
ಉದಯವಾಹಿನಿ, ಶಿಡ್ಲಘಟ್ಟ: ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯಲ್ಲಿ ಅಧ್ಯಕ್ಷರಾಗಿ ನಾರಾಯಣಸ್ವಾಮಿ ಉಪಾಧ್ಯಕ್ಷರಾಗಿ ಜೈರಾಮ್ ಅವಿರೋಧವಾಗಿ ಆಯ್ಕೆಯಾದರು.ತಾಲ್ಲೂಕಿನ ವರದನಾಯಕನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯಲ್ಲಿ ಒಂದೊಂದೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆ ಮಾಡಲಾಯಿತು. ನಂತರ ಸಂಘದ ಸದಸ್ಯರ ಜೊತೆಗೂಡಿ ಶಾಸಕ ಬಿಎನ್ ರವಿಕುಮಾರ್ ಅವರ ನಿವಾಸಕ್ಕೆ ತೆರಳಿ ಶಾಸಕರಿಗೆ ಸನ್ಮಾನ ಮಾಡಿ ಸಿಹಿ ಹಂಚಿದರು.
ಶಾಸಕ ಬಿಎನ್ ರವಿಕುಮಾರ್ ಮಾತನಾಡಿ ಹಾಲು ಉತ್ಪಾದಕರ ಮತ್ತು ಸಹಕಾರ ಸಂಘದ ಅಭಿವೃದ್ಧಿಯನ್ನು ಹೆಚ್ಚುಮಾಡಿ ಎಲ್ಲಾ ರೈತರು ಯಾವುದೇ ರಾಜಕೀಯವಿಲ್ಲದೆ ಸಂಘವನ್ನು ಬೇಳೆಸಿ ಉತ್ತಮ ಗುಣಮಟ್ಟದ ಹಾಲು ನೀಡಿ ಗುಣಮಟ್ಟವನ್ನು ಕಾಪಾಡಿಕೊಂಡು ಬರಬೇಕು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ನೂತನ ಹಾಲು ಉತ್ಪಾದಕ ಸರ್ಕಾರ ಸಂಘದ ಸದಸ್ಯರುಗಳು ಮತ್ತು ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಲಕ್ಷ್ಮೀನಾರಾಯಣ್ ರೆಡ್ಡಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮುನಿರೆಡ್ಡಿ ಮತ್ತು ಗ್ರಾಮದ ಮುಖಂಡರಾದ ವೆಂಕಟೇಶಪ್ಪ, ಅಮರನಾಥ್, ಗೋಪಾಲಕೃಷ್ಣ, ಹನುಮಂತಯ್ಯ, ನಾಗರಾಜ್, ಕೃಷ್ಣಮೂರ್ತಿ ಮತ್ತು ಅನೇಕ ಹಿರಿಯ ಜೆಡಿಎಸ್ ಮುಖಂಡರು ಹಾಜರಿದ್ದರು.
