ಉದಯವಾಹಿನಿ, ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಅವರು ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ನಡುವೆಯೇ ರಶ್ಮಿಕಾ ಅವರ ತಾಯಿ ಅವರು ಮಾತನಾಡಿದ್ದಾರೆ ಎನ್ನಲಾದ ಅಡಿಯೊ ಒಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿತ್ತು. ಆ ಅಡಿಯೊವನ್ನು ಕೂಡಲೆ ಅಳಿಸಿಹಾಕುವಂತೆ ಸೂಚನೆ ನೀಡಿದ್ದಾರೆ.
ಈ ಆಡಿಯೊ ಕುರಿತು ನಟಿ ರಶ್ಮಿಕಾ ಮಂದಣ್ಣ ಸಾಮಾಜಿಕ ಮಾಧ್ಯಮದ ಇನ್‌ಸ್ಟಾಗ್ರಾಂನಲ್ಲಿ ಸ್ಟೋರಿ ಹಾಕುವ ಮೂಲಕ ಎಚ್ಚರಿಕೆ ನೀಡಿದ್ದಾರೆ. ಪೋಸ್ಟ್‌ನ ಕೊನೆಯಲ್ಲಿ ಕನ್ನಡದಲ್ಲೇ ಎಚ್ಚರಿಕೆ ನೀಡಿರುವ ಅವರು ತಮ್ಮ ಖಾಸಗಿ ಜೀವನವನ್ನು ಅಪಪ್ರಚಾರ ಮಾಡಿದವರು, ಕಳೆದ 24 ಗಂಟೆಯಿಂದ ಆಡಿಯೋ ಹಂಚಿಕೊಂಡವರು ಅದನ್ನು ಕೂಡಲೇ ಅಳಿಸಿ ಹಾಕುವಂತೆ ತಿಳಿಸಿದ್ದಾರೆ. ಕಳೆದ 8 ವರ್ಷಗಳಿಂದ ಕೆಲವರು ನನ್ನನ್ನು ಬೆಂಬಲಿಸಿದರೆ, ಮಾಧ್ಯಮದ ಒಂದು ವರ್ಗವಾಗಿರುವ ಸಾಮಾಜಿಕ ಮಾಧ್ಯಮದ ಕೆಲವು ವ್ಯಕ್ತಿಗಳು ನನ್ನ ವಿರುದ್ಧ ಸುಳ್ಳು ಮಾಹಿತಿ ಹಂಚಿಕೊಂಡು ಕಿರುಕುಳ ನೀಡಿದ್ದಾರೆ. ನನ್ನ ಮೇಲೆ ನಿರಂತರವಾಗಿ ದಾಳಿ ಮಾಡಿದ್ದಾರೆ.
ನಾನು ಹೇಳಿದ ಮಾತುಗಳನ್ನು ಸಂದರ್ಭಕ್ಕೆ ತಕ್ಕಂತೆ ಬಳಸದೆ, ತಿರುಚಲಾಗಿದೆ. ನಾನು ಆಡದ ಮಾತುಗಳನ್ನು ಸುಳ್ಳು ಕಥೆಗಳನ್ನಾಗಿ ಸೃಷ್ಟಿ ಮಾಡಿದ್ದಾರೆ. ಕೇವಲ ಹೆಚ್ಚು ವೀಕ್ಷಣೆ ಪಡೆಯುವ ಉದ್ದೇಶದಿಂದ ನನ್ನ ವಿರುದ್ಧ ಸುಳ್ಳು ಸಂದೇಶ ಹರಡಲಾಗಿದೆ. ಸಾರ್ವಜನಿಕ ಜೀವನದಲ್ಲಿ ಇರುವುದರಿಂದ ನಾನು ತಾಳ್ಮೆಯಿಂದ, ಮೌನದಿಂದ ಇದ್ದೆ.

Leave a Reply

Your email address will not be published. Required fields are marked *

error: Content is protected !!