
ಉದಯವಾಹಿನಿ ಅಫಜಲಪುರ : ತಾಲೂಕಿನ ಶ್ರೀಕ್ಷೇತ್ರ ಮಣ್ಣೂರಿನಲ್ಲಿ ಅಕ್ಟೋಬರ್ 13 ರಂದು ಶ್ರೀ 1008 ಶ್ರೀ ಮಾಧವತೀರ್ಥ ಶ್ರೀಪಾದಂಗಳವರ ಪೂರ್ವಾರಾಧನೆ ಹಾಗೂ 14 ರಂದು ಶನಿವಾರ ಶ್ರೀ 1008 ಶ್ರೀ ಮಾಧವತೀರ್ಥ ಶ್ರೀಪಾದಂಗಳವರ ಆರಾಧನಾ ಮಹೋತ್ಸವ ಉತ್ತರಾದಿ ಮಠಾಧೀಶರಾದ ಶ್ರೀ 1008 ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರ ಘನ ಅಧ್ಯಕ್ಷತೆಯಲ್ಲಿ ಜರುಗಲಿದೆ.13 ರಂದು ಬೆಳಿಗ್ಗೆ 6 ಗಂಟೆಗೆ ಸುಪ್ರಭಾತ ನಿರ್ಮಾಲ್ಯ ವಿಸರ್ಜನೆ 7 ರಿಂದ 8 ಗಂಟೆಯವರೆಗೆ ಉತ್ತರಾದಿ ಮಠಾಧೀಶರಾದ ಶ್ರೀ 1008 ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರಿಂದ ಶ್ರೀಮನ್ಯಾಯ ಸುಧಾ ಪಾಠ ನಂತರ ಶ್ರೀ 1008 ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರ ಕರಕಮಲಗಳಿಂದ ಶ್ರೀ ವೇದೇಶತೀರ್ಥ ಗ್ರಂಥಾಲಯ ಹಾಗೂ ಶ್ರೀ ಯಾದವಾರ್ಯ ಸಂಶೋಧನಾ ಮಂದಿರ ಲೋಕಾರ್ಪಣೆಗೊಳ್ಳುವುದು.
14 ರಂದು ಶನಿವಾರ ಬೆಳಿಗ್ಗೆ 6 ಗಂಟೆಗೆ ಸುಪ್ರಭಾತ ನಿರ್ಮಾಲ್ಯ ವಿಸರ್ಜನೆ 7 ರಿಂದ 8 ಗಂಟೆಯವರೆಗೆ ಶ್ರೀಗಳವರಿಂದ ಶ್ರೀಮನ್ಯಾಯ ಸುಧಾ ಪಾಠ 8 ರಿಂದ 9 ಗಂಟೆಯವರೆಗೆ ಪಾದಪೂಜೆ ಮುದ್ರಾ ಧಾರಣೆ ವಿದ್ಯಾರ್ಥಿಗಳಿಂದ ಶಾಸ್ತ್ರಾನುವಾದ 10 ಗಂಟೆಗೆ ಮಹಾ ರಥೋತ್ಸವ 11 ಗಂಟೆಗೆ ಶ್ರೀಪಾದಂಗಳವರಿಂದ ಸಂಸ್ಥಾನ ಪೂಜೆ ಮಹಾ ಪಂಚಾಮೃತ ಅಭಿಷೇಕ ಹಸ್ತೋದಕ ತೀರ್ಥ ಪ್ರಸಾದ ಸಾಯಂಕಾಲ 6 ಗಂಟೆಗೆ ಭಜನೆ ವಿದ್ವಾಂಸರಿಂದ ಪ್ರವಚನ ಮಹಾಮಂಗಳಾರತಿ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.ಕಾರಣ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಗುರುಗಳ ಅನುಗ್ರಹಕ್ಕೆ
ಪಾತ್ರರಾಗಬೇಕು ಎಂದು ಶ್ರೀ ವೇದೇಶತೀರ್ಥ ಶ್ರೀ ಮಾಧವತೀರ್ಥ ಟ್ರಸ್ಟ್ ಕಮಿಟಿಯವರು ತಿಳಿಸಿದ್ದಾರೆ
