ಉದಯವಾಹಿನಿ, ಚಾಮರಾಜನಗರ, : ರಾಜ್ಯದಲ್ಲಿಯೇ ಪ್ರಸಿದ್ಧಿ ಹೊಂದಿರುವ ಜಿಲ್ಲೆಯಲ್ಲಿಯೇ ದೊಡ್ಡ ಗಣಪತಿ ಎಂದು ಹೆಸರುವಾಸಿಯಾಗಿರುವ ಗಣೇಶ ಮೂರ್ತಿಯನ್ನು ಗಣೇಶ ಹಬ್ಬದ ದಿನದಂದೇ ಪ್ರತಿಷ್ಠಾಪಿಸಲಾಯಿತು.
ಶ್ರೀ ವಿದ್ಯಾಗಣಪತಿ ಮಂಡಲಿಯ ಪದಾಧಿಕಾರಿಗಳು ಅಪಾರ ಸಂಖ್ಯೆಯ ಸಾರ್ವಜನಿಕರ ಸಮ್ಮುಖದಲ್ಲಿ ಗಣಪತಿಯನ್ನು ಶಾಸ್ತ್ರೋಕ್ತವಾಗಿ ಪೂಜಾ ಕೈಂಕರ್ಯಗಳೊಂದಿಗೆ ಕೂರಿಸಲಾಯಿತು.
ನಗರದ ಶ್ರೀ ವಿದ್ಯಾಗಣಪತಿ ಮಂಡಲಿ ವತಿಯಿಂದ ಪ್ರತಿμÁ್ಠಪಿಸಲ್ಪಡುವ ಗಣಪತಿ ಈ ಬಾರಿ ಸುದರ್ಶನ ಚಕ್ರಧಾರಿ ರೂಪ ತಾಳಿದ್ದಾನೆ.
ಕಳೆದ 61 ವರ್ಷಗಳಿಂದ ಪ್ರತಿμÁ್ಠಪಿಸುತ್ತಿರುವ ಈ ಗಣಪತಿ ನಾಡಿನ ಪ್ರತಿಷ್ಠಿತ ಗಣಪತಿಗಳಲ್ಲಿ ಒಂದಾಗಿದೆ.
ಗಲಾಟೆ ಗಣಪ :ಕಳೆದ ಕೆಲವು ವರ್ಷಗಳ ಹಿಂದಿನವರೆಗೂ ಗಣೇಶ ವಿಸರ್ಜನೆ ವೇಳೆ ಹಲವಾರು ಬಾರಿ ಅನ್ಯಕೋಮಿನ ಕೆಲವು ಕಿಡಿಗೇಡಿಗಳಿಂದಾಗಿ ನಗರದಲ್ಲಿ ಗಲಭೆಗಳು ನಡೆದು ಅನೇಕ ವಿಘ್ನಗಳು ಉಂಟಾದವು. ಇದರಿಂದಾಗಿ ಗಣೇಶ ವಿಸರ್ಜನೆ ವೇಳೆ ಕೋಮು ಗಲಭೆಗಳು ಆಗದಂತೆ ಪೋಲಿಸರ ಸರ್ಪಗಾಲಿನಲ್ಲಿ ಗಣೇಶ ವಿಸರ್ಜನೆ ಆಗುತ್ತಿದೆ. ಈಗಾಗಲೇ ಪೋಲಿಸರು ನಗರದಾದ್ಯಂತ ಪೆರೇಡ್ ನಡೆಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!