
ಉದಯವಾಹಿನಿ ರಾಯಚೂರು: ತಾಲೂಕ ಆರೋಗ್ಯ ಇಲಾಖೆ ಸಿಂಧನೂರು ಸಾಂ HBಕ್ರಾಮಿಕ ರೋಗಗಳ ಘಟಕ (ಎನ್.ಸಿ.ಡಿ ) ಕ್ಲಿನಿಕ್ ತಾಲೂಕ ಸಾರ್ವಜನಿಕ ಆಸ್ಪತ್ರೆ ಸಿಂದನೂರು ವತಿಯಿಂದ ” ವಿಶ್ವ ಆರೋಗ್ಯ ದಿನಾಚರಣೆ”ಯ ಅಂಗವಾಗಿ ಸಿಂಧನೂರು ನಗರದ ಒಳಬಳ್ಳಾರಿ ರಸ್ತೆಯಲ್ಲಿರುವ ಶ್ರೀ ಮಠ ದೇವಾ ಟ್ರಸ್ಟ್ (ರಿ)ಹರೇಟನೂರು ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದಲ್ಲಿ ಆರೋಗ್ಯ ತಪಾಸಣಾ ಶಿಬಿರ ನೆರವೇರಿತು.ಈ ಕಾರ್ಯಕ್ರಮದಲ್ಲಿ ಸಾಂಕ್ರಾಮಿಕ ರೋಗಗಳ ಘಟಕ (ಎನ್.ಸಿ.ಡಿ)ಯ ಮುಖ್ಯಸ್ಥರಾದ ಡಾ. ಸರೋಶ್ ಪಾಟೀಲ್ ಮಾತನಾಡಿ ವಿಶ್ವ ಆರೋಗ್ಯ ದಿನಾಚರಣೆಯನ್ನು ನಗರದ ಕಾರುಣ್ಯ ಆಶ್ರಮದಲ್ಲಿ ಆಶ್ರಯ ಪಡೆದಿರುವ ಹಿರಿಯ ವೃದ್ಧ ಜೀವಿಗಳು ಹಾಗೂ ವಯಸ್ಕರ ಬುದ್ಧಿಮಾಂದ್ಯ ಜೀವಿಗಳಿಗೆ ಆರೋಗ್ಯ ತಪಾಸಣೆ ಮಾಡಿ ಅವರುಗಳ ದಿನ ಆರೋಗ್ಯದ ಸಮಸ್ಯೆಗಳಿಗೆ ಸ್ಪಂದಿಸುವುದು ನಮ್ಮ ಘಟಕದ ಮೂಲ ಉದ್ದೇಶ ಜಿಲ್ಲಾ ಆರೋಗ್ಯ ಇಲಾಖೆಯ ಸೂಚನೆಯ ಮೇರೆಗೆ ಇಂದಿನ
ಈ ಆರೋಗ್ಯದಿನ ನಮ್ಮ ಘಟಕದ ಸಾಮಾಜಿಕ ಜವಾಬ್ದಾರಿಯನ್ನು ಸಮಾಜಕ್ಕೆ ತೋರಿಸಿಕೊಟ್ಟಿದೆ. ನಾನು ವೈಯಕ್ತಿಕವಾಗಿ ಕಾರುಣ್ಯ ಆಶ್ರಮಕ್ಕೆ ಸಹಾಯ ಸಹಕಾರ ನೀಡುತ್ತೇನೆ. ಇಲ್ಲಿನ ಉತ್ತಮ ಸೇವೆಗೆ ನಾನು ಮತ್ತು ನಮ್ಮ ಸ್ನೇಹ ಬಳಗ ಕಾರುಣ್ಯ ಆಶ್ರಮಕ್ಕೆ ಬೆನ್ನೆಲುಬಾಗಿರುತ್ತದೆ ಈ ಕರುಣಾಮಯಿ ಕಾರುಣ್ಯ ಕುಟುಂಬ ನಮ್ಮ ಸಿಂಧನೂರಿನ ದಾನ ಧರ್ಮದ ಸಂಸ್ಕೃತಿಯನ್ನು ನಾಡಿಗೆ ತೋರಿಸಿ ಕೊಟ್ಟಿದೆ ಎಂದು ಮಾತನಾಡಿದರು.ಈ ಕಾರ್ಯಕ್ರಮದಲ್ಲಿ ಸಾಂಕ್ರಾಮಿಕ ರೋಗಗಳ ಘಟಕದ ಸಿಬ್ಬಂದಿಗಳಾದ ಸುವರ್ಣ. ಗಾಯತ್ರಿ. ಮುತ್ತಮ್ಮ ಸುಮಾ.ಹಾಗೂ ಸಿಬ್ಬಂದಿಗಳಾದ ಡಾ. ಚನ್ನಬಸವ ಸ್ವಾಮಿ ಹಿರೇಮಠ. ಸುಜಾತ ಹಿರೇಮಠ. ಶರಣಮ್ಮ.ಮರಿಯಪ್ಪ. ಹರ್ಷವರ್ಧನ ಇವರಗಳ ನೇತೃತ್ವದಲ್ಲಿ ಎಲ್ಲರಿಗೂ ಆರೋಗ್ಯ ತಪಾಸಣೆ ಮಾಡಿ ಔಷಧಿಗಳನ್ನು ವಿತರಿಸಲಾಯಿತು.
