ಉದಯವಾಹಿನಿ, ಚಿಕ್ಕೋಡಿ: ಯುಪಿಎಸ್‌ಸಿ ಪರೀಕ್ಷೆಯಲ್ಲಿ ಪಬ್ಲಿಕ್ ಹೀರೋ ಆಗಿದ್ದವರ ಪುತ್ರ ರಾಜ್ಯದಲ್ಲಿ ಮೊದಲ ಸ್ಥಾನ ಹಾಗೂ ದೇಶದಲ್ಲಿ 53ನೇ ರ‍್ಯಾಂಕ್ ಪಡೆದಿದ್ದಾರೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ಕಿರಣ್‌ ಕಾಮತೆ ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದ್ದಾರೆ. ಲೋಕೋಪಯೋಗಿ ಇಲಾಖೆಯಲ್ಲಿ ಎಂಜಿನಿಯರ್ ಆಗಿರುವ ಕಿರಣ್‌ ಅವರು 6ನೇ ಪ್ರಯತ್ನದಲ್ಲಿ ಯಶಸ್ಸು ಪಡೆದಿದ್ದಾರೆ.
ಕಿರಣ್‌ ಕಾಮತೆ ಅವರ ತಂದೆ ಸಣ್ಣಪ್ಪ ಅವರು ನಿಡಸೋಶಿ ಗ್ರಾಮದ ಹೀರಾ ಶುಗರ್ಸ್‌ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾಗಿ ಉದ್ಯೋಗದಲ್ಲಿದ್ದಾರೆ. ಈ ಹಿಂದೆ ಬಂಜರು ಭೂಮಿಯಲ್ಲಿ ಕೆರೆ ನಿರ್ಮಿಸಿ ಸುತ್ತಲಿನ ಪರಿಸರವನ್ನು ಹಸಿರು ಮಾಡಿದ್ದಕ್ಕೆ ಸಣ್ಣಪ್ಪ ಅವರನ್ನು ಹೀರೋ ಕಾರ್ಯಕ್ರಮದಲ್ಲಿ ಮಾತನಾಡಿಸಲಾಗಿತ್ತು.

ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದಿದ್ದಕ್ಕೆ ಸಣ್ಣಪ್ಪ ಕಾಮತೆ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್‌ ಜಾರಕಿಹೊಳಿ ಸೇರಿ ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ. ಮಗನ ಸಾಧನೆಗೆ ತಂದೆ, ತಾಯಿ ಇಬ್ಬರು ಹರ್ಷ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!