
ಉದಯವಾಹಿನಿ ಸಿಂಧನೂರು: ನಿನ್ನೆ ಮಧ್ಯಾಹ್ನ ಸುಮಾರಿಗೆ ಶಾಸಕ ಹಂಪನಗೌಡ ಬಾದರ್ಲಿ ಹಾಗೂ ರಾಯಚೂರು ಗ್ರಾಮೀಣ ಶಾಸಕರು ಬಸನಗೌಡ ಗದ್ದಲ್ ಮಸ್ಕಿ ಶಾಸಕ ಬಸನಗೌಡ ಪಾಟೀಲ್ ತುರುವಿಹಾಳ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಶರಣ ಪ್ರಕಾಶ್ ಪಾಟೀಲ್ ಅವರು ಬೆಂಗಳೂರಿನಲ್ಲಿ ಮಾನ್ಯ ಮುಖ್ಯ ಮಂತ್ರಿ ಸಿದ್ದರಾಮಯ್ಯರವರನ್ನು ಭೇಟಿ ಮಾಡಿ ಜಿಲ್ಲಾದ್ಯಂತ ಮತ್ತು ವಿಶೇಷವಾಗಿ ಗ್ರಾಮೀಣ ಭಾಗದ ರೈತರು ಭತ್ತ ಜೋಳ ಇತರ ಬೆಳೆದ ಬೆಳೆಗಳಿಗೆ ನೀರಿನ ಕೊರತೆಯಿಂದ ಬೆಳೆಗಳು ಒಣಗುತ್ತಿದ್ದು. ಬೆಳೆಗಳಿಗೆ ನೀರಿನ ಬಹಳಷ್ಟು ನೀರಿನ ಅವಶ್ಯಕತೆ ಇರುವುದರಿಂದ ವಿದ್ಯುತ್ ಸಂಪರ್ಕ 07 ತಾಸು ಕರೆಂಟ್ ನೀಡುವಂತೆ ಮತ್ತು ರೈತರ ಸಮಸ್ಯೆ ಬಗ್ಗೆ ಹಲವು ಸಮಸ್ಯೆಗಳು ಬಗ್ಗೆ ಇರ್ಥಗೊಳಿಸಬೇಕೆಂದು ಜಿಲ್ಲೆಯ ಉಸ್ತುವಾರಿ ಸಚಿವರು ಹಾಗೂ ಶಾಸಕರು ಮನವಿ ಮಾಡಿದರು.ಈ ಸಂದರ್ಭದಲ್ಲಿ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ರಾದ ಶರಣಪ್ರಕಾಶ್ ಪಾಟೀಲ್ ರವರು ನೇತೃತ್ವದಲ್ಲಿ ರಾಯಚೂರ ಗ್ರಾಮೀಣ ವಿಧಾನ ಸಭಾ ಕ್ಷೇತ್ರದ ಕೊನೆ ಭಾಗದ ರೈತರಿಗೆ ನೀರು ಮುಟ್ಟ ಬೇಕಾದರೆ ತುಂಗಭದ್ರಾ ಕಾಲುವೆ ನೀರು ನಿರಂತರವಾಗಿ ಹರಿಸಬೇಕು ಮನವಿ ಮಾಡಿದರು. ರೈತರ ಪಂಪ್ ಸೆಟ್ ನಿರಂತರವಾಗಿ ವಿದ್ಯುತ್ ವಿತರಿಸಬೇಕು, ಹೆಚ್ಚಿನ ರೀತಿಯಲ್ಲಿ ಸಂಪರ್ಕ ಕಲ್ಪಿಸಬೇಕು ರೈತರ ಸಮಸ್ಯೆ ನೀವಾರಿಸುವಂತೆ ಮನವಿ ಪತ್ರ ಸಲ್ಲಿಸಿ ಈ ದೇಶಕ್ಕೆ ಅನ್ನ ನೀಡುವ ಅನ್ನದಾತ ರೈತ ಕಷ್ಟಕ್ಕೆ ಬೆನ್ನೆಲುಬು ಆಗಿ ಕೆಲಸ ಮಾಡುವಂತೆ ಸಿಂಧನೂರು ಶಾಸಕರಾದ ಹಂಪನಗೌಡ ಬಾದರ್ಲಿರವರು ಹಾಗೂ ರಾಯಚೂರು ಗ್ರಾಮೀಣ ಶಾಸಕರು ಬಸನಗೌಡ ದದ್ದಲ್ ಮತ್ತು ಮಸ್ಕಿ ಕ್ಷೇತ್ರದ ಶಾಸಕರಾದ ಬಸನಗೌಡ ತುರ್ವಿಹಾಳರವರು ಭೇಟಿಯಾಗಿ ಮನವಿಯನ್ನು ಸಲ್ಲಿಸ ಲಾಯಿತು. ಈ ಸಂದರ್ಭದಲ್ಲಿ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಯಿತು.ಎಂದು ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು.
