
ಉದಯವಾಹಿನಿ ದೇವರಹಿಪ್ಪರಗಿ: ಪಟ್ಟಣದ ಐತಿಹಾಸಿಕ ರಾವುತರಾಯ ಮಲ್ಲಯ್ಯನ ಜಾತ್ರಾ ಮಹೋತ್ಸವ ಅ.26ರಿಂದ ಆರಂಭಗೊಳ್ಳುವ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆ ಆವರಣದಲ್ಲಿ ಮಂಗಳವಾರ ಶಾಂತಿ ಸಭೆ ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಹಶೀಲ್ದಾರ್ ಪ್ರಕಾಶ ಸಿಂದಗಿ ವಹಿಸಿಕೊಂಡು ಮಾತನಾಡಿದ ಅವರು, ಪಟ್ಟಣದ ಐತಿಹಾಸಿಕ ರಾವುತರಾಯ ಮಲ್ಲಯ್ಯನ ಜಾತ್ರಾ ಮಹೋತ್ಸವದಲ್ಲಿ ದಿ. 26ರಂದು ಬೆಳಗಿನ ಜಾವ ಬಂಡಿ ರಥೋತ್ಸವದಲ್ಲಿ ಮಲ್ಲಯ್ಯನ ದೇವಸ್ಥಾನಕ್ಕೆ ಹೊರಡುವುದು, 28ರಂದು ಸೀಗೆ ಹುಣ್ಣಿಮೆಯ ದಿನದಂದು ಸಕ್ಕರಿ ಲಾಬಾನ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಹಾಗೂ ರವಿವಾರ ದಿ. 29ರಂದು ರಾವುತರಾಯ ದೇವಸ್ಥಾನದ ಸ್ವಸ್ಥಾನಕ್ಕೆ ಮರಳುವುದು ಎಲ್ಲಾ ಬಗೆಯ ಕಾರ್ಯಕ್ರಮಗಳನ್ನು ನೋಡಲು ರಾಜ್ಯ ಅಂತರಾಜ್ಯದಿಂದ ಲಕ್ಷಾಂತರ ಜನ ಭಕ್ತರು ಭಾಗವಹಿಸುತ್ತಾರೆ. ಜಾತ್ರಾ ಮಹೋತ್ಸವ ವೈಭವದಿಂದ ಜರುಗಲು ಬೇಕಾದ ಎಲ್ಲಾ ರೀತಿಯ ಸಹಕಾರ ನೀಡಲು ತಾಲೂಕು ಆಡಳಿತ ಸಿದ್ಧವಿದೆ, ದೇವಸ್ಥಾನದ ವತಿಯಿಂದ ಸ್ವಯಂಸೇವಕರನ್ನು ನೇಮಿಸಿ ಅವರಿಗೆ ಗುರುತಿನ ಚೀಟಿ ನೀಡಲು ಸೂಚಿಸಿದರು.ಜಾತ್ರಾ ಮಹೋತ್ಸವದ ವೇಳೆ ಕೈಗೊಳ್ಳಬೇಕಾದ ಮುಂಜಾಗರೂಕತೆ ಕ್ರಮ ಕುರಿತಂತೆ ಹಲವಾರು ವಿಚಾರಗಳ ಕುರಿತು ಸಾರ್ವಜನಿಕರ ಜೊತೆ ಸಭೆಯಲ್ಲಿ ಚರ್ಚಿಸಲಾಯಿತು.
ಇದೇ ಸಂದರ್ಭದಲ್ಲಿ ಪಿಎಸ್ಐ ಬಸವರಾಜ ತಿಪ್ಪಾರೆಡ್ಡಿ ಅವರು ಮಾತನಾಡಿ,ಪೋಲಿಸ್‍ಇಲಾಖೆ, ತಾಲ್ಲೂಕು ಆಡಳಿತ ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ವ್ಯವಸ್ಥಿತವಾಗಿ ನಡೆದುಬಂದಿದೆ, ಯಾವುದೇ ಅಹಿತಕರ ಘಟನೆ ನಡೆಯದ ಹಾಗೆ ಸಾರ್ವಜನಿಕರು ಇಲಾಖೆಯ ಜೊತೆ ಸಹಕರಿಸಿ ಎಂದು ಹೇಳಿದರು.ಸಾರ್ವಜನಿಕರ ಪರವಾಗಿ ಮುಖಂಡ ಶಂಕರಗೌಡ ಪಾಟೀಲ ಮಾತನಾಡಿ ಜಾತ್ರೆಗೆ ಬರುವ ಭಕ್ತಾದಿಗಳಿಗಾಗಿ ನೀರು ಹಾಗೂ ಬೆಳಕಿನ ವ್ಯವಸ್ಥೆ ಮಾಡಲು ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ತಿಳಿಸಿದರು.ಇದೇ ಸಂದರ್ಭದಲ್ಲಿ ಪ.ಪಂ. ಮುಖ್ಯಾಧಿಕಾರಿ ಎಲ್.ಡಿ. ಮುಲ್ಲಾ, ದೇವಸ್ಥಾನದ ಮುಖ್ಯಸ್ಥರಾದ ಪ್ರಮೋದ್ ನಾಡಗೌಡ, ಮುಖಂಡರಾದ ಸಂಗನಗೌಡ ಬಿರಾದಾರ, ಗೊಲ್ಲಾಳಪ್ಪಗೌಡ ಪಾಟೀಲ, ಮಡಿವಾಳಪ್ಪಗೌಡ ಪಾಟೀಲ, ವಿನೋದಗೌಡ ಪಾಟೀಲ, ಮಲ್ಲನಗೌಡ ಪಾಟೀಲ,ಕಾಸಪ್ಪ ಜಮಾದಾರ, ಮಲ್ಲು ಜಮಾದಾರ, ರಮೇಶ ಮ್ಯಾಕೇರಿ, ಕಾಶಿನಾಥ ತಳಕೇರಿ, ರಾವುತ್ ತಳಕೇರಿ, ಗೌಡಪ್ಪಗೌಡ ಹತ್ತಳ್ಳಿ, ಜಾತ್ರಾ ಸಮಿತಿಯ ಅಧ್ಯಕ್ಷರಾದ ಮಾದೇವಪ್ಪ ಜಡಗೊಂಡ ಸೇರಿದಂತೆ ಪದಾಧಿಕಾರಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.
