
ಉದಯವಾಹಿನಿ,ಅಫಜಲಪುರ: ತಾಲೂಕು ಕೇಂದ್ರವನ್ನು ಬರಪೀಡಿತ ಎಂದು ಘೋಷಣೆ ಮಾಡಿರುವ ಹಿನ್ನೆಲೆ ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕು ಹಾಗೂ ಸಕಾಲಕ್ಕೆ ಮಳೆ ಬಾರದ ಕಾರಣ ಭೀಮಾ ನದಿಯಲ್ಲಿ ನೀರಿಲ್ಲದೆ ಕಬ್ಬಿನ ಬೆಳೆಗಳು ಒಣಗಿ ಹೋಗಿವೆ. ಹೀಗಾಗಿ ಸೂಕ್ತ ಕ್ರಮ ಕೈಗೊಳ್ಳುವಂತೆ ರಾಜ್ಯ ಕಬ್ಬು ಬೆಳೆಗಾರ ಸಂಘದ ಪದಾಧಿಕಾರಿಗಳು ಕಲಬುರಗಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.ನಂತರ ಸಂಘದ ಜಿಲ್ಲಾಧ್ಯಕ್ಷ ರಮೇಶ ಹೂಗಾರ ಮಾತನಾಡಿ ರೈತರು ಸಕ್ಕರೆ ಕಾರ್ಖಾನೆಗಳ ಮೇಲೆ ನಂಬಿಕೆ ಇಟ್ಟು ಕಬ್ಬು ಪೂರೈಸಿದ್ದಾರೆ. ಆದರೆ ಕಾರ್ಖಾನೆಯವರು ಎಫ್.ಆರ್.ಪಿ ಪ್ರಕಾರ ರೈತರ ಖಾತೆಗೆ ಹಣ ಸಂದಾಯ ಮಾಡದೆ ಸತಾಯಿಸುತ್ತಿದ್ದಾರೆ. ಹೀಗಾಗಿ ಸೂಕ್ತ ಕ್ರಮ ಕೈಗೊಂಡು ರೈತರ ನೆರವಿಗೆ ಮುಂದಾಗಬೇಕು ಎಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ರೈತ ಮುಖಂಡರಾದ ಮಹಾದೇವಪ್ಪ ಶೇರಿಕಾರ್, ಲಕ್ಷ್ಮಿ ಪುತ್ರ ಮನ್ಮಿ, ಭಾಗಣ್ಣ ಕುಂಬಾರ, ಪ್ರಕಾಶ ಫುಲಾರಿ, ಕಂಟೆಪ್ಪ, ಸಂತೋಷ್ ಮಲಗೊಂಡ, ರಾಜು ಬಡದಾಳ ಹನುಮಂತರಾಯ ಬಿರಾದಾರ, ಶಾಮರಾವ ಹಾದಿಮನಿ ಇತರರಿದ್ದರು.
