
ಉದಯವಾಹಿನಿ ಮುದ್ದೇಬಿಹಾಳ ; ಇಂದು ಅದೇಷ್ಟೋ ಪಾಲಕರು ತಮ್ಮ ಮಕ್ಕಳ ಓದಿಗಾಗಿ ತಮ್ಮ ಹೊಟ್ಟೆ ಬಟ್ಟೆಕಟ್ಟಿಕೂಂಡು ಉಪವಾಸ ವನವಾಸ ಮಾಡಿ ಮಕ್ಕಳ ಓದಿಗೆ ಶ್ರಮಿಸುತ್ತಿದ್ದರೆ ಪಟ್ಟಣಕ್ಕೆ ಓದಲು ಬರುವ ವಿದ್ಯಾರ್ಥಿಗಳು ಮಾತ್ರ ತಮ್ಮ ತಂದೆ ತಾಯಿಗಳು ತಮಗಾಗಿ ಪಡುತ್ತಿರುವ ಕಷ್ಟವನ್ನು ಮರೆತು ಆಟಾಟೋಪ ಮಾಡುತ್ತಿದ್ದಾರೆ ಕಳೆದ ವಾರವಷ್ಟೇ ದಲಿತ ವಿದ್ಯಾರ್ಥಿ ಪರಿಷತ್ತು ಮುದ್ದೇಬಿಹಾಳ ಪಟ್ಟಣದ ಬಸ್ ನಿಲ್ದಾಣದಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಚುಡಾಯಿಸೋದು ಕಿಟಲೆ ಮಾಡುವುದು ,ವಿದ್ಯಾರ್ಥಿನಿರನ್ನು ಹಿಂಬಾಲಿಸುವವರ ಮೇಲೆ ಕಾನೂನು ಕ್ರಮಕ್ಕೆ ಕೈಗೊಳ್ಳಬೇಕು ಎಂದು ಪೋಲಿಸ್ ಠಾಣೆಯ ಪಿಎಸೈ ಅವರಿಗೆ ಮನವಿ ಮಾಡಿದ್ದರು ಆದರೂ ಸಹ ಇಲ್ಲಿಯವರೆಗೆ ಈ ಪುಂಡಾಟ ವಿದ್ಯಾರ್ಥಿನಿರನ್ನು ಚುಡಾಯಿಸುವುದು ನಿಂತಿಲ್ಲ ಬಸ್ ನಿಲ್ದಾಣದಲ್ಲಿ ಗುಂಪು ಗಲಾಟೆ ಮಾಡುತ್ತಿದ್ದಾರೆ.ಬೆಳಗ್ಗೆ 10:30 ರಿಂದ ಮಧ್ಯಾಹ್ನ 2 ಗಂಟೆ ವರಗೆ ಬಸ್ ನಿಲ್ದಾಣದಲ್ಲಿ ಕೆಲವು ಗುಂಪುಗಾರಿಕೆ ಮಾಡುವ ಪೋಕರಿಗಳ, ವಿದ್ಯಾರ್ಥಿನಿರನ್ನು ಚುಡಾಯಿಸುವವರ ಹಾವಳಿ ಇರುತ್ತದೆ ಈ ವೇಳೆ ಇಲ್ಲಿ ಆರಕ್ಷಕ ಸಿಬ್ಬಂದಿಗಳ ಅವಶ್ಯಕತೆ ಇರುತ್ತದೆ ಮತ್ತು ಬಸ್ ನಿಲ್ದಾಣದ ಭದ್ರತಾ ಸಿಬ್ಬಂದಿಗಳು ಇತ್ತ ಲಕ್ಷ್ಯ ವಹಿಸಬೇಕಿದೆ.ಬಸ್ ನಿಲ್ದಾಣದ ಕಾಂಪೌಂಡ್ ಗೋಡೆಗಳ ಮೇಲೆ ವಿದ್ಯಾರ್ಥಿಗಳು ಕುಳಿತು ಕೊಳ್ಳಬೇಡಿ ಎಂದರು ಕುಳಿತು ಕೊಳ್ಳುತ್ತಾರೆ ಬಸ್ ನ ಸೀಟ್ ಹರಿಯುವುದು ,ಕಿಟಕಿ ಗ್ಲಾಸ್ ಗಳನ್ನು ಹಾನಿ ಮಾಡುವುದು ಮಾಡುತ್ತಾರೆ ಎಂದು ಹೆಸರು ಹೇಳಲು ಇಚ್ಛಿಸದ ಸಾರಿಗೆ ಸಿಬ್ಬಂದಿ ಹೇಳುತ್ತಾರೆ.ಕಾಲೇಜು ವಿದ್ಯಾರ್ಥಿಗಳ ಈ ವರ್ತನೆ ಶಿಕ್ಷಣ ಕಲಿಯಲು ಬಂದವರು ಸಂಸ್ಕಾರ ಮರೆಯುತ್ತಿದ್ಧಾರೆ, ತಮ್ಮ ಮನೆಯಲ್ಲೂ ಅಕ್ಕ ತಂಗಿ ಇರುವುದನ್ನು ಮರೆತು ಬೇರೆ ಹೆಣ್ಣುಮಕ್ಕಳಿಗೆ ತೊಂದರೆ ನೀಡುತ್ತಿದ್ದಾರೆ ಇಂತಹ ದುಷ್ಟ ಮನಸ್ಸಿನವರಿಗೆ ಸಾರ್ವಜನಿಕವಾಗಿ ತಕ್ಕ ಪಾಠವನ್ನು ಪೋಲಿಸರು ಕಲಿಸಬೇಕು ಎಂಬುದು ಕಾಲೇಜು ವಿದ್ಯಾರ್ಥಿನಿಯರ ವಾದವಾಗಿದೆ.
ಬಸ್ ನಿಲ್ದಾಣ ಸಿಸಿ ಕ್ಯಾಮರಾಗಳ ಅಳವಡಿಕೆ ಮಾಡಿ; ಮುದ್ದೇಬಿಹಾಳ ಪಟ್ಟಣದ ಬಸ್ ನಿಲ್ದಾಣದಲ್ಲಿ ಬಹುತೇಕ ಕ್ಯಾಮರಾಗಳು ಕಾರ್ಯ ನಿರ್ವಹಿಸುತ್ತಿಲ್ಲ ಈ ಕ್ಯಾಮರಾಗಳ ನಿರ್ವಹಣೆ ಜಿಲ್ಲೆಯ ಡಿಲಕ್ಸ್ ಕಂಪನಿ ಮಾಡುತ್ತಿದ್ದು ಕೂಡಲೇ ಎಲ್ಲಾ ಸಿಸಿ ಕ್ಯಾಮರಾಗಳ ಚಾಲನೆ ಜೊತೆಗೆ ಮಹಿಳೆಯರ ವಿಶ್ರಾಂತಿ ಕೊಠಡಿ ಭಾಗದಲ್ಲಿ ಸಹ ಸಿಸಿ ಕ್ಯಾಮರಾ ಅಳವಡಿಸಬೇಕು ಈ ಕ್ಯಾಮರಾಗಳ ಚಲನವಲನ ಪೋಲಿಸ್ ಠಾಣೆಯಲ್ಲಿ ವೀಕ್ಷಿಸುವ ವ್ಯವಸ್ಥೆ ಆಗಬೇಕು.
ಬಸ್ ನಿಲ್ದಾಣದಲ್ಲಿ ಪೊಲೀಸ್ ಕೂಠಡಿ ಆರಂಭಿಸಬೇಕು; ಪಟ್ಟಣದ ಬಸ್ ನಿಲ್ದಾಣದಲ್ಲಿ ಪೋಲಿಸ್ ಕೂಠಡಿ ವ್ಯವಸ್ಥೆ ಇದೆ ಈ ವಿದ್ಯಾರ್ಥಿಗಳ ಹಾವಳಿಗಾಗಿ ಮೀಸಲು ಇಟ್ಟಿದೆ ಇಲ್ಲಿ ಕಾಯಂ ಒಬ್ಬರು ಪೋಲಿಸ್ ಪೇದೆ ಇರುವಂತೆ ಮಾಡಿದರೆ ವಿದ್ಯಾರ್ಥಿಗಳ ಆಟಾಟೋಪಕ್ಕೆ ಬ್ರೇಕ್ ಹಾಕಬಹುದು.
ಧೂಳು ತಿನ್ನುತ್ತಿರುವ ಮಹಿಳಾ ವಿಶ್ರಾಂತಿ ಕೂಠಡಿ; ಬಸ್ ನಿಲ್ದಾಣದಲ್ಲಿರುವ ಮಹಿಳಾ ವಿಶ್ರಾಂತ ಕೊಠಡಿ ಮಹಿಳೆಯರಿಗಾಗಿ ಇದ್ಧರು ಇಲ್ಲಿ ಮಾತ್ರ ಬೀಗ ಜಡಿಯಲಾಗಿದೆ ಮಹಿಳೆಯರು, ಕಾಲೇಜು ವಿದ್ಯಾರ್ಥಿನಿಯರು ಕುಳಿತು ಕೂಳ್ಳುವ ಈ ಕೂಠಡಿ ಧೂಳು ತಿನ್ನುತ್ತಿದ್ದು ಅದನ್ನು ಮಹಿಳೆಯರ ಬಳಕೆಗೆ ಅವಕಾಶ ಮಾಡಿಕೊಡಬೇಕು.
ಕುಡಿಯುವ ನೀರಿನ ವ್ಯವಸ್ಥೆ ಮಾಡಿ; ಪಟ್ಟಣದ ಶ್ವೇತಾಂಬರ ಜೈನ್ ಸಮಾಜದವರು ಲಕ್ಷಾಂತರ ರೂ ವ್ಯಯಿಸಿ ಶುದ್ಧ ಕುಡಿಯುವ ನೀರಿನ ಘಟಕದ ವ್ಯವಸ್ಥೆ ಮಾಡಿದ್ದರು ಅದನ್ನು ಸರಿಯಾಗಿ ಬಳಕೆ ಮಾಡದೆ ಹಾಳು ಗೆಡವಿದ್ದು ಸಾರಿಗೆ ಇಲಾಖೆಯ ಅಧಿಕಾರಿಗಳು ಅದನ್ನು ದುರಸ್ತಿಗೂಳಸಿ ಸಾರ್ವಜನಿಕ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು.

ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿ ನಿಯರನ್ನು ಚುಡಾಯಿಸುವ ಕಿಟಲೆ ಮಾಡುವವರ ವಿರುದ್ಧ ದೂರು ನೀಡಲು ಪೋಲಿಸ್ ಇಲಾಖೆ ಬಸ್ ನಿಲ್ದಾಣದಲ್ಲಿ ದೂರು ಪಟ್ಟಿಗೆ ಆರಂಬಿಸಬೇಕು ಮತ್ತು ಠಾಣೆಯ ಪೋನ್ ನಂಬರ್ ಕರೆ ಮಾಡಲು ಸೂಚಿಸಬೇಕು.
