
ಉದಯವಾಹಿನಿ ಕುಶಾಲನಗರ:-ಓಣಂ ಹಬ್ಬವೂ ಐಶ್ವರ್ಯ ಮತ್ತು ಸಮೃದ್ಧಿಯ ಸಂಕೇತ ದ ಹಬ್ಬವಾಗಿದ್ದು ಹೊಸ ವರ್ಷದ ಭರವಸೆ ಮೂಡಿಸುವ ಹಬ್ಬ ಇದಾಗಿದೆ. ಸಂಸ್ಕೃತಿ ಆಚರಣೆ ಉಳಿಸಲು ಹಬ್ಬಗಳು ಸಹಕಾರಿಯಾಗಿವೆ ಎಂದು ಮಾಜಿ ಸಚಿವರಾದ ಎಂಪಿ ಅಪ್ಪಚ್ಚು ರಂಜನ್ ಅಭಿಪ್ರಾಯ ವ್ಯಕ್ತಪಡಿಸಿದರು. ಕುಶಾಲನಗರದ ಎಪಿಸಿಎಂಎಸ್ ಸಭಾಂಗಣದಲ್ಲಿ ಕೇರಳ ಸಮಾಜದ ವತಿಯಿಂದ ನಡೆದ 23ನೇ ಓಣಂ ಹಬ್ಬ ಆಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಮುಖ್ಯ ಅತಿಥಿಗಳಾಗಿ ಕೊಡಗು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಕೆಪಿ ಚಂದ್ರಕಲಾ. ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ವಿಎಂ ವಿಜಯ್ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ವಿ.ಪಿ ಶಶಿಧರ್. ಮತ್ತಿತರರು ಮಾತನಾಡಿದರು ಕಾರ್ಯಕ್ರಮದಲ್ಲಿ ಸಿದ್ದಾಪುರ ಎಸ್ ಎನ್ ಡಿ ಪಿ ಮಾಜಿ ಅಧ್ಯಕ್ಷರಾದ ಕೆಎನ್ ವಾಸು ನಿವೃತ್ತ ಅಧಿಕಾರಿ ಲಕ್ಷ್ಮಣ ಗುಡ್ಡೆ ಹೊಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ರುಕ್ಮಿಣಿ ಕುಶಾಲನಗರ ಪುರಸಭೆಯ 5 ಮಂದಿ ಪೌರಕಾರ್ಮಿಕರನ್ನು ಮಲಯಾಳಿ ಸಮಾಜದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.ಕುಶಾಲನಗರದ ಕೇರಳ ಸಮಾಜದ ಅಧ್ಯಕ್ಷರಾದ ಕೆ ಆರ್ ಶಿವಾನಂದ್ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಕುಶಾಲ್ ನಗರ ಪುರಸಭೆ ಸದಸ್ಯರಾದ ಜಯಲಕ್ಷ್ಮಿ ಚಂದ್ರನ್ ರುಕ್ಮಿಣಿ ಫಾದರ್ ಸುನಿಲ್ ಮದರಸದ ಅಧ್ಯಕ್ಷ ಹುಸೇನ್ ಇದ್ದರು.ಕಾರ್ಯಕ್ರಮಕ್ಕೂ ಮೊದಲು ಕುಶಾಲನಗರದ ಸಮಾಜದ ಕಚೇರಿಯಿಂದ ಸಭಾಂಗಣದವರೆಗೆ ಸಮುದಾಯದ ಸದಸ್ಯರು ಮಾದೇವಿ ದೇಶದಾರಿಯೊಂದಿಗೆ ಮೆರವಣಿಗೆಯಲ್ಲಿ ಚಡ್ಡ ವಾದ್ಯಗಳ ಮೂಲಕ ಆಗಮಿಸಿದರು ಸಮಾಜದ ಕಾರ್ಯದರ್ಶಿ ಕೆಜಿ ರಾಜನ್ ಪ್ರಾಸ್ತಾವಿಕ ನುಡಿಗಳ ನಾಡಿದರು
ನಿರ್ದೇಶಕರಾದ ಕೆ ರಾಜನ್ ಸ್ವಾಗತಿಸಿ ವಂದಿಸಿದರು
