ಉದಯವಾಹಿನಿ,ಚಿಂಚೋಳಿ: ದೇಶವನ್ನು ಕಟ್ಟಲು ಉನ್ನತಮಟ್ಟಕ್ಕೆ ಸಾಗಲು ಶಿಕ್ಷಣದ ಅವಶ್ಯಕ ಅದಕಾರಣ ಶಿಕ್ಷಕರ ಗುರುಗಳ ಪಾತ್ರ ಬಹುಮುಖ್ಯವಾಗಿದೆ ಎಂದು ಶಾಸಕ ಡಾ.ಅವಿನಾಶ ಜಾಧವ ಹೇಳಿದರು.ಪಟ್ಟಣದ ಚಂದಾಪೂರದ ಬಂಜಾರ ಭವನದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಪ್ರಾಥಮಿಕ ಫ್ರೌಢ ಶಾಲಾ ಶಿಕ್ಷಕರ ಸಂಘದ ಸಂಯುಕ್ತ ಆಶ್ರಯದಲ್ಲಿ 2023-24ನೇ ಸಾಲಿನ ತಾಲ್ಲೂಕಾ ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ನಿವೃತ್ತ ಮತ್ತು ಉತ್ತಮ ಶಿಕ್ಷಕರಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು,ಶಿಕ್ಷಕರು ನನಗೆ ಶಿಕ್ಷಣ ಕೊಟ್ಟಿದ್ದಕ್ಕಾಗಿ ನಾನು ಶಾಸಕನಾಗಲು ಕಾರಣವಾಯಿತು.ನನ್ನ ಮತಕ್ಷೇತ್ರದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದೇನೆ,ಶಿಕ್ಷಕರು ಸಹ ವಿಶ್ವಾಸವನ್ನು ಇಟ್ಟಿಕೊಂಡು ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಬೇಕು,ಎಲ್ಲೋರಕ್ಕಿಂತ ದೊಡ್ಡ ಹುದ್ದೆ ಶಿಕ್ಷಕರ ಗುರುಗಳ ಹುದ್ದೆ ದೊಡ್ಡದು,ಮಕ್ಕಳಲ್ಲಿಯು ಸಹ ಭಕ್ತಿ ಭಯ ಇರಬೇಕು ಗುರುಗಳಿಗೆ ಮರ್ಯಾದೆ ಕೊಡಬೇಕು ಶಿಕ್ಷಕರು ಸಹ ವಿಶ್ವಾಸ ಗಳಿಸಿಕೊಂಡು ಒಳ್ಳೆಯ ಶಿಕ್ಷಣಕೊಟ್ಟು ದೇಶವನ್ನು ಕಟ್ಟುವಂತ ಕೆಲಸ ಮಾಡಬೇಕು ಎಂದರು.ವಿಶೇಷ ಉಪನ್ಯಾಸ ನೀಡಿದ ಯಾದಗಿರಿ ಮತ್ತು ರಾಯಚೂರು ಶ್ರೀರಾಮಕೃಷ್ಣ ವಿವೇಕಾನಂದ ಆಶ್ರಮದ ಸಂಚಾಲಕ ಪಿ.ವೇಣುಗೋಪಾಲ ಮಾತನಾಡಿ ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿ ಶಿಕ್ಷಣದ ಮೌಲ್ಯವನ್ನು ಶಿಕ್ಷಕರು ಉತ್ತಮ ರೀತಿಯಲ್ಲಿ ತಿದ್ದಿ ಹೇಳಬೇಕು ಇಲ್ಲಾವಾದರೆ ಕೊನೆಯ ಹಂತದಲ್ಲಿ ಶಿಕ್ಷಣ ಕಲಿಸುವುದು ಅಸಾಧ್ಯ,ಮಕ್ಕಳು ಲವಲವಿಕೆಯಿಂದ ಕೂಡಿದಕ್ಕೀಂತ ಹೆಚ್ಚು ಶಿಕ್ಷಕರು ಲವಲವಿಕೆಯಿಂದ ಕೂಡಿರಬೇಕು ಆಗ ಉತ್ತಮ ಶಿಕ್ಷಣ ಮಕ್ಕಳಿಗೆ ಕೂಡಲು ಸಾಧ್ಯವಾಗುತ್ತದೆ.ಶಿಕ್ಷಣ ಕೊಡಲು ಶಿಕ್ಷಕರಿಗೆ ನೇಮಿಸುತ್ತಾರೆ ಹೊರತು ದುಡ್ಡು ಗಳಿಸುವುದಕ್ಕಾಗಿ ಶಿಕ್ಷಕರ ಹುದ್ದೆ ಸರಿಯಲ್ಲ,ಶಿಕ್ಷಕರು ದೇಶ ಕಟ್ಟುವ ಕೆಲಸ ಮಾಡಿ ದೇಶದ ಬಗ್ಗೆ ಮಕ್ಕಳಲ್ಲಿ ಅಭಿಮಾನ ಬೆಳೆಸಬೇಕು,ಯಾವ ಮನುಷ್ಯ ಸತ್ಯ ಧರ್ಮದಿಂದ ಇರಲು ಸಾಧ್ಯವೊ ಅಂಥಹ ಮನುಷ್ಯನಲ್ಲಿ ಶಿಕ್ಷಣದ ಶಕ್ತಿ ಬರುತ್ತದೆ,ಶಿಕ್ಷಕರು 24ತಾಸು  ಆದರ್ಶವಾಗಿ ಇದ್ದು ಮಕ್ಕಳಿಗೆ ಶಿಕ್ಷಣ ಕೊಟ್ಟು ದೇಶ ಕಟ್ಟುಲು ಪರಿವರ್ತಿಸಿ ಎಂದರು.ಕ್ಷೇತ್ರ ಶಿಕ್ಷಣಾಧಿಕಾರಿ ಹಣಮಂತ ಬಿ.ರಾಠೋಡ್, ಪ್ರಾಸ್ತಾವಿಕವಾಗಿ ಮಾತನಾಡಿದರು,ಅಕ್ಷರ ದಾಸೋಹ ಅಧಿಕಾರಿ ಜಯಪ್ಪ ಚಾಪಲ್ ಸ್ವಾಗತಿಸಿದರು, ಅಶೋಕ ಹೂವಿನಭಾವಿ ನಿರೂಪಿಸಿ ವಂದಿಸಿದರು.
ಈ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ದೇವೀಂದ್ರಪ್ಪಾ ಹೋಳ್ಕರ,ಖುರ್ಷಿದ್ ಮಿಯಾ,ಸುರೇಶ ಕೊರವಿ,ಮಾರುತಿ ಪತಂಗೆ,ಕಾಶಿನಾಥ ಧನ್ನಿ,ರಾಧಾಭಾಯಿ,ಭೀಮರೆಡ್ಡಿ,ಶಾಮರಾವ,ಮಾಣಿಕಪ್ಪ,ಮಕ್ಸೂದ್ ಅಲಿ,ನಾಗಶೇಟ್ಟಿ ಭದ್ರಶೇಟ್ಟಿ,ನಾಗಶೇಟ್ಟಿ ಮಾಲಿ,ರಾಜಶೇಖರ ಮುಸ್ತಾರಿ,ನಾಗೇಂದ್ರಪ್ಪ,ಮಲ್ಲಿಕಾರ್ಜುನ ನೆಲ್ಲಿ,ಉತ್ತಮ ದೊಡ್ಡಮನಿ,ಮಲ್ಲಿನಾಥ,ಶಿವಪ್ರಸಾದ,ಅಮೃತಪ್ಪ ಕೇರೋಳ್ಳಿ, ಆನೀದ,ಸುರೇಶ,ಬಂಡೆಪ್ಪ,ಗೋಪಾಲರಾವ ಕಟ್ಟಿಮನಿ,ಕೆಎಂಬಾರಿ,ಬಾಬುರಾವ,ಶ್ರೀಶೈಲ ನಾಗವಿ,ರಾಕೇಶ,ರೀಜ್ವಾನಬೇಗಂ,ಬಸವರಾಜ ಘೇನಿ,ಅನೇಕರಿದ್ದರು.
ಶೈಕ್ಷಣಿಕದಲ್ಲಿ ಜಿಲ್ಲೆಯಲ್ಲಿ ಚಿಂಚೋಳಿ ಪ್ರಥಮ; ಬಿಇಓ ರಾಠೋಡ್
ಶೈಕ್ಷಣಿಕವಾಗಿ ಕಲಬುರ್ಗಿ ಜಿಲ್ಲೆಯಲ್ಲಿ ಚಿಂಚೋಳಿ ಪ್ರಥಮಸ್ಥಾನದಲ್ಲಿದೆ,424ಶಾಲೆಗಳು,42,427ಮಕ್ಕಳ ದಾಖಲಾತಿಗಳು,627ಶಿಕ್ಷಕರು,459ಶಿಕ್ಷಕರ ಹುದ್ದೆ ಖಾಲಿಯಿವೆ,ಅತಿಥಿ ಶಿಕ್ಷಕರನ್ನು ನೇಮಿಸಿಕೊಂಡಿದ್ದೇವೆ,2023-24ರ ಶಾಲಾಕಾಲೇಜುಗಳ ಅಭಿವೃದ್ಧಿಗಾಗಿ ಅನೇಕ ಯೋಜನೆಗಳು ರೂಪಿಸಿಕೊಂಡಿದ್ದೇವೆ,ಮೂಲಭೂತ ಸೌಕರ್ಯಕ್ಕಾಗಿ 50ಶಾಲೆಗಳ ಕ್ರೀಯಾಯೋಜನೆ ಸಿದ್ದಪಡಿಸಲಾಗಿದೆ.
ಶಾಲೆಯಲ್ಲಿ ಮಕ್ಕಳ ಗೈರುಹಾಜರಿ ಹೆಚ್ಚಳವಾಗುತ್ತಿದ್ದು ವಲಸೆ ಹೋಗುವ ಕಾರಣ ಕೇಳಿಬರುತ್ತಿದ್ದು,ಮಕ್ಕಳ ಕಲಿಕಾ ಸಲೂವಾಗಿ ಜಾಗೃತಿ ಮೂಡಿಸಲು ಶಾಲೆಗಳಲ್ಲಿ ಕಾರ್ಯಾಗಾರ ಕಾರ್ಯಕ್ರಮ ಮಾಡಲಾಗುತ್ತಿದೆ,ಹೈಸ್ಕೂಲ್ ಶಾಲೆಯ ಶಿಕ್ಷಕರು 200ಜನ ಶಿಕ್ಷಕರು ಕೆಲಸ ಮಾಡುತ್ತಿದ್ದು,77ಜನ ಹುದ್ದೆ ಖಾಲಿಯಿವೆ ತಾಲ್ಲೂಕಿನ ಶಿಕ್ಷಕರ ಪ್ರತಿಶತಃ 100ರಷ್ಟು ಹಾಜರಾತಿ ಇದ್ದು ಉತ್ತಮ ಶಿಕ್ಷಣ ಮಕ್ಕಳಿಗೆ ದೊರೆಯುತ್ತಿದೆ :- ಹಣಮಂತ ಬಿ.ರಾಠೋಡ್  ಕ್ಷೇತ್ರ ಶಿಕ್ಷಣಾಧಿಕಾರಿ ಚಿಂಚೋಳಿ.

Leave a Reply

Your email address will not be published. Required fields are marked *

error: Content is protected !!