
ಉದಯವಾಹಿನಿ,ಚಿಂಚೋಳಿ: ತಾಲ್ಲೂಕಿನಾದ್ಯಂತ ಕಳೆದ ಮೂರ್ನಾಲ್ಕು ದಿನಗಳಿಂದ ಧಾರಾಕಾರವಾಗಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ರೈತರು ಬೆಳೆದ ಕಬ್ಬು,ಹೆಸರು,ಉದ್ದು,ಸೋಯಾಬಿನ್ ಹಾನಿಯಾಗಿ ರೈತರು ಕಂಗಾಲಾಗಿದ್ದಾರೆ.ತಾಲ್ಲೂಕಿನ ಅಣವಾರ,ಪೋಲಕಪಳ್ಳಿ,ಚಿಮ್ಮನಚೋಡ,ಐನೋ ಳ್ಳಿ,ಹಸರಗುಂಡಗಿ,ಸುಲೇಪೇಟ,ನಿಡಗುಂ ದಾ,ಕನಕಪುರ,ಶಾಲೆ ಬೀರನಳ್ಳಿ,ನಾಗಯಿದ್ಲಾಯಿ ಅನೇಕ ಗ್ರಾಮಗಳಲ್ಲಿ ಮಳೆಯಿಂದ ರೈತರು ಬೆಳೆದ ಬೆಳೆಗಳು ನಾಶವಾದರೆ ಕೆಲಕಡೆ ದೇಗಲಮಡಿ,ಎಂಪಳ್ಳಿ,ಪಟಪಳ್ಳಿ,ಚಿಮ್ಮಾ ಯಿದ್ಲಾಯಿ,ಐಪಿ ಹೋಸಳ್ಳಿ,ಚಿಮ್ಮನಚೋಡ,ಚಿಂಚೋಳಿ,ಗಂ ಗನಪಳ್ಳಿ, ಕರ್ಚಖೇಡ,ಗರಗಪಳ್ಳಿ, ಭಕ್ತಂಪಳ್ಳಿ, ಪೋಲಕಪಳ್ಳಿ, ಅಣವಾರ,ಮುಲ್ಲಾಮಾರಿ ನದಿ ಹಾಗೂ ನಾಲಾಗಳ ದಂಡೆಯಲ್ಲಿರುವ ರೈತರ ಜಮೀನುಗಳಲ್ಲಿ ನದಿಯ ನಾಲಾಗಳ ನೀರು ಹರಿದು ಬೆಳೆಗಳು ನಾಶವಾಗಿವೆ. ಅಣವಾರ ಗ್ರಾಮದ ಬಸವರಾಜ ಮಂಗಲಗಿ ಎಂಬುವರ ರೈತರ ಹೊಲದಲ್ಲಿ ಬಿರುಗಾಳಿ ಸಮೇತ ಧಾರಾಕಾರವಾಗಿ ಸುರಿದ ಮಳೆಯಿಂದ ಕಬ್ಬು ಬೆಳೆ ಸಂಪೂರ್ಣವಾಗಿ ಬಾಗಿ ನೆಲಸಮವಾಗಿದೆ ಇದರಿಂದ ರೈತನಿಗೆ ತುಂಬಾ ನಷ್ಟುವಾಗಿದ್ದು ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆ ಸಮೀಕ್ಷೆ ನಡೆಸಿ ಸರ್ಕಾರದಿಂದ ಪರಿಹಾರ ನೀಡಬೇಕು ಎಂದು ಬಸವರಾಜ ಮಂಗಲಗಿ ಅಣವಾರ ಆಗ್ರಹಿಸಿದರು.
ಕಬ್ಬು ಬೆಳೆಗಾರರು ರೈತರು ಕಬ್ಬು ನೆಲಸಮವಾಗಿದರೆ ಗ್ರಾಮ ಪಂಚಾಯಿತಿ ಸಂಬಂಧಿಸಿದ ಕಂದಾಯ ಗ್ರಾಮ ಲೆಕ್ಕಿಗ ಅಧಿಕಾರಿಗಳಿಗೆ ಮಾಹಿತಿ ನೀಡಿ ಸಮೀಕ್ಷೆ ಮಾಡಿಸಬೇಕು.
ಉದ್ದು,ಹೆಸರು,ತೊಗರಿ ಬೇಳೆ,ಸೋಯಾಬಿನ್ ಇತರೆ ಬೆಳೆಗಳು ನಾಶವಾದ ರೈತರು ವಿಮೆ ಕಂಪನಿಯ ದೂರವಾಣಿ ಸಂಖ್ಯೆಗೆ ದೂರು ದಾಖಲಿಸಬೇಕು,ವಿಮೆ ಕಟ್ಟದ ರೈತರಿಗೆ ಸರ್ಕಾರದ ಆದೇಶದ ಮೇರೆಗೆ ಸಮೀಕ್ಷೆ ನಡೆಸಿ ಬೆಳೆ ಪರಿಹಾರ ನೀಡಲಾಗುವುದು.
ಮಳೆ ವಿವರ:- ತಾಲ್ಲೂಕಿನಾದ್ಯಂತ ಸುರಿದ ಮಳೆ 1)ಚಿಂಚೋಳಿ 53.5ಮಿಮೀ,2)ಕುಂಚಾವರಂ30.3ಮಿಮೀ,3) ನಿಡಗುಂದಾ 29.0ಮಿಮೀ,4)ಚಿಮ್ಮನಚೋಡ 60.2ಮಿಮೀ,5)ಐನಾಪೂರ 20.5ಮಿಮೀ,6)ಸುಲೇಪೇಟ 45.6ಮಿಮೀ ಮಳೆ ಆಗಿದೆ:– ವೀರಶೇಟ್ಟಿ ರಾಠೋಡ್ ಸಹಾಯಕ ಕೃಷಿ ನಿರ್ದೇಶಕ ಚಿಂಚೋಳಿ.
ಚಂದ್ರಂಪಳ್ಳಿ ಜಲಾಶಯ ನೀರಿನಮಟ್ಟ ಚಿಂಚೋಳಿ:ತಾಲ್ಲೂಕಿನ ಚಂದ್ರಂಪಳ್ಳಿ ಜಲಾಶಯವು ಕಳುಹಿಸಿದ್ದೇನೆ ದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಜಲಾಶಯ ಮಟ್ಟ 1618ಅಡಿವಿದ್ದು,ಇಂದಿನ ಮಟ್ಟ 1612 ಅಡಿವಿದೆ,ಚಂದ್ರಂಪಳ್ಳಿ ಜಲಾಶಯ ಒಳಹರಿವು 5550 ಕ್ಯೂಸೇಕ್,ಹೊರಹರಿವು 5950ಕ್ಯೂಸೇಕ್ ನೀರು ಸರನಾಲಾ ಮೂಲಕ ಮುಲ್ಲಾಮಾರಿ ನದಿಗೆ ಹರಿಬಿಡಲಾಗುತ್ತಿದೆ:– ಚೇತನ ಕಳಸ್ಕರ ಎಇಇ ಚಂದ್ರಂಪಳ್ಳಿ ಜಲಾಶಯ.
