ಉದಯವಾಹಿನಿ, ಐಷಾರಾಮಿ ವಿಹಾರ ನೌಕೆಯನ್ನು ಖರೀದಿಸಲು ಮತ್ತು ಐಷಾರಾಮಿ ಜೀವನಶೈಲಿಗೆ ಹಣಕಾಸು ಒದಗಿಸಲು ಬಳಸಲಾದ 85 ಮಿಲಿಯನ್ ಡಾಲರ್ ವಂಚನೆ ಪ್ರಕರಣದಲ್ಲಿ ಭಾರತೀಯ ಮೂಲದ ಮಿಯಾಮಿ ರಿಯಲ್ ಎಸ್ಟೇಟ್ ಡೆವಲಪರ್ ರಿಷಿ ಕಪೂರ್ ಅವರು ಇದೀಗ ಸಿಲುಕಿ ಹಾಕಿಕೊಂಡಿದ್ದು, ಇವರ ವಿರುದ್ಧ ಫೆಡರಲ್ ನ್ಯಾಯಾಲಯದಲ್ಲಿ ಆರೋಪ ಹೊರಿಸಲಾಗಿದೆ.
41 ವರ್ಷದ ರಿಷಿ ಕಪೂರ್ ವಿರುದ್ಧ ಫ್ಲೋರಿಡಾದಲ್ಲಿ ವೈರ್ ಫ್ರಾಡ್, ಹಣ ವರ್ಗಾವಣೆ, ಬ್ಯಾಂಕ್ ವಂಚನೆ, ತೆರಿಗೆ ವಂಚನೆ, ತೆರಿಗೆ ರಿಟರ್ನ್ಸ್ ಸಲ್ಲಿಸಲು ವಿಫಲತೆ ಮತ್ತು ಯುನೈಟೆಡ್ ಸ್ಟೇಟ್ಸ್ ಅನ್ನು ವಂಚಿಸಲು ಪಿತೂರಿ ಸೇರಿದಂತೆ ಹಲವಾರು ಕ್ರಿಮಿನಲ್ ಆರೋಪಗಳನ್ನು ಹೊರಿಸಲಾಯಿತು. ಮಿಯಾಮಿಯ ಪ್ರಾಸಿಕ್ಯೂಟರ್‌ಗಳು ಈ ತಿಂಗಳ ಆರಂಭದಲ್ಲಿ ದೋಷಾರೋಪಣೆಯನ್ನು ಸಹ ಬಹಿರಂಗಪಡಿಸಿದರು.
ಇದೇ ಮಾರ್ಚ್ 6ನೇ ತಾರೀಖು ರಿಷಿ ಬಂಧನ!
ರಿಷಿ ಕಪೂರ್ ಅವರನ್ನು ಮಾರ್ಚ್ 6ನೇ ತಾರೀಖು ಫೋರ್ಟ್ ಲಾಡರ್‌ಡೇಲ್‌ನ ಹೋಟೆಲ್‌ನಲ್ಲಿ ಬಂಧಿಸಲಾಯಿತು ಮತ್ತು ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಯಿತು. ಅವರು ಬೇರೆ ದೇಶಕ್ಕೆ ಓಡಿ ಹೋಗುವ ಪ್ರಯತ್ನದಲ್ಲಿದ್ದರು ಎಂದು ಪ್ರಾಸಿಕ್ಯೂಟರ್‌ಗಳು ನ್ಯಾಯಾಲಯಕ್ಕೆ ತಿಳಿಸಿದರು ಮತ್ತು ನ್ಯಾಯಾಧೀಶರು ಅವರ ಜಾಮೀನು ಕೋರಿಕೆಯನ್ನು ಸಹ ನಿರಾಕರಿಸಿದರು.
