ಉದಯವಾಹಿನಿ ತಾಳಿಕೋಟಿ : ಮನುಷ್ಯನ ದೇಹದಲ್ಲಿ ರಕ್ತದ ಪಾತ್ರ ಮಹತ್ವದ್ದಾಗಿದೆ ಮನುಷ್ಯ ಜೀವಂತವಾಗಿರಲು ದೇಹದಲ್ಲಿ ಅಗತ್ಯಕ್ಕೆ ಅನುಗುಣವಾಗಿ ರಕ್ತದ ಪ್ರಮಾಣ ಇರಬೇಕು ರಕ್ತದಾನ ಬೇರೊಬ್ಬರ ಪ್ರಾಣವನ್ನು ರಕ್ಷಿಸುತ್ತದೆ ಎಂದು ವೈದ್ಯಾಧಿಕಾರಿ ಡಾ. ಶ್ರೀಶೈಲ್ ಹೇಳಿದರು .ಮಂಗಳವಾರ ಪಟ್ಟಣದ ರಜಪೂತ ಸಮಾಜ ಯುವಕ ಮಂಡಳಿ ವತಿಯಿಂದ ಶ್ರೀ ಸಿದ್ದೇಶ್ವರ ಬ್ಲಡ್ ಬ್ಯಾಂಕ್, ವಿಜಾಪುರ ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀ ಅಂಬಾಭವಾನಿ ಮಂದಿರದಲ್ಲಿ ಹಮ್ಮಿಕೊಂಡ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು ರಜಪೂತ ಸಮಾಜದ ಯುವಕರ ಈ ಕಾರ್ಯ ಬೇರೆಯವರಿಗೂ ಮಾದರಿಯಾಗಿದೆ ಎಂದು ಹೇಳಿದರು. ಯುವ ಮುಖಂಡ ವಿಜಯಸಿಂಗ ಹಜೇರಿ ಮಾತನಾಡಿ ರಕ್ತದಾನ ಕುರಿತು ಸಾರ್ವಜನಿಕರಲ್ಲಿ ಬಹಳಷ್ಟು ತಪ್ಪು ತಿಳುವಳಿಕೆಗಳಿವೆ ರಕ್ತದಾನ ಮಾಡುವುದರಿಂದ ಆರೋಗ್ಯದಲ್ಲಿ ವೃದ್ಧಿಯಾಗುತ್ತದೆ ಇದರಿಂದ ದೇಹದ ಮೇಲೆ ಯಾವುದೇ ಕೆಟ್ಟ ಪರಿಣಾಮ ಬೀರುವುದಿಲ್ಲ ಈ ತಪ್ಪು ತಿಳುವಳಿಕೆಯನ್ನು ದೂರಿಕರಿಸುವಂತಹ ಅಗತ್ಯ ಇದೆ ಅದು ಇಂಥಹ ಶಿಬಿರಗಳನ್ನು ಆಯೋಜಿಸುವುದರಿಂದ ಸಾಧ್ಯವಿದೆ .ಸಮಾಜದ ಯುವಕರ ಈ ಕಾರ್ಯ ಶ್ಲಾಘನೀಯ ಯವಾದದ್ದು ಎಂದರು. ಈ ಶಿಬಿರದಲ್ಲಿ ಸುಮಾರು 65 ಜನರು ರಕ್ತದಾನ ಮಾಡಿದರು ರಜಪೂತ ಸಮಾಜದ ಅಧ್ಯಕ್ಷ ಹರಿ ಸಿಂಗ್ ಮೂಲಿಮನಿ ರಕ್ತದಾನ ಶಿಬಿರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು .ಈ ಸಮಯದಲ್ಲಿ ಸಮಾಜದ ಗಣ್ಯರಾದ ರಘುರಾಮ್ ಸಿಂಗ ಹಜೇರಿ. ಗೋವಿಂದ ಸಿಂಗ್ ಗೌಡಗೇರಿ. ಪ್ರಕಾಶ್ ಹಜೇರಿ. ರಘು ಹಜೇರಿ ಗೋವಿಂದ್ ಸಿಂಗ್ ಮೂಲಿಮನಿ .ರತನ್ ಸಿಂಗ್ ಕೋಕಟ್ನೂರ್ .ಜೈ ಸಿಂಗ್ ಮೂಲಿಮನಿ. ವಿಟ್ಟಲ್ ಹಜೇರಿ ದಿಲೀಪ್ ಸಿಂಗ್ ಹಾಜರಿ. ಮಾನ್ಸಿಂಗ್ ಕೋಕಟ್ನೂರ್. ಹರೀಶ್ ಮೂಲಿಮನಿ, ಗಂಗಾರಾಮ್ ಕೋಕಟ್ನೂರ. ಸುಮಿತ್ ವಿಜಾಪುರ. ನಿತಿನ್. ವಿಜಾಪುರ. ರಮೇಶ ಗೌಡಗೇರಿ. ಬಾಬು ಹಜೇರಿ. ರಾಜು ಮೂಲಿಮನಿ. ಬಾಲಾಜಿ ವಿಜಾಪುರ .ರಾಮು ಗೌಡಗೇರಿ. ನವೀನ ವಿಜಾಪೂರ. ಇದ್ದರು
