
ಉದಯವಾಹಿನಿ ಇಂಡಿ ತಾಂಬಾ :- ವಿಶ್ವಕರ್ಮ ಒಬ್ಬ ದೇವ ಶಿಲ್ಪಿ ಸ್ವರ್ಗವನ್ನು ಸೃಷ್ಟಿ ಮಾಡಿದ ಮಹಾಶಿಲ್ಪಿ ಕೃಷ್ಣನಿಗಾಗಿ ದ್ವಾರಕಾ ಕೌರವರಿಗಾಗಿ ಹಸ್ತಿನಾಪುರ ಪಾಂಡವರಿಗಾಗಿ ಇಂದ್ರಪ್ರಸ್ಥ ನಿರ್ಮಾಣ ಮಾಡಿದ ಕೀರ್ತಿ ವಿಶ್ವಕರ್ಮನಿಗೆ ಸಲ್ಲುತ್ತದೆ. ವಿಶ್ವಕರ್ಮನಿಗೆ 5 ಜನ ಮಕ್ಕಳು. ಮನು. ಮಾಯಾ. ತ್ವಸ್ಟ. ಶಿಲ್ಪಿ. ಮತ್ತು ದೈವಜ್ಞ.
ಮನು ಎಂದರೆ : ಕಂಬಾರ, ಮಾಯಾ ಎಂದರೆ : ಬಡಿಗ, ತ್ವಸ್ಟ ಎಂದರೆ : ಕಂಚಗಾರ, ಶಿಲ್ಪಿ ಎಂದರೆ : ಶಿಲ್ಪಿಕಾರ, ದೈವಜ್ಞ ಎಂದರೆ : ಪತ್ತಾರ
ಈ 5 ಜನರು ತಮ್ಮ ವೃತ್ತಿಗಳನ್ನು ಮಾಡುತ್ತಾ ಇಂದಿಗೂ ಸಹ ಮುಂದುವರಿಸುತ್ತಿದ್ದಾರೆ ಎಂದು ಶ್ರೀ ವೀರಭದ್ರೇಶ್ವರ ಕಲಾ ಮಹಾವಿದ್ಯಾಲಯದ ಪ್ರಾಚಾರ್ಯರಾದ ಶ್ರೀ ಎಲ್ ಎಸ್ ಬಡಿಗೇರ್ ಸರ್ ಅವರು ಪ್ರಸ್ತಾವಿಕವಾಗಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ರಾಜು ಗಂಗನಹಳ್ಳಿ ಮಾಜಿ ಅಧ್ಯಕ್ಷರು ಗ್ರಾಮ ಪಂಚಾಯಿತಿ ತಾಂಬಾ. ಗಂಗಾಧರ ಪತ್ತಾರ. ವಿಜಯಕುಮಾರ್ ಪತ್ತಾರ. ವಿಶ್ವನಾಥ್ ಪತ್ತಾರ. ಭೀಮಶಂಕರ ಪತ್ತಾರ ಹಾಗೂ ಪ್ರಮುಖ ಗಣ್ಯರು ಉಪಸ್ಥಿತರಿದ್ದರು.
