ಉದಯವಾಹಿನಿ, ಟೆಹ್ರಾನ್: ರಷ್ಯಾದಿಂದ ತೈಲ ಖರೀದಿಸುವಂತೆ ಅಮೆರಿಕ ಭಾರತ ಸೇರಿದಂತೆ ಜಗತ್ತಿನ ಬಳಿ ಈಗ ಬೇಡಿಕೊಳ್ಳುತ್ತಿದೆ ಎಂದು ಇರಾನ್ ವಿದೇಶಾಂಗ ಸಚಿವ ಸಯ್ಯದ್ ಅಬ್ಬಾಸ್ ಅರಘ್ಚಿಹೇಳಿದ್ದಾರೆ. ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಅವರು, ರಷ್ಯಾದಿಂದ ಕಚ್ಚಾ ತೈಲ ಖರೀದಿಯನ್ನು ನಿಲ್ಲಿಸುವಂತೆ ಅಮೆರಿಕ ಒಂದು ತಿಂಗಳ ಕಾಲ ಬೆದರಿಸಿತ್ತು. ಈಗ ಇರಾನ್ ಜೊತೆಗಿನ ಎರಡು ವಾರಗಳ ಯುದ್ಧದ ನಂತರ ಅಮೆರಿಕ ಭಾರತ ಸೇರಿದಂತೆ ಜಗತ್ತಿನ ಜೊತೆ ರಷ್ಯಾದಿಂದ ಕಚ್ಚಾ ತೈಲ ಖರೀದಿಸುವಂತೆ ಬೇಡಿಕೊಳ್ಳುತ್ತಿದೆ ಎಂದು ಬರೆದಿದ್ದಾರೆ.
ಇರಾನ್ ಮೇಲೆ ನಡೆಯುತ್ತಿರುವ ಅಕ್ರಮ ಯುದ್ಧವನ್ನು ಯುರೋಪ್ ಬೆಂಬಲಿಸುವ ಮೂಲಕ ರಷ್ಯಾ ವಿರುದ್ಧದ ಹೋರಾಟದಲ್ಲಿ ಅಮೆರಿಕದ ಬೆಂಬಲ ಪಡೆಯುವ ನಿರೀಕ್ಷೆಯಲ್ಲಿದೆ. ಇದು ಶೋಚನೀಯ ಎಂದು ಸಿಟ್ಟು ಹೊರಹಾಕಿದ್ದಾರೆ.
