
ಉದಯವಾಹಿನಿ,ದೇವದುರ್ಗ:- ರಾಯಚೂರು ಜಿಲ್ಲೆಯು ಕಲ್ಯಾಣ ಕರ್ನಾಟಕದಲ್ಲಿ ಅತ್ಯಂತ ಹಿಂದುಳಿದ ಜಿಲ್ಲೆಯಾಗಿದ್ದು ಆರ್ಥಿಕ ಸಾಮಾಜಿಕ ಶೈಕ್ಷಣಿಕ ವಿವಿಧ ರಂಗಗಳಲ್ಲಿ ಹಿಂದುಳಿದಿದ್ದು ರಾಯಚೂರು ಜಿಲ್ಲೆಗೆ ಏಮ್ಸ್ ಸಂಸ್ಥೆ ಸ್ಥಾಪಿಸುವಂತೆ ಜಿಲ್ಲಾ ರಾಯಚೂರು ಏಮ್ಸ್ ಹೋರಾಟ ಸಮಿತಿಯಿಂದ ಮಹಾತ್ಮಾ ಗಾಂಧಿ ಕ್ರೀಡಾಂಗಣದಲ್ಲಿ 476ನೇ ಧರಣಿಯು ಯಶಸ್ವಿಯಾಗಿ ಮುನ್ನಡೆಯುತ್ತಿದ್ದು ನಮ್ಮ ರಾಯಚೂರು ಜಿಲ್ಲೆಗೆ ಏಮ್ಸ್ ಸಂಸ್ಥೆ ಸ್ಥಾಪನೆ ಮಾಡಬೇಕೆಂದು ನಮ್ಮ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಈಗಾಗಲೇ ಕೇಂದ್ರ ಸರಕಾರಕ್ಕೆ ಶಿಫಾರಸ್ಪತ್ರ ಕಳಿಸಿದ್ದು ಇದರ ಜೊತೆಗೆ ನಮ್ಮ ರಾಯಚೂರು ಜಿಲ್ಲೆಯ ಎಲ್ಲಾ ಸಚಿವರು ಸಂಸದರು ಶಾಸಕರು ಹೋರಾಟ ಸಂಚಾಲ ಸಮಿತಿಯ ಸದಸ್ಯರು ಕಲ್ಯಾಣ ಕರ್ನಾಟಕದ ವಿವಿಧ ಜಿಲ್ಲೆಯ ಹೋರಾಟಗಾರರು ಕೇಂದ್ರ ಸರ್ಕಾರಕ್ಕೆ ಭೇಟಿ ನೀಡಿ ಜಿಲ್ಲೆಯಿಂದ ನಿಯೋಗವನ್ನು ಕೇಂದ್ರ ಸರ್ಕಾರದ ಸಂಬಂಧಪಟ್ಟ ಸಚಿವರುಗಳಿಗೆ ಭೇಟಿ ನೀಡಿದ್ದು ಇದಕ್ಕೆ ಸಾಕ್ಷಿಯಾಗಿದೆ ಕಾರಣ ಹೋರಾಟಗಾರರ ಬೇಡಿಕೆಗಳಿಗೆ ಕೂಡಲೇ ಸ್ಪಂದಿಸಿ ತಾವು ನಮ್ಮ ರಾಯಚೂರು ಜಿಲ್ಲೆಗೆ ಏಮ್ಸ್ ಸಂಸ್ಥೆ ಮಂಜೂರು ಮಾಡಬೇಕೆಂದು ದೇವದುರ್ಗ ತಾಲೂಕ ಕುಳುವ ಒಕ್ಕೂಟ ಸಂಘದ ಸರ್ವ ಸದಸ್ಯರು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ ಈ ಸಂದರ್ಭದಲ್ಲಿ ರಾಮಣ್ಣ ಅಧ್ಯಕ್ಷರು ಕುಳುವ ಒಕ್ಕೂಟ ಹಾಗೂ ಚನ್ನಬಸವ ಭಜಂತ್ರಿ ಕಾರ್ಯದರ್ಶಿ ರಂಗಪ್ಪ ಕೋತಿಗುಡ್ಡ ಹನುಮಂತಪ್ಪ ಮನ್ನಾಪುರ್ ಅಧ್ಯಕ್ಷರು ಜಿಲ್ಲಾ ಮಾದಿಗ ಹೋರಾಟ ಮೀಸಲಾತಿ ಸಮಿತಿ ಶರಣಗೌಡ ಸುಂಕೇಶ್ವರ ಹಾಳ್ ಯಲ್ಲನ ಗೌಡ ಕೆ ಇರಬಗೀರ ಅಧ್ಯಕ್ಷರು ಜಯ ಕರ್ನಾಟಕ ಸಂಘ ತಾಲೂಕ್ ಘಟಕ ದೇವದುರ್ಗ ರಂಗನಾಥ ನಾಗರಾಜ್ ಮಲ್ಲಿಕಾರ್ಜುನ್ ವಿಜಯಕುಮಾರ್ ದೇವರಾಜ್ ಸಾಬಣ್ಣ ಲಿಂಗಪ್ಪ ಭಜಂತ್ರಿ ಇಕ್ಬಾಲ್ ಸಾಬ್ ಅರಕೆರ ಸೇರಿದಂತೆ ಇತರ ಸಂಘ ಸಂಸ್ಥೆಯ ಮುಖಂಡರು ಇದರಲ್ಲಿ ಭಾಗವಹಿಸಿದ್ದರು
