
ಉದಯವಾಹಿನಿ ಸಿಂಧನೂರು: ರಾಜ್ಯ ಸರ್ಕಾರ ಬಡವರು ಹಸಿವು ನೀಗಿಸುವ ನಿಟ್ಟಿನಲ್ಲಿ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ಅನ್ನಭಾಗ್ಯ ಯೋಜನೆ ಜಾರಿಗೆ ತಂದಿದ್ದು. ಆದರೆ ಅನ್ನಭಾಗ್ಯ ಯೋಜನೆ ಸುಮಾರು 32-35 ಟನ್ ಅಕ್ಕಿ ಅಕ್ರಮವಾಗಿ ಸಾಗಾಣಿಕೆ ದಂಧೆಗೆ ಇಳಿದು ಖದೀಮರು ದಿನ ದಿನಕ್ಕೆ ಹೆಚ್ಚಾಗುತ್ತಿದೆ ವರತು ಇದರ ಬಗ್ಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ತಮ್ಮ ತಮ್ಮ ಭಾಗದಲ್ಲಿ ಕಡಿವಾಣ ಹಾಕುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂಬುದು ಕಲಬುರ್ಗಿ ಜಿಲ್ಲೆಯ ಗುರುಮಠಕಲ್ ನಿಂದ ಸಾವಿರಾರು ಕಿಲೋಮೀಟರ್ ದೂರದ ಕೋಲಾರ ಜಿಲ್ಲೆಯ ಬಂಗಾರಪೇಟೆಗೆ ಸಾಗುತ್ತಿರುವ K.A.52.A 1909.ಲಾರಿಯನ್ನು ಸಿಂಧನೂರು ತಾಲ್ಲೂಕು ಆಹಾರ ಇಲಾಖೆಯ ಅಧಿಕಾರಿ ಹನುಮೇಶ ನಾಯಕ್ ಹಾಗೂ ಅವರು ಸಿಬ್ಬಂದಿ ವರ್ಗ ದೊಂದಿಗೆ ತಾಲ್ಲೂಕಿನ ಹೊಸಳ್ಳಿ ಕ್ಯಾಂಪ್ ನಲ್ಲಿ ಮಾರ್ಗದಲ್ಲಿ ಅಕ್ರಮ ಅಕ್ಕಿ ಲಾರಿಯನ್ನು ವಶಪಡಿಸಿಕೊಂಡು ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ಗ್ರಾಮೀಣ ಪೋಲಿಸ್ ಠಾಣೆಯ ಪಿಎಸ್ಐ ಭರತ ರೆಡ್ಡಿ ಹಾಗೂ ಸಿಪಿಐ ರವಿಕುಮಾರ್ ಅವರು ಸ್ಥಳಕ್ಕೆ ಭೇಟಿ ನೀಡಿ ಲಾರಿಯನ್ನು ಪರಿಸಲಿನೆ ಮಾಡಿದರು ನಂತರ ಕಂಡು ಬಂದಿದ್ದು ಸುಮಾರು 30-35 ಟನ್ ಅಂದಾಜು ಮೊತ್ತ ಸುಮಾರು 08 ಲಕ್ಷ ರೂ ಮೌಲ್ಯದ ಆಕ್ರಮ ಅಕ್ಕಿ ಲಾರಿಯನ್ನು ವಶಪಡಿಸಿಕೊಂಡು ಎಫ್ ಐಆರ್ ದಾಖಲಿಸಿಕೊಂಡು ಚಾಲಕ ಬಸವರಾಜ ನ್ನು ಬಂಧಿಸಿದ್ದಾರೆ.ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅನ್ನ ಭಾಗ್ಯ ಯೋಜನೆಗೆ ಕನ್ನ ಹಾಕುವ ಖದೀಮರಿಗೆ ಯಾವಾಗ ಕಡಿವಾಣ ಯಾವಾಗ…????

