ಉದಯವಾಹಿನಿ, ಔರಾದ್ : ಬಹುತೇಕ ಅಪಘಾತಗಳಲ್ಲಿ ಸಾವನ್ನಪ್ಪುವವರು ಮುಖ್ಯವಾಗಿ ಹೆಲ್ಮೆಟ್ ಧರಿಸಿರುವುದಿಲ್ಲ ಮತ್ತು ಸೀಟ್ ಬೆಲ್ಟ್ ಹಾಕದಿರುವುದು ಎಂದು ಎಸ್ಪಿ ಚನ್ನಬಸವಣ್ಣ ಎಸ್. ಲಂಗೋಟಿ ಹೇಳಿದರು. ಪಟ್ಟಣದ ಪೊಲೀಸ್ ಠಾಣೆಯಲ್ಲಿ ಸೋಮವಾರ ನಡೆದ ಜನ ಸಂಪರ್ಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಪೊಲೀಸರು ಕಾನೂನು ಸುವ್ಯವಸ್ಥೆ ಕಾಪಾಡುವ ಜನತೆ, ಅಪರಾಧ ನಿಯಂತ್ರಣ ಮಾಡಲು ಕಾರ್ಯನಿರ್ವಹಿಸುತ್ತಾರೆ. ಕಾನೂನು ಸುವ್ಯವಸ್ಥೆ ಕಾಪಾಡಲು ಜಿಲ್ಲೆಯಲ್ಲಿ 6 ಸಾವಿರಕ್ಕೂ ಅಧಿಕ ಪಿಟಿ ಕೇಸ್ ದಾಖಲಿಸಲಾಗಿದೆ. ಕೆಲವರು ಎಸ್ಪಿ ಕೇಸ್ ದಾಖಲಿಸಲು ಟಾರ್ಗೆಟ್ ನೀಡಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿವೆ. ಕೇಸ್ ದಾಖಲು ಮಾಡಲು ನಮಗೆ ಯಾವುದೇ ಟಾರ್ಗೆಟ್ ಇಲ್ಲ. ನಾನು ಕುಡಾ ಯಾರಿಗೂ ಟಾರ್ಗೆಟ್ ನೀಡುವುದಿಲ್ಲ. ಅಪಘಾತದಲ್ಲಿ ಕಳೆದ ಒಂದು ವರ್ಷದಲ್ಲಿ 332 ಜನ ಮೃತಪಟ್ಟಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ್ದರು.ಆದ್ದರಿಂದ ಇಲಾಖೆ ವಿನೂತನ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಹೆಲ್ಮೆಟ್ ಅಭಿಯಾನ ನಡೆಸಿ ಜಿಲ್ಲೆಯಲ್ಲಿ ಹೆಲ್ಮೆಟ್ ಹಾಕದ ಬೈಕಗಳು ಹಿಡೆದು ದಂಡ‌ ಹಾಕುವ ಮೂಲಕ ಅವರಿಗೆ ಹೆಲ್ಮೆಟ್ ನೀಡಿದ್ದೇವೆ. ಇಲ್ಲಿಯವರೆಗೆ 5 ಸಾವಿರ ಹೆಲ್ಮೆಟ್ ನೀಡಲಾಗಿದೆ ಎಂದರು.ಇನ್ನೂ ಅಪಘಾತ ಸ್ಥಳಗಳು ಗುರುತಿಸಿ, ಯಾಕೆ ಅಪಘಾತವಾಗಿದೆ ಎಂದು ಅರಿತು 24 ಸ್ಥಳಗಳಲ್ಲಿ ಪರಿಹಾರ ಕಲ್ಪಿಸಲಾಗಿದೆ. ಅಲ್ಲದೇ ಪೊಲೀಸರು ಹೇಳಿದರು ಕೇಳುತ್ತಿಲ್ಲ ಎಂದು ಶಾಲಾ ಮಕ್ಕಳಿಗೆ ಜಾಗೃತಿ ಮೂಡಿಸಿ ಪಾಲಕರಿಗೆ ಮನವರಿಕೆ ಮಾಡುವಂತೆ ಮಾಡಿದ್ದೇವೆ ಎಂದರು.ಪೊಲೀಸ್ ಮತ್ತು ಜನರ ನಡುವೆ ತಂದೆ ಮಕ್ಕಳ ಸಂಬಂಧವಿದ್ದು, ಮಕ್ಕಳ ತಪ್ಪು ತಂದೆ-ತಾಯಿ ಹೇಗೆ ತಿದ್ದುತ್ತಾರೆ. ಅದೇ ರೀತಿ ಕಾನೂನು ಪಾಲಿಸುವಂತೆ ಜನರಿಗೆ ತಿದ್ದುವ ಕೆಲಸ ಮಾಡುತ್ತಿದ್ದೇವೆ. ಸಣ್ಣಪುಟ್ಟ ಸಮಸ್ಯೆಗಳನ್ನು ಕೂತು ಬಗೆಹರಿಸಬೇಕು. ಮಾದಕವಸ್ತು ಎಲ್ಲಿಂದ ಸಾಗಾಣಿಕೆ ಆಗುತ್ತಿದೆ. ಎಲ್ಲಿಗೆ ಸಾಗಾಟವಾಗುತ್ತಿದೆ ಎರಡು ಪೊಲೀಸರು ಶೋಧ ಮಾಡುತ್ತಿದ್ದಾರೆ ಎಂದರು. ಸಿಪಿಐ ರಘುವೀರಸಿಂಗ್ ಠಾಕೂರ್, ಪಿಎಸ್ ಐ ರೇಣುಕಾ ಭಾಲೇಕರ್, ಚಿಂತಾಕಿ ಪಿಎಸ್ ಐ ಸಿದ್ದಲಿಂಗ್, ಸಂತಪೂರ ಪಿಎಸ್ ಐ ಮೈಬೂಬ್ ಅಲೀ, ಹೋಕ್ರಣಾ ಪಿಎಸ್ ಐ ಶೇಖಷಾ ಪಟೇಲ್, ಅಪರಾಧ ವಿಭಾಗದ ಪಿಎಸ್ ಐ ಬಸವರಾಜ ಕೋಟೆ, ಪಿಎಸ್ ಐ ಸಂತೋಷ ತಾವರಖೇಡ್ ಸೇರಿದಂತೆ ‌ಠಾಣೆಯ ಸಿಬ್ಬಂದಿಗಳು ಹಾಗೂ ತಾಲೂಕಿನ ನಾನಾ ಗ್ರಾಮಗಳ ಜನರು ಪಾಲ್ಗೊಂಡರು. ಕೃಷ್ಣ ಪಾಟೀಲ್ ಸ್ವಾಗತಿಸಿ, ನಿರೂಪಿಸಿದರು. ಇದೇ ವೇಳೆ ಠಾಣೆಯ ಆವರಣದಲ್ಲಿ ಸಸಿ ನೆಡಲಾಯಿತು.
ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸಿ:
ಪಟ್ಟಣದ ಬಸ್ ನಿಲ್ದಾಣ, ಎಸ್ ಬಿಐ ಬ್ಯಾಂಕ್, ಎಪಿಎಂಸಿ ಬಳಿಯ ಬೀದರ್ -ಔರಾದ್ ರಾಷ್ಟ್ರೀಯ ಹೆದ್ದಾರಿ ರಸ್ತೆಯ ರಸ್ತೆಯಲ್ಲಿ ವಾಹನಗಳು ಪಾರ್ಕಿಂಗ್ ಮಾಡುತ್ತಿದ್ದು ಸಂಚಾರಕ್ಕೆ ಸಮಸ್ಯೆಯಾಗಿದೆ. ಎಲ್ಲೆಂದರಲ್ಲಿ ವಾಹನಗಳು ನಿಲ್ಲಿಸುವುದರಿಂದ ಟ್ರಾಫಿಕ್‌ ಸಮಸ್ಯೆ ಮಿತಿ ಮೀರಿದೆ. ಶಾಲಾ ಮಕ್ಕಳಿಗೆ ದನದಂತೆ ವಾಹನದಲ್ಲಿ ಕೊಂಡೊಯ್ಯಲಾಗುತ್ತಿದೆ. ಪಟ್ಟಣದ ಸರಕಾರಿ ಶಾಲೆಯ ಆವರಣದಲ್ಲಿ ನಾಲೈದು ಶಾಲೆಗಳು ನಡೆಯುತ್ತಿವೆ. ಇಲ್ಲಿ ರಸ್ತೆಯಿಲ್ಲ. ಮಳೆ ಬಂದರೆ ನಡೆದಾಡಲು ಸಾಧ್ಯವಿಲ್ಲ. ಮುಖ್ಯರಸ್ತೆ ಅತಿಕ್ರಮಣವಾಗಿದೆ. ಡಿಪ್ಲೊಮಾ, ಪ್ರಥಮ ದರ್ಜೆ ಕಾಲೇಜಿನ ಹೆಣ್ಣು ಮಕ್ಕಳು ರಸ್ತೆಯಲ್ಲಿ ಬರುವಾಗ ಬೈಕಗಳಲ್ಲಿ ಬಂದು ಯುವಕರು ಚುಡಾಯಿಸುವುದು ಹೆಚ್ಚಾಗಿದೆ. ಇಲ್ಲಿ ಭದ್ರತೆ ನೀಡಬೇಕು ಎಂದು ಅಶೋಕ ಶೆಂಬೆಳ್ಳೆ, ಹಾವಪ್ಪ ದ್ಯಾಡೆ, ಬಸವರಾಜ ಶೆಟಕಾರ್, ಮಹೇಶ ಪಾಟೀಲ್, ಕಾಶಿನಾಥ್ ಸೇರಿದಂತೆ ಅನೇಕರು ತಿಳಿಸಿದರು. ಎಸ್ಪಿ ಚನ್ನಬಸವಣ್ಣ ಲಂಗೋಟಿ ಮಾತನಾಡಿ, ರಸ್ತೆ ಅತಿಕ್ರಮಣವಾದ ಬಗ್ಗೆ ಡಿಸಿ ಅವರ ಗಮನಕ್ಕೆ ಬಂದಿದೆ. ರಸ್ತೆ ತೆರವು‌ಗೊಳಿಸುವ ಬಗ್ಗೆ ಡಿಸಿ ಅವರ ಗಮನಕ್ಕೆ ತರುವ ಮೂಲಕ ತೆರವು ಮಾಡಿಸಲಾಗುತ್ತದೆ. ಅಲ್ಲದೇ ಖಾಸಗಿ ವಾಹನಗಳ ಪಾರ್ಕಿಂಗ್ ಸ್ಥಳಾಂತರ ಮಾಡಲಾಗುತ್ತದೆ. ರಸ್ತೆಯಲ್ಲಿ ಬಸ್ ನಿಂತರೂ ಕೇಸ್ ದಾಖಲು ಮಾಡುತ್ತೇವೆ. ಕಾಲೇಜು ಮಾರ್ಗದಲ್ಲಿ ಭದ್ರತೆಗೆ ನಿಯೊಜನೆ‌ ಮಾಡುವ ಭರವಸೆ ನೀಡಿದರು.

Leave a Reply

Your email address will not be published. Required fields are marked *

error: Content is protected !!