
ಉದಯವಾಹಿನಿ,ಶಿಡ್ಲಘಟ್ಟ: ಒಂದು ಉತ್ತಮ ಸಮಾಜ ನಿರ್ಮಾಣ ಮಾಡುವುದರಲ್ಲಿ ಶಿಕ್ಷಕರ ಪಾತ್ರ ಅತ್ಯಮೂಲ್ಯವಾದದ್ದು ತಮ್ಮ ಜೀವನದ ದುದ್ದಕ್ಕೂ ಪ್ರತಿಯೊಬ್ಬರಿಗೂ ಶಿಕ್ಷಣದ ಹರಿವು ಮೂಡಿಸಿ ಜ್ಞಾನವನ್ನು ನೀಡುವ ಒಬ್ಬ ಶಿಕ್ಷಕ ನಮಗೆ ದೇವರು ಕೊಟ್ಟ ವರ ಎಂದು ಶಾಸಕ ಬಿ.ಎನ್ ರವಿಕುಮಾರ್ ಅಭಿಪ್ರಾಯಪಟ್ಟರು.ತಾಲೂಕಿನ ಹಂಡಿಗನಾಳ ಬಾಲಾಜಿ ಕನ್ವೆನ್ಷನ್ ಹಾಲ್ ನಲ್ಲಿ ಮಂಗಳವಾರ ನಾಡ ಹಬ್ಬಗಳ ಆಚರಣ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಭಾರತ ರತ್ನ ಡಾ. ಎಸ್ ರಾಧಾಕೃಷ್ಣನ್ ರವರ ಜನ್ಮದಿನಾಚರಣೆ ಹಾಗೂ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ತಾಲೂಕಿನಲ್ಲಿ ಉತ್ತಮ ಶಿಕ್ಷಣ ನೀಡುವ ಸಲುವಾಗಿ ನಿಮ್ಮ ಸಹಕಾರ ಅಗತ್ಯ , ಏನು ಅರಿಯದ ಮಕ್ಕಳನ್ನು ಉತ್ತಮ ಪ್ರಜೆಗಳಾಗಿ ರೂಪಿಸುವವರು ಗುರುಗಳು ಆದ್ದರಿಂದ ತಾವು ನಿಮ್ಮ ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳಿಗೆ ಹೆಚ್ಚು ಒತ್ತು ಕೊಟ್ಟು ಶಾಲೆಗಳನ್ನು ಉಳಿಸುವ ಪ್ರಯತ್ನ ಮಾಡಬೇಕು ಅದಕ್ಕೆ ಸಂಪೂರ್ಣ ಬೆಂಬಲ ನಾನು ನೀಡುತ್ತೇನೆ ಎಂದರು.
ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎಂಬುದೊಂದು ನಾನ್ನುಡಿಯಂತೆ ,ಮಕ್ಕಳಿಗೆ ವಿದ್ಯೆ ಹೇಳಿ ಅವರನ್ನು ಭವಿಷ್ಯದಲ್ಲಿ ಉತ್ತಮ ನಾಗರೀಕರಾಗುವಂತೆ ಮಾಡುವವರೇ ಗುರುಗಳು ಎಂದರು.
ಮುಖ್ಯ ಭಾಷಣಕಾರರಾಗಿ ಗುಡಿಬಂಡೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ನರೇಶ್ ಮಾತನಾಡಿ ಗುರುವು ಶಿಷ್ಯನ ಭವಿಷ್ಯವನ್ನು ರೂಪಿಸುವ ರೂವಾರಿಯಾಗಿದ್ದಾನೆ. ಶಿಕ್ಷಣವೆ ಇಲ್ಲದ ಒಂದು ಜನಾಂಗವನ್ನು ಆರೋಗ್ಯ ಪೂರ್ಣ ಸಮಾಜದತ್ತ ನಡೆಸುವಲ್ಲಿ ಶಿಕ್ಷಕನ ಪಾತ್ರ ಅತಿ ದೊಡ್ಡದು. ಏನು ಅರಿಯದ ಮುಗ್ಧ ಮನಸ್ಸುಗಳಲ್ಲಿ ಅಕ್ಷರ ಎಂಬ ಬೀಜ ಬಿತ್ತುವ ಮೂಲಕ ಮಕ್ಕಳ ಭವಿಷ್ಯಕ್ಕೆ ಭದ್ರ. ಬುನಾದಿ ಹಾಕಿ ಸುಂದರವಾದ ವ್ಯಕ್ತಿಗಳ ಮೂಲಕ ನಾಡು ಕಟ್ಟುವ ಅದ್ಭುತ ಶಿಲ್ಪಿಗಳು ಶಿಕ್ಷಕರು ಎಂದು ಸರ್ವೇಪಲ್ಲಿ ರಾಧಾಕೃಷ್ಣನ್ ನಂಬಿದ್ದರು. ಶಿಕ್ಷಕನಾಗಿ ಭಾರತದ ಕಂಡ ಅಪರೂಪದ ತತ್ವಶಾಸ್ತ್ರಜ್ಞನಾಗಿ, ಎರಡನೆಯ ರಾಷ್ಟ್ರಪತಿಯಾಗಿದ್ದ ಡಾಕ್ಟರ್ ಸರ್ವೆಪಲ್ಲಿ ರಾಧಾಕೃಷ್ಣನ್ ರವರ ಜನ್ಮದಿನವನ್ನು ಶಿಕ್ಷಕರ ದಿನವೆಂದು ಆಚರಿಸಬೇಕೆಂದು ರಾಧಾಕೃಷ್ಣನ್ ರ ಇಚ್ಛೆ. ಕಾರಣ ಅವರೊಬ್ಬ ಅತ್ಯುತ್ತಮ ಶಿಕ್ಷಕರಾಗಿದ್ದರು. ಆದುದರಿಂದಲೇ ಇಂದು ಅವರ ಜನ್ಮ ದಿನಾಚರಣೆಯನ್ನು ಶಿಕ್ಷಕರಾದ ನಾವು ನೀವು ಬಹಳ ಅಚ್ಚುಕಟ್ಟಾಗಿ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಶಾಸಕ ರವಿಕುಮಾರ್ ಹಾಗೂ ಗಣ್ಯರಿಂದ ನಿವೃತ್ತ ಶಿಕ್ಷಕರಿಗೆ ಸನ್ಮಾನಿಸಲಾಯಿತು. ನಂತರ ರಾಜ್ಯಮಟ್ಟದ ಶಿಕ್ಷಕರ ಕಲಾತಂಡ ದಿಂದ ನೃತ್ಯವನ್ನು ಏರ್ಪಡಿಸಲಾಗಿತ್ತು.
ತಹಶೀಲ್ದಾರ್ ಬಿ ಎನ್ ಸ್ವಾಮಿ,ಇ ಓ ಮುನಿರಾಜು, ಕ್ಷೇತ್ರ ಶಿಕ್ಷಣಾಧಿಕಾರಿ ಸಿಎ ನರೇಂದ್ರ ಕುಮಾರ್ ಬಿಸಿಯೂಟ ನಿರ್ದೇಶಕ ಆಂಜನೇಯ ಖಾಸಗಿ ಅನುದಾನ ರಹಿತ ಶಾಲೆಗಳ ಒಕ್ಕೂಟದ ಅಧ್ಯಕ್ಷ ವಿಸ್ಡಮ್ ನಾಗರಾಜ್, ಸ.ನೌ. ಸಂ ಅಧ್ಯಕ್ಷ ಸುಬ್ಬಾರೆಡ್ಡಿ ,ಪ್ರಾ.ಶಾ.ಶಿ.ಸಂ ಅಧ್ಯಕ್ಷ ಸಿಎಂ ಮುನಿರಾಜು, ಮುಖಂಡರಾದ ಬಂಕ್ ಮುನಿಯಪ್ಪ , ಸದಾಶಿವ , ತಾದುರು ರಘು ,ಇಸಿಓ ಭಾಸ್ಕರ್ ಗೌಡ , ಪರಿಮಳ, ಚಂದ್ರಕಲಾ, ಬಿಆರ್ಸಿ ಕೋ ಆರ್ಡಿನೇಟರ್ ತ್ಯಾಗರಾಜು, ಬಿ ಆರ್ ಪಿ ಮಂಜುನಾಥ್, ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಶಿಕ್ಷಕರು ಪೋಷಕರು ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಜರಿದ್ದರು.
