆದಕಲ್ ನಿಂದ ಅರ್ಧ ಕಿಲೋಮೀಟರ್ ದೂರದ ದೇವಗಿರಿ ತೋಟದಲ್ಲಿ ಆನೆ ಓಡಿಸುವ ಕಾರ್ಯಚರಣೆ ಕೈಗೆತ್ತಿಕೊಂಡಿದ್ದಾರೆ. ತೋಟ ಸೇರಿದ ಆನೆಯನ್ನು ಸಿಬ್ಬಂದಿಗಳು ಪತ್ತೆ ಹಚ್ಚಿ ಕೇ.ಕೇ. ಹಾಕಿ ಪಟಾಕಿ ಸಿಡಿಸಿ ಓಡಿಸುವ ಪ್ರಯತ್ನ ಮಾಡಿ ಕಾಡಾನೆ ಅರಣ್ಯದತ್ತ ಓಡುತ್ತಿತ್ತು ಆದರೆ ಓಡುತ್ತಿದ್ದ ಆನೆ ಒಮ್ಮೆಲೆ ಸಿಬ್ಬಂದಿ ಮೇಲೆ ದಾಳಿಗೆ ಮುಂದಾಗಿದೆ ಉಳಿದವರು ಓಡಿ ಹೋಗಿ ಪ್ರಾಣ ಉಳಿಸಿಕೊಂಡಿದ್ದಾರೆ ಆದರೆ ಗಿರೀಶ್ ಆನೆ ದಾಳಿಗೆ ಸಿಲುಕಿದ್ದಾರೆ. ಆಗ ಆನೆಯೂ ಸೊಂಟಲಿನಿಂದ ಎತ್ತಿ ಬಿಸಾಡಿ ಎದೆ ಹಾಗೂ ದೇಹದ ಮೇಲೆ ತುಳಿದು ಸ್ಥಳದಿಂದ ಮರೆಯಾಗಿದೆ. ಪರಿಣಾಮ ಗಿರೀಶ್ ಗಂಭೀರ ಗಾಯಗೊಂಡಿದ್ದಾರೆ ತಕ್ಷಣ ಸಿಬ್ಬಂದಿಗಳು ಅವರನ್ನು ಮಡಿಕೇರಿ ಆಸ್ಪತ್ರೆಗೆ ಕರೆ ತಂದು ಚಿಕಿತ್ಸೆಗೆ ದಾಖಲಿಸಿದ್ದಾರೆ. ಗಂಭೀರಗೊಂಡಿದ್ದ ಗಾಯಾಳುವಿಗೆ ಚಿಕಿತ್ಸೆ ಕೊಟ್ಟರು ಸ್ಪಂದಿಸದೆ ಮಧ್ಯಾಹ್ನ 2 ಗಂಟೆಗೆ ಆಸು ನೀಡಿದ್ದಾರೆ. ಮೃತ ಗಿರೀಶ್ ಮೂಲತಹ ಮಾಲ್ತಾರೆ ಅಂಚೆ ತಿಟ್ಟು ಹಾಡಿಯ ನಿವಾಸಿಯಾಗಿದ್ದು ಕಳೆದ ಎಂಟು ವರ್ಷಗಳಿಂದ ಕುಶಾಲನಗರ ಅರಣ್ಯ ವಲಯ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.
ಮೃತರ ತಂದೆ ತಾಯಿ ಮೊದಲೇ ಮೃತಪಟ್ಟಿದ್ದು ತಂಗಿ ಮಾತ್ರ ಇದ್ದಾರೆ ಜಿಲ್ಲಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಸ್ವಗ್ರಾಮದಲ್ಲಿ ಇಂದು ಅಂತ್ಯಕ್ರಿಯೆ ನಡೆಯಿತು. ಘಟನೆ ಸಂಬಂಧ ಉಪವಲಯ ಅರಣ್ಯಾಧಿಕಾರಿ ಎ.ಟಿ. ಪೂವಯ್ಯ ಕಾರ್ಯಾಚರಣೆ ಸಂದರ್ಭ ಕೈಗೊಳ್ಳಬೇಕಾದ ಕ್ರಮ ಕೈಗೊಳ್ಳಲಾಗಿದೆ ಆದರೆ ಆನೆ ಕಾಡಿನ ಓಡಿ ವಾಪಸ್ ಆಗಿ ದಾಳಿ ಮಾಡಿದೆ ಎಂದರು. ಮೃತ ಗಿರೀಶನ ಜೇಬಿನಲ್ಲಿಯೂ ಪಟಾಕಿ ಇತ್ತು. ಅಗತ್ಯ ಆಯುಧಗಳಿದ್ದವು ಎಂದು ತಿಳಿಸಿದ್ದಾರೆ (ಘಟನೆ ಸಂಭಂದ ಮಡಿಕೇರಿ ಕ್ಷೇತ್ರದ ಶಾಸಕರಾದ ಡಾ. ಮಂತರ್ ಗೌಡ ಜಿಲ್ಲಾ ಆಸ್ಪತ್ರೆಯ ಶವಗಾರಕ್ಕೆ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು ಈ ಸಂದರ್ಭ ಕುಟುಂಬದ ಸದಸ್ಯರಿಗೆ ಸಾಂತ್ವಾನ ತಿಳಿಸಿ ವೈಯಕ್ತಿಕವಾಗಿ ಧನ ಸಹಾಯ ಮಾಡಿದರು ಪರಿಹಾರದ ಮೊತ್ತವನ್ನ 15 ಲಕ್ಷದಿಂದ ಹೆಚ್ಚಳ ಮಾಡಲು ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿ ಗಳಿಗೆ ಸೂಚಿಸಿದರು)
