
ಉದಯವಾಹಿನಿ,ಚಿಂಚೋಳಿ: ಕ್ಷೇತ್ರದಲ್ಲಿ ಚುನಾವಣಾ ಸಂದರ್ಭದಲ್ಲಿ ಪಕ್ಷಭೇಧ ಮಾಡೋಣ ನಂತರ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ಎಲ್ಲೋರು ಕೈಜೋಡಿಸಿ ಹಗಲಿರುಳು ಶ್ರಮಿಸಲು ನಾನು ಸಿದ್ದನಿದ್ದೇನೆ ಎಂದು ಶಾಸಕ ಡಾ.ಅವಿನಾಶ ಜಾಧವ ಹೇಳಿದರು.ಪಟ್ಟಣದ ಚಂದಾಪೂರದ ಬಸವನಗರದಲ್ಲಿ ಪುರಸಭೆಯ 2022-23ನೇ ಸಾಲಿನ 15ನೇ ಹಣಕಾಸು ಯೋಜನೆಯಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ಸಿಸಿ ರಸ್ತೆ,ಚರಂಡಿ,ಉದ್ಯಾನವನ ಉನ್ನತಿಕರಣ,ಪೌರ ಕಾರ್ಮಿಕರ ವಿಶ್ರಾಂತಿ ಕೋಣೆ ಇತ್ಯಾದಿ ಕಾಮಗಾರಿಗಳ 82ಲಕ್ಷ ರೂ.ಅಡಿಗಲ್ಲು ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು,ಕಾಮಗಾರಿಯ ಅವಧಿಯಲ್ಲಿಯೇ ಕೆಲಸ ಮಕ್ತಾಯಗೊಳಿಸಿ ಉತ್ತಮ ಗುಣಮಟ್ಟದ ಕಾಮಗಾರಿ ಮಾಡಬೇಕು.
ಇನ್ನು ಅನೇಕ ಕಾಮಗಾರಿಗಳು 10-15ವರ್ಷಗಳು ಗತಿಸಿದರು ಇನ್ನು ಪೂರ್ಣಗೊಳ್ಳದೆ ಹಾಗೆ ಉಳಿದಿವೆ ಅದಕಾರಣ ಆದಷ್ಟು ಬೇಗ ಕಾಮಗಾರಿ ಮುಗಿಸಬೇಕು.
ಪುರಸಭೆ ವ್ಯಾಪ್ತಿಗೆ ಹೆಚ್ಚಿನ ಅನುದಾನಕ್ಕಾಗಿ ಪಕ್ಷಭೇಧ ಮರೇತು ಸರ್ವ ಸದಸ್ಯರು ಸೇರಿಕೊಂಡು ಪೌರಾಡಳಿತ ಸಚಿವರ ಹತ್ತಿರ ನಿಯೋಗ ಹೋಗಿ ಅನುದಾನ ಬಿಡುಗಡೆ ಮಾಡಿ ಪಟ್ಟಣ ಅಭಿವೃದ್ಧಿ ಮಾಡೋಣ ಎಂದರು. ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಆನಂದಕುಮಾರ ಟೈಗರ,ಅಬ್ದುಲ್ ಬಾಷೀದ್ ಮಾತನಾಡಿದರು. ಪುರಸಭೆ ಮುಖ್ಯಾಧಿಕಾರಿ ಕಾಶಿನಾಥ ಧನ್ನಿ ಸ್ವಾಗತಿಸಿದರು,ಎಫ್.ಡಿ.ಎ ಸತೀಶ ನಿರೂಪಿಸಿದರು, ನಿಂಗಮ್ಮಾ ಬಿರಾದಾರ ವಂದಿಸಿದರು. ಈ ಸಂದರ್ಭದಲ್ಲಿ ಜೆಇ ದೇವೀಂದ್ರಪ್ಪಾ ಕೋರವಾರ,ಸವಿತಾ,ಕೆಎಂ ಬಾರಿ,ಶಬ್ಬೀರ ಅಹೇಮದ್,ಅನ್ವರ ಖತೀಬ್,ಜಗನ್ನಾಥ,ಜಗನ್ನಾಥ ಕಟ್ಟಿ,ಬಸವರಾಜ ಸಿರಸಿ,ಶಿವಕುಮಾರ,ಲಕ್ಷ್ಮಿಕಾಂತ,ಶಶಿ ಕಳಸ್ಕರ,ಖಲೀಲ್ ಪಟೇಲ,ನಾಗೇಂದ್ರಪ್ಪ ಗುರಂಪಳ್ಳಿ,ಸುಶೀಲ ಬೋಮ್ನಳ್ಳಿ,ರಾಧಾಭಾಯಿ,ಸುಶೀಲಭಾಯಿ, ಹಾದಿಸಾಬ,ರಾಜು ಪವ್ಹಾರ,ಪ್ರೇಮಸಿಂಗ್ ಜಾಧವ,ಸಂತೋಷ ಗಡಂತಿ,ಸುಭಾಷ್ ಸೀಳಿನ,ಅನೇಕರಿದ್ದರು.
