ಉದಯವಾಹಿನಿ,ಕೆಂಭಾವಿ : ಡಾ ಸರ್ವಪಲ್ಲಿ ರಾಧಾಕೃಷ್ಣನ್ ನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರ ಮೂಲಕ ಸಂಸ್ಥೆಯ ಕಾರ್ಯದರ್ಶಿಗಳಾದ ಡಾ ಆದಿಶೇಷ ನೀಲಗಾರ ಸಮಾರಂಭವನ್ನು ಉದ್ಘಾಟಿಸಿ ಭವಿಷ್ಯದಲ್ಲಿ ವಿದ್ಯಾರ್ಥಿನಿಯರು ರೂಪಿಸಿಕೊಳ್ಳಬೇಕಾದ ಮೌಲ್ಯಗಳ ಬಗ್ಗೆ ತಿಳಿಹೇಳಿದರು ಜೋತೆಗೆ ಶಿಕ್ಷಕರದವರ ಜವಾಬ್ದಾರಿಗಳೇನು? ಸಮಾಜದಲ್ಲಿ ಅವರ ವರ್ತನೆಗಳು ಹೇಗಿರಬೇಕು ಎಂಬುದುನ್ನು ತಿಳಿಸಿದರು. ಮುಖ್ಯ ಅಥಿತಿಗಳಾದ ಶ್ರೀ ತಿರುಪತಿ ಕೆಂಭಾವಿ ಮಾತನಾಡುತ್ತಾ, ಒಬ್ಬ ಉತ್ತಮ ಶಿಕ್ಷಕನ ವಾರ್ತೆನೆಗಳು ವಿದ್ಯಾರ್ಥಿಯ ಜೀವನವನ್ನು ಬದಲಾಯಿಸಬಲ್ಲವುಹಾಗೂ ಪುರಂದರದಾಸರು ಹೇಳಿದ ಹಾಗೆ ಮೊದಲು ಏನಾದರು ಹಾಗೂ ಗುರುವಿನ ಗುಲಾಮನಾಗು ಅಂದಾಗ ಮಾತ್ರ ಪ್ರತಿಫಲ ಸಿಗುತ್ತದೆ ಮತ್ತು ಗುರುಗಳನ್ನು ಶ್ರೇಧೆಯಿಂದ ಕಂಡರೆ ಗುರುವಿನಲ್ಲಿ ಪ್ರೇಮಾ ಹಾಗೂ ಆತ್ಮವಿಶ್ವಾಸ ಹೆಚ್ಚಾಗುತ್ತದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಕ್ರೀಡೆಯಲ್ಲಿ ವಿಜೇತರಾದ ಶಿಕ್ಷಕರಿಗೆ ವಿದ್ಯಾರ್ಥಿಗಳು ಬಹುಮಾನವನ್ನು ನೀಡಿ ಗೌರವಿಸಿದರು.ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಕು. ಬಸವರಾಜೇಶ್ವರಿ ಘಂಟಿ ಮತ್ತು ಮುಖ್ಯ ಅಥಿತಿ ಸ್ಥಾನವನ್ನು ಶ್ರೀ ವೆಂಕಟೇಶ ಜಾಲಗಾರ ವಹಿಸಿದ್ದರು. ಈ ಸಂದರ್ಭದಲ್ಲಿ ಉಪನ್ಯಾಸಕರಾದ ಶ್ರೀ ಅಂಬ್ರೆಶ ಚಿಲ್ಲಾಳ, ಕು. ಮಹೇಶ ಗಂಜಿ, ಶ್ರೀ ನಂಬಿಸಬ್ ನಾಯ್ಕೋಡಿ, ಕು. ಪ್ರಿಯಾ ಕು. ಹಣಮಂತ್ರಾಯಗೌಡ, ಕು. ಸಿಮರಿನ್, ಶ್ರೀಮತಿ ನಂದಿನಿ ಅಸಗಳ್ಳಿ, ಶ್ರೀ ಚಂದ್ರಶೇಖರ ನಾಯಕ, ಕು. ಶ್ರೀದೇವಿ ನಾಯಕ, ಕು. ಶಿವು ಕ್ವಾಟಿ ಹಾಗೂ ಕಾಲೇಜಿನ ಸಿಬ್ಬಂದಿ ವರ್ಗರವಾರದ ಕು. ಶೃತಿಗೌಡ, ಕು. ಹುಲಗಮ್ಮ, ಶ್ರೀ ಬಸವರಾಜ ಲೂಟಿ ಮತ್ತು ಶ್ರೀಮತಿ ಯಲ್ಲಮ್ಮ ಉಪಸ್ಥಿತರಿದ್ದರು. ಈ ಕಾರ್ಯಕ್ರಮವನ್ನು ಕು. ಶರಣಮ್ಮ ನಿರೂಪಿಸಿದರು, ಉಮಾಶ್ರೀ ಸ್ವಾಗತಿಸಿದರು, ಶ್ರೀ ಅಂಬ್ರೇಶ ಚಿಲ್ಲಾಳ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!