
ಉದಯವಾಹಿನಿ ಮುದ್ದೇಬಿಹಾಳ : ತಾಲ್ಲೂಕಿನ ತಹಸೀಲ್ದಾರ ಕರ್ತವ್ಯ ವಹಿಸಿಕೊಂಡ ಬಲರಾಮ್ ಕಟ್ಟಿಮನಿ.ತಾಲೂಕು ಗ್ರಾಮ ಆಡಳಿತ ಸಂಘವತಿಯಿಂದ ಹಾಗೂ ಕಾರ್ಯಾಲಯದ ಸಿಬ್ಬಂದಿ ವರ್ಗದವರಿಂದ ಹೂ ಗುಚ್ಚಾವನ್ನು ನೀಡಿ ಸದಸ್ಯರಿಂದ ಪ್ರೀತಿಯ ಸ್ವಾಗತ ಮಾಡಿಕೊಂಡರು. ಅದರ ಜೊತೆಯಲ್ಲೇ ನಿಖಠ ಪೂರ್ವ ತಹಸೀಲ್ದಾರರಾದ ಸಿ.ಎ. ಗುಡದಿನ್ನಿಯವರನ್ನು ನೆನಪಿನ ಕಾಣಿಕೆಯನ್ನು ನೀಡಿ ಬೀಳ್ಕೊಡುಗೆ ಮಾಡಲಾಯಿತು. ಇದೆ ಸಂದರ್ಭದಲ್ಲಿ ಗ್ರೇಡ 2 ತಹಸೀಲ್ದಾರ ಜಿ ಎನ್ ಕಟ್ಟಿ. ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷರಾದ ಗಂಗಾಧರ ಜೂಲಗುಡ್ಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಿಯಾಜ ನಾಯ್ಕೋಡಿ, ಜಿಲ್ಲಾ ಸಂಘದ ಖಜಾಂಚಿಗಳಾದ ರಾಮು ಹೊಸೂರ, ತಾಲೂಕ ಅಧ್ಯಕ್ಷ ಮನೋಜ ರಾಠೋಡ.. ಶಿರಸ್ತೇದಾರರಾದ ಬಾಗೇವಾಡಿ, ಶ್ರೀಮತಿ ಶಕುಂತಲಾ ಸಜ್ಜನ, ಕಂದಾಯ ನಿರೀಕ್ಷಕಾರಾದ ಎಮ್.ಎಚ್.ಮಾಗಿ. ಡಿ.ಎಸ್ ತಳವಾರ, ಶ್ರೀ ನಿವಾಸ ಹುನಗುಂದ, ಎಮ್.ಸಿ ನದಾಫ್ , ಅಮೋಘಸಿದ್ದ. ಬಾಬಾನಗರ, ರಫೀಕ ಮುಲ್ಲಾ, ಹರ್ಷತಗೌಡ. ಮತ್ತು ಸಿಬ್ಬಂದಿ ವರ್ಗದವರಿಗೂ ಉಪಸ್ಥಿತರಿದ್ದರು.
