
ಉದಯವಾಹಿನಿ ಸಿಂಧನೂರು: ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 14 ಸಾವಿರ ಆತಿಥಿ ಉಪನ್ಯಾಸಕರಿಗೆ ವಿವಿಧ ಬೇಡಿಕೆಗಳನ್ನು ಈ ಡೇರಿಸುವಂತೆ ಒತ್ತಾಯಿಸಿ ನಗರದ ಪ್ರವಾಸಿ ಮಂದಿರದಿಂದ ಕಾಲ್ನಡಿಗೆ ಜಾಥಾ ಮೂಲಕ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತ ತಾಲ್ಲೂಕು ಕಛೇರಿ ಮುಂದೆ ಪ್ರತಿಭಟನೆ ನಡೆಸಿದರು.
ಈ ಪ್ರತಿಭಟನೆ ಕುರಿತು ಮಾತನಾಡಿದ ರಾಜ್ಯ ಸಂಚಾಲಕ ನಾಗರಾಜ್ ಪೂಜಾರ್ ಅವರು ಕಳೆದ 20 ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ.ಅವರನ್ನು ಸೇವೆಯಲ್ಲಿ ಆಯ್ಕೆ ಮಾಡಿಕೊಳ್ಳುವಾಗ 10 ತಿಂಗಳ ಸೇವೆ’ ಎಂದು ಹೇಳಿದ್ದರು ಎಲ್ಲರಿಗೂ 10 ತಿಂಗಳ ಸೇವೆ ಹಾಗೂ ಸಂಬಳ ಸಿಗುವುದಿಲ್ಲ. ಕೆಲವರಿಗೆ ಮಾತ್ರ ಈ ಭಾಗ್ಯ ಸಿಗುತ್ತಿದೆ. ಎಂದು ಹೇಳಿದರುಇಡೀ ಕರ್ನಾಟಕಲ್ಲಿರುವ ವಿಶ್ವ ವಿದ್ಯಾಲಯಗಳಿಗೆ ಒಂದೇ ರೀತಿಯ ಟೈಮ್ ಟೇಬಲ್ ಇರದ ಕಾರಣ ನೇಮಕ ಹಾಗೂ ಇನ್ನಿತರ ಕೆಲಸ ಕಾರ್ಯಗಳಿಗೆ ಅತಿಥಿ ಉಪನ್ಯಾಸಕರ ಜೋತೆ ವಿದ್ಯಾರ್ಥಿಗಳಿಗೂ ತೊಂದರೆ ಆದ
ಉದಾಹರಣೆಗಳು ಎಷ್ಟೋ ಇವೆ. ಎಂದು ಆಗ್ರಹಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಿ ಎಚ ಕಂಬಳಿ ಅವರು ಕಲ್ಯಾಣ ಕರ್ನಾಟಕದಲ್ಲಿ ಈ ಶೈಕ್ಷಣಿಕ ಸಾಲಿನಲ್ಲಿ ಅತಿಥಿ ಉಪನ್ಯಾಸಕರನ್ನು ಆಯ್ಕೆ ಮಾಡಿಕೊಂಡಿದ್ದರು. ಅವರಿಗೆ ಕೆಲಸವು ನೀಡುತ್ತಿಲ್ಲ. ಸಂಬಳವು ಇಲ್ಲಾ ಕೆಲಸವಿಲ್ಲದೆ ಕೆಲವು ಉಪನ್ಯಾಸಕರು ಜೀವನ ನಿರ್ವಹಿಸಲು ಆಗದೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವುದು ತಮ್ಮ ಗಮನಕ್ಕೆ ಇರಬಹುದು. ಕಳೆದ ವರ್ಷ ಅನುಸರಿಸಿದಂತೆ ಅವರಿಗೆ ಸೇವೆ ಹಾಗೂ ಸಂಬಳ ನೀಡಬೇಕೆಂದು ಪ್ರಗತಿಪರ ಸಂಘಟನೆಗಳು ಕೋರಿಕೆಯಾಗದೆ ಹಾಗೂ ಕಲ್ಯಾಣ ಕರ್ನಾಟಕದ ವಿ.ವಿ.ಗಳ ಶೈಕ್ಷಣಿಕ ಅವಧಿಯನ್ನು ಒಂದೆ ಬಾರಿ ಪ್ರಾರಂಭ ಹಾಗೂ ಮುಕ್ತಾಯ ಆಗುವ ಹಾಗೆ ನಿಗದಿ ಮಾಡಲು ಉಪನ್ಯಾಸಕರು ಹಾಗೂ ಪ್ರಗತಿಪರ ಸಂಘಟನೆಗಳು ಕೋರಿಕೆಯಾಗದೆ.ಎಂದು ಸರ್ಕಾರ ವಿರುದ್ಧ ಕಿಡಿಕಾರಿದರು.
ಈಗಾಗಲೆ ಧರಣಿಯಲ್ಲಿ ತೊಡಗಿರುವ ಅತಿಥಿ ಉಪನ್ಯಾಸಕರ ಬೇಡಿಕೆಗೆ ಕೂಡಲೇ ಸಂದಿಸಿ ಪರಿಹಾರ `ಗೌರವದಿಂದ ಬದುಕು ನಿರ್ವಹಿಸಲು ಅನುಕೂಲ ಮಾಡಿಕೊಡಬೇಕು ಎಂದು ಹೇಳಿದರು.ಅತಿಥಿ ಉಪನ್ಯಾಸಕರ ಇತರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರಗತಿಪರ ಸಂಘಟನೆಗಳು ಒಕ್ಕೂಟ ತಾಲ್ಲೂಕು ವತಿಯಿಂದ ಮಾನ್ಯ ತಾಲ್ಲೂಕು ತಹಶಿಲ್ದಾರ್ ಅರುಣ್ ಕುಮಾರ್ ಎಚ್ ದೇಸಾಯಿ ಅವರ ಮೂಲಕ ಮಾನ್ಯ ಉನ್ನತ ಶಿಕ್ಷಣ ಸಚಿವರಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯ ಮಾಡಿದರು.ಈ. ಸಂ..ಬಸವರಾಜ ಬಾದರ್ಲಿ ಅವರು ಮಾತನಾಡಿದರು.ಎಸ್ ದೇವೇಂದ್ರ ಗೌಡ. ವೆಂಕನಗೌಡ ಗದ್ರಟಗಿ.ಬಸವಂತರಾಯಗೌಡ ರಮೇಶ್ ಪಾಟೀಲ್ ಬೇರ್ಗಿ.ಬಿ.ಎನ್ ಯರಿದಿಹಾಳ.ಬಸವರಾಜ ಕೊಂಡಿ.ಪರಶುರಾಮ ಭಂಡಾರಿಡಾ.ರಾಮಣ್ಣಗೋನವಾರ.ಇತರರು ಅತಿಥಿ ಉಪನ್ಯಾಸಕರ ಬಳಗ ಸೇರಿದಂತೆ ಇತರರು ಉಪಸ್ಥಿತರಿದ್ದರು
