ಉದಯವಾಹಿನಿ, ಮುಂಬೈ: ದಿವಂಗತ ನಟಿ ಶ್ರೀದೇವಿ ಮತ್ತು ಚಲನಚಿತ್ರ ನಿರ್ಮಾಪಕ ಮತ್ತು ನಿರ್ದೇಶಕ ಬೋನಿ ಕಪೂರ್ ಅವರ ಪುತ್ರಿ ಜಾನ್ವಿ ಕಪೂರ್ ೨೦೧೮ ರಲ್ಲಿ ’ಧಡಕ್’ ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿದರು ಮತ್ತು ನಂತರ ಅವರು ಹಿಂತಿರುಗಿ ನೋಡಲಿಲ್ಲ. ಇಂದು ನಟಿ ಒಟಿಟಿಯಿಂದ ದೊಡ್ಡ ಪರದೆಯವರೆಗಿನ ಚಿತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ.ಜಾಹ್ನವಿ ಕೊನೆಯದಾಗಿ ವರುಣ್ ಧವನ್ ಜೊತೆ ಬಾವಲ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು, ಆದರೂ ಚಿತ್ರ ಹಿಟ್ ಆಗಲಿಲ್ಲ ಆದರೆ ಜಾನ್ವಿ ತನ್ನ ನಟನೆಯಿಂದ ಸಾಕಷ್ಟು ಸುದ್ದಿ ಮಾಡಿದಳು. ತನ್ನ ನಟನೆಯ ಹೊರತಾಗಿ, ಜಾನ್ವಿ ತನ್ನ ಗ್ಲಾಮರಸ್ ಫೋಟೋಶೂಟ್‌ಗಳಿಂದಲೂ ಸುದ್ದಿಯಲ್ಲಿದ್ದಾಳೆ. ಜಾನ್ವಿ ಕಪೂರ್ ತನ್ನ ಇತ್ತೀಚಿನ ಫೋಟೋಶೂಟ್‌ಗಾಗಿ ಗಮನ ಸೆಳೆದಿದ್ದಾರೆ. ಆದರೆ, ಜಾನ್ವಿಯ ಈ ಫೋಟೋಶೂಟ್ ಬೆಳಕಿಗೆ ಬಂದ ನಂತರ, ಖ್ಯಾತ ಬಾಲಿವುಡ್ ನಟಿ ಜೀನತ್ ಅಮನ್ ಅವರ ಮೇಲೆ ಕಳ್ಳತನದ ಆರೋಪ ಮಾಡಿದ್ದಾರೆ. ಯಾಕೆ ಎಂದು ಮುಂದೆ ಓದಿ.
ಜಾನ್ವಿ ಕಪೂರ್ ತನ್ನ ಸಾಮಾಜಿಕ ಮಾಧ್ಯಮದಲ್ಲಿ ಸಣ್ಣ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಈ ವೀಡಿಯೊದಲ್ಲಿ, ನಟಿ ಜೀನತ್ ಅಮಾನ್ ಅವರ ಲುಕ್‌ನಲ್ಲಿ ಜಾನ್ವಿ ಕಪೂರ್ ಕಾಣಿಸಿಕೊಂಡಿದ್ದು ಇದರ ಮೂಲಕ ಜಾನ್ವಿ ಕಪೂರ್ ಎಲ್ಲರ ಗಮನ ಸೆಳೆದರು. ಈ ವಿಡಿಯೋದಲ್ಲಿ ಆಕೆ ಹಾಟ್ ಬಿಳಿ ಡ್ರೆಸ್ ಧರಿಸಿ ಕಾಣಿಸಿಕೊಂಡಿದ್ದಾಳೆ.೧೯೮೦ರಲ್ಲಿ ಬಿಡುಗಡೆಯಾದ ಹಿಂದಿ ಚಿತ್ರಗಳ ಪೈಕಿ ಅತಿ ಹೆಚ್ಚು ಗಳಿಕೆ ಮಾಡಿದ ದಾಖಲೆಯನ್ನು ನಿರ್ಮಿಸಿದ ಚಿತ್ರ ಕುರ್ಬಾನಿ ಈ ಚಿತ್ರದ ಲೈಲಾ ಮೈನ್ ಲೈಲಾ ಹಾಡು ಮತ್ತು ಜೀನತ್ ಅಮಾನ್ ಅವರ ಚೆಲುವು, ವೈಯಾರ,ಬಿಂಕ, ಬಿನ್ನಾಣ, ಉಡುಗೆ -ತೊಡುಗೆ ಇಂದಿಗೂ ಮರೆಯಲು ಸಾಧ್ಯವೇ. ಇದೀಗ ಜಾಹ್ನವಿ ಲೈಲಾ ಮೈನ್ ಲೈಲಾ ಹಾಡಿನಲ್ಲಿ ಜೀನತ್ ಅವರು ಧರಿಸಿದ್ದ ಉಡುಗೆ -ತೊಡುಗೆ-ಅಲಂಕಾರದೊಂದಿಗೆ ಜೀನತ್ ಶೈಲಿಯ ಮರುಸೃಷ್ಟಿ ವೀಡಿಯೊದಲ್ಲಿ ಕಾಣಬಹುದು . ಇದರೊಂದಿಗೆ, ನಟಿ ಲೈಲಾ ಮೈನ್ ಲೈಲಾ ಹಾಡಿನ ಸಾಲುಗಳನ್ನು ಸಹ ಗುನುಗುತ್ತಿದ್ದು. ವೀಡಿಯೊವನ್ನು ಹಂಚಿಕೊಳ್ಳುವಾಗ, ಅವರು ಕಾಲ್ ಮಿ ಜೆನ್ ಝಡ್-ಇನ್ನತ್ ಎಂಬ ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!