ಉದಯವಾಹಿನಿ ಹೊಸಕೋಟೆ :ವಿಶ್ವಕರ್ಮ ಸಮುದಾಯ ಸಾಮಾಜಿಕ ಪರಂಪರೆ ಸಂಸ್ಕೃತಿ ಹೊಂದಿರುವ ಸಮಾಜವಾಗಿದ್ದು, ಸಂಘಟನಾತ್ಮಕವಾಗಿ ಬಲಿಷ್ಟವಾಗುವುದುಅತ್ಯಗತ್ಯವಾಗಿದೆಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು.ತಾಲೂಕಿನ ನಂದಗುಡಿಯಲ್ಲಿ ಶ್ರೀ ವೀರಬ್ರಹ್ಮೇಂದ್ರ ಮಠಟ್ರಸ್ಟ್ನ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವಕರ್ಮಜಯಂತಿ ಅಂಗವಾಗಿ ೭ನೇ ವರ್ಷದ ಬೆಳ್ಳಿರಥ ಉತ್ಸವ ಮೂರ್ತಿ ಮೆರವಣಿಗೆಕಾರ್ಯಕ್ರಮಕ್ಕೆ ಚಾಲನೇ ನೀಡಿ ಮಾತನಾಡಿದರು.ವಿಶ್ವಕರ್ಮ ಸಮುದಾಯಎಲ್ಲರಂಗದಲ್ಲೂ ಹಿಂದುಳಿದ ಜನಾಂಗವಾಗಿದ್ದು, ಸರಕಾರ ಸಮಾಜದ ಮುಖ್ಯ ವಾಹಿನಿಯಲ್ಲಿತರುವ ನಿಟ್ಟಿನಲ್ಲಿಅತ್ಯಗತ್ಯ ಸಹಾಯಹಸ್ತ ನೀಡುವತ್ತ ಗಮನಹರಿಸಿದ್ದು, ವಿಶ್ವಕರ್ಮಜನಾಂಗದ ಹಿಂದುಳಿದವರ ಕಲ್ಯಾಣಕ್ಕಾಗಿ, ಸರ್ವತೋಮುಖ ಬೆಳವಣಿಗೆಗೆ ಸೂಕ್ತ ನೆರವು ನೀಡಲು ಶ್ರಮಿಸಲಾಗುವುದುಎಂದರು. ಕೆಪಿಸಿಸಿ ರಾಜ್ಯ ಕಾರ್ಯದರ್ಶಿ ಬಿ.ಗೋಪಾಲ್ ಮಾತನಾಡಿ, ವಿಶ್ವಕರ್ಮಜಯಂತಿಯನ್ನು ಸರಕಾರದ ಮಟ್ಟದಲ್ಲಿಆಚರಿಸುತ್ತಿರುವುದು ಸಮುದಾಯಕ್ಕೆ ಸಂದಗೌರವವಾಗಿದೆ.ಸಾಮಾಜಿಕವಾಗಿಎಲ್ಲ ಕ್ಷೇತ್ರಗಳಲ್ಲಿಯೂ ಮುಂದೆ ಬರುವಂತಾಗಲು ವಿಶ್ವಕರ್ಮ ಸಮುದಾಯ ಸಂಘಟಿರಾಗಬೇಕುಎ0ದು ತಿಳಿಸಿದರು. ಇದೇ ಸಂದರ್ಭದಲ್ಲಿದೇವಾಲಯದಲ್ಲಿ ವಿವಿಧಅಭಿಷೇಕ ಸೇರಿದಂತೆ ವಿಶೇಷ ಪೂಜೆ ನೆರವೇರಿಸಿ, ವಿಶ್ವಕರ್ಮಉತ್ಸವ ಮೂರ್ತಿಯನ್ನು ಬೆಳ್ಳಿ ರಥದಲ್ಲಿಟ್ಟು ಜಾನಪದ ಕಲಾ ತಂಡದೊ0ದಿಗೆ ಪ್ರಮುಖ ಬೀದಿಗಳಲ್ಲಿ ಮೆರೆವಣಿಗೆ ನಡೆಸಿದರು. ಭಕ್ತರಿಗೆಅನ್ನಸಂತರ್ಪಣೆ ಸೇವೆ ನಡೆಯಿತು.ಕಾರ್ಯಕ್ರಮದಲ್ಲಿ ಕೆಪಿಸಿಸಿ ರಾಜ್ಯ ಕಾರ್ಯದರ್ಶಿ ಬಿ.ಗೋಪಾಲ್, ರಾಜ್ಯಒಕ್ಕಲಿಗರ ಸಂಘದ ನಿರ್ದೇಶಕ ಕೋಡಿಹಳ್ಳಿ ಸುರೇಶ್, ತಾಪಂನ ಮಾಜಿಅಧ್ಯಕ್ಷಅನಂದಚಾರಿ, ವಿಶ್ವಕರ್ಮ ಸಂಘದ ತಾಲೂಕುಅಧ್ಯಕ್ಷ ಸುರೇಶ್, ಮಹಿಳಾ ತಾಲೂಕುಅಧ್ಯಕ್ಷೆಗೋವಿಂದಮ್ಮ,ಶ್ರೀವೀರಬ್ರಹ್ಮೇ0ದ್ರ ಮಠಟ್ರಸ್ಟ್ನಗೌರವಾಧ್ಯಕ್ಷತ್ಯಾಗರಾಜಚಾರಿ, ಅಧ್ಯಕ್ಷಬಾಲಸುಬ್ರಮಣ್ಯಚಾರ್, ಉಪಾಧ್ಯಕ್ಷ ಈಶ್ವರಾಚಾರ್, ಕಾರ್ಯದರ್ಶಿ ಚಂದ್ರಚಾರಿ, ಹಾಗೂ ವಿಶ್ವಕರ್ಮ ಸಮಾಜದ ಬಂಧುಗಳು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!