ಉದಯವಾಹಿನಿ, ಬೀಜಿಂಗ್: ಚೀನಾ ದೇಶ ಈಗ ಏಷ್ಯಾದಲ್ಲಿ ದೊಡ್ಡ ಯುದ್ದಕ್ಕಾಗಿ ತಯಾರಿ ನಡೆಸುತ್ತಿದೆ ಎನ್ನಲಾಗಿದೆ.ಈಗ ಇದಕ್ಕೆ ಪೂರಕ ಎನ್ನುವಂತೆ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಪೂರ್ವ ಚೀನಾ ಸಮುದ್ರದಲ್ಲಿನ ಉಪಗ್ರಹದ ಚಿತ್ರಗಳೇ ಇದಕ್ಕೆ ಸಾಕ್ಷಿಯಾಗಿದೆ.ಈ ಚಿತ್ರದಲ್ಲಿ, 2,000 ಚೀನೀ ಮೀನುಗಾರಿಕಾ ಹಡಗುಗಳು ಏಕಕಾಲದಲ್ಲಿ ಸಮುದ್ರದಲ್ಲಿ ಕಾಣಿಸಿಕೊಂಡಿವೆ.
ಯುದ್ಧದ ವೇಳೆ, ತೈವಾನ್, ಜಪಾನ್ ಮತ್ತು ಫಿಲಿಪೈನ್ಸ್ ದೇಶಗಳ ಈ ಪ್ರದೇಶಕ್ಕೆ ಚಲಿಸುವುದನ್ನು ನಿಲ್ಲಿಸಲು ಪೂರ್ವ ಚೀನಾ ಸಮುದ್ರವನ್ನು ನಿರ್ಬಂಧಿಸಲು ಚೀನಾ ಈ ಹಡಗುಗಳನ್ನು ಬಳಸುತ್ತಿದೆ ಎನ್ನಲಾಗಿದೆ.ನಾಸಾ ಮತ್ತು ಇಂಜೆನಿಸ್ಪೇಸ್ ಅನ್ನು ಉಲ್ಲೇಖಿಸಿ ಎಎಫ್‌ಪಿ ಬಿಡುಗಡೆ ಮಾಡಿದ ಉಪಗ್ರಹ ಚಿತ್ರವು ಚೀನಾದ ಮೀನುಗಾರಿಕಾ ಹಡಗುಗಳನ್ನು ಜ್ಯಾಮಿತೀಯ ಆಕಾರಗಳಲ್ಲಿ ನಿಯೋಜಿಸಿರುವುದನ್ನು ತೋರಿಸುತ್ತದೆ. ಈ ಚಿತ್ರವು 2025 ರ ಡಿಸೆಂಬರ್ ತಿಂಗಳದ್ದು ಎಂದು ಹೇಳಲಾಗಿದೆ.ಆದರೆ ಈ ಕುರಿತಾಗಿ ಚೀನಾ ಅಧಿಕೃತವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎನ್ನಲಾಗಿದೆ.
ingeniSPACE ನ ಜೇಸನ್ ವಾಂಗ್ ನೀಡಿರುವ ಮಾಹಿತಿ ಪ್ರಕಾರ ಚೀನಾ ದೇಶವು ಈಗ ಪೂರ್ವ ಚೀನಾ ಸಮುದ್ರದಲ್ಲಿ ಸುಮಾರು 400 ಕಿಲೋಮೀಟರ್ ಉದ್ದದ ಹಡಗು ನಿಯಂತ್ರಿಸುವ ಬ್ರೇಕರ್ ವ್ಯವಸ್ಥೆಯನ್ನು ನಿಯೋಜಿಸಿದೆ ಎನ್ನಲಾಗಿದೆ.ಈ ಹಡಗುಗಳನ್ನು ಯಾವುದೇ ದಿಕ್ಕಿನಿಂದ ಸುಲಭವಾಗಿ ದಾಳಿ ಮಾಡಲು ಅವಕಾಶ ನೀಡುವ ರೀತಿಯಲ್ಲಿ ಇರಿಸಲಾಗಿತ್ತು. ಮೀನುಗಾರಿಕೆ ದೋಣಿಗಳು ಸಾಮಾನ್ಯವಾಗಿ ಎರಡು ಸಮಾನಾಂತರ, ತಲೆಕೆಳಗಾದ L- ಆಕಾರದ ರಚನೆಗಳನ್ನು ರೂಪಿಸುವುದಿಲ್ಲವಾದ್ದರಿಂದ, ನಿಯೋಜನೆಯ ವಿಧಾನವು ಮಹತ್ವದ ಸಂದೇಶವನ್ನು ಹೊಂದಿದೆ ಎಂದು ವಾಂಗ್ ವಿವರಿಸಿದ್ದಾರೆ.
ಈಗ ಚೀನಾದ ಈ ಯೋಜನೆಗೆ ಪ್ರತಿಕ್ರಿಯೆ ನೀಡಿರುವ ತಜ್ಞರು ಚೀನಾ ಒಂದು ದೊಡ್ಡ ಯುದ್ಧಕ್ಕೆ ಸಿದ್ಧತೆ ನಡೆಸುತ್ತಿದೆ. ಈ ಯುದ್ಧವು ತೈವಾನ್, ಫಿಲಿಪೈನ್ಸ್ ಮತ್ತು ಜಪಾನ್ ಜೊತೆಗೂ ಇರಬಹುದು ಎನ್ನಲಾಗಿದೆ, ಏಕೆಂದರೆ ಪೂರ್ವ ಚೀನಾ ಸಮುದ್ರದಲ್ಲಿ ಈ ದೇಶಗಳನ್ನು ಚೀನಾದ ಶತ್ರುಗಳೆಂದು ಪರಿಗಣಿಸಲಾಗಿದೆ.
