ಉದಯವಾಹಿನಿ, ಬೆಂಗಳೂರು: ರಾಜ್ಯದಲ್ಲಿ ಇರೋ 50 ವರ್ಷ ಹಳೆಯ ಎಲ್ಲಾ ಜಲಾಶಯಗಳ ಗೇಟ್‌ಗಳನ್ನು ಬದಲಾವಣೆ ಮಾಡಲು ನಮ್ಮ ಸರ್ಕಾರ ನಿರ್ಧಾರ ಮಾಡಿದೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.
ವಿಧಾನ ಪರಿಷತ್ ‌ಶೂನ್ಯ ವೇಳೆ ಕಲಾಪದಲ್ಲಿ ಜೆಡಿಎಸ್ (JDS) ಸದಸ್ಯ ಶರವಣ ಅವರ ಪ್ರಶ್ನೆಗೆ ಉತ್ತರ ನೀಡಿದ ಅವರು, ರಾಜ್ಯದ 50 ವರ್ಷದ ಹಳೆಯ ಎಲ್ಲಾ ಜಲಾಶಯಗಳ ಹಳೆಯ ಗೇಟ್ ಬದಲಿಸಲು ಸರ್ಕಾರ ಬದ್ಧವಾಗಿದೆ. ಜಲಾಶಯಗಳಿಗೆ ಹೊಸ ಗೇಟ್ ಅಳವಡಿಸುತ್ತೇವೆ. ಮೊದಲು ತುಂಗಭದ್ರಾ ಜಲಾಶಯ ಗೇಟ್ ಬದಲಿಸಲು ನಿರ್ಧರಿಲಾಗಿದೆ ಎಂದರು.

ಅಹಮದಾಬಾದ್ ಕಂಪೆನಿಗೆ ಗೇಟ್ ಅಳವಡಿಸಲು ಕೊಡಲಾಗಿದೆ. ಮೆಟಿರಿಯಲ್ ಬಂದಿದೆ, ಅಳವಡಿಸುವ ಕೆಲಸ ನಡೆಯುತ್ತಿದೆ. 6 ಗೇಟ್‌ಗಳನ್ನು ಮೇ ವರೆಗೆ ಚೇಂಜ್ ಮಾಡುತ್ತೇವೆ. ತುಂಗಾಭಧ್ರಾ ವಿಚಾರದಲ್ಲಿ ಮೂರು ರಾಜ್ಯಗಳು ತೀರ್ಮಾನ ಮಾಡಬೇಕು. ಮೊದಲು ತುಂಗಭದ್ರಾ ಮಾಡಿ ಬಳಿಕ ಎಲ್ಲಾ ಜಲಾಶಯದ ಗೇಟ್ ಬದಲಾವಣೆ ಮಾಡ್ತೀವಿ ಎಂದು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!