ಉದಯವಾಹಿನಿ, ಬೀಜಿಂಗ್: ಬದಲಾವಣೆ ಮತ್ತು ಪ್ರಕ್ಷುಬ್ಧತೆಯ ಪ್ರಪಂಚದ ಮುಖಾಂತರ ಚೀನಾ ಮತ್ತು ಯುನೈಟೆಡ್ ಸ್ಟೇಟ್ಸ್ ಪರಸ್ಪರ ಹೇಗೆ ಹೊಂದಿಕೊಳ್ಳುತ್ತವೆ ಎಂಬುದು ಮನುಕುಲದ ಭವಿಷ್ಯವನ್ನು ನಿರ್ಧರಿಸುತ್ತದೆ ಎಂದು ಚೀನಾ ಅಧ್ಯಕ್ಷ ಕ್ಷೀ ಜಿನ್‌ಪಿಂಗ್ ತಿಳಿಸಿದ್ದಾರೆ.
ಜಿನ್‌ಪಿಂಗ್ ಅವರು ಬೀಜಿಂಗ್‌ನಲ್ಲಿ ಅಮೆರಿಕಾದ ಸೆನೆಟ್ ಬಹುಮತದ ನಾಯಕ ಚಕ್ ಶುಮರ್ ನೇತೃತ್ವದಲ್ಲಿ ಆರು ಸೆನೆಟರ್‌ಗಳ ತಂಡವನ್ನು ಭೇಟಿಯಾಗಿದ್ದ ಸಂದರ್ಭದಲ್ಲಿ ಈ ವಿಚಾರ ತಿಳಿಸಿದ್ದಾರೆ. ಚೀನಾ-ಯುಎಸ್ ಸಂಬಂಧಗಳು ಮನುಕುಲದ ಹಣೆಬರಹದ ಮೇಲೆ ಪರಿಣಾಮ ಬೀರುತ್ತವೆ. ಚೀನಾ-ಯುಎಸ್ ಸಂಬಂಧಗಳನ್ನು ಸುಧಾರಿಸಲು ನಮ್ಮಲ್ಲಿ ೧,೦೦೦ ಕಾರಣಗಳಿವೆ, ಆದರೆ ಅವುಗಳನ್ನು ಹಾಳುಮಾಡಲು ಒಂದು ಕಾರಣವಿಲ್ಲ .
