ಉದಯವಾಹಿನಿ, ಮುಂಬೈ: ನಟಿ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾ ಕಳೆದ ಎರಡು ವರ್ಷಗಳಿಂದ ತಮ್ಮ ಮುಖ ಮುಚ್ಚಿಕೊಂಡು ಓಡಾಡುತ್ತಿದ್ದರು.ಎರಡು ವರ್ಷಗಳ ನಂತರ
ನಿನ್ನೆ ಅವರು ತಮ್ಮ ಮುಖವನ್ನು ಕ್ಯಾಮೆರಾಗೆ ತೋರಿಸಿದ್ದಾರೆ.
ಅವರದ್ದೇ ನಿರ್ಮಾಣದಲ್ಲಿ ಮೂಡಿ ಬಂದಿರುವ ಯುಟಿ ೬೯ ಸಿನಿಮಾದ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಮೊದಲ ಬಾರಿಗೆ ಮುಖ ತೋರಿಸಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ತನ್ನ ಮುಖವನ್ನು ಮುಚ್ಚಿಕೊಳ್ಳಲು ಫುಲ್ ಮಾಸ್ಕ್ ಬಳಸುತ್ತಿದ್ದ ರಾಜ್ ಕುಂದ್ರಾ ಕೊನೆಗೂ ಮಾಸ್ಕ ತೆಗೆದು ಮುಖ ತೋರಿಸಿದ್ದಾರೆ. ಯುಟಿ ೬೯ ನ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ತಮ್ಮ ಮಾಸ್ಕ್ ತೆಗೆದು ಮಾಧ್ಯಮಗಳ ಮುಂದೆ ಮುಖ ತೋರಿಸಿದ್ದಾರೆ. ಸುಮಾರು ಎರಡು ವರ್ಷಗಳ ನಂತರ ಸಾರ್ವಜನಿಕವಾಗಿ ರಾಜ್ ಕುಂದ್ರಾ ಮುಖ ತೋರಿಸಿದ್ದಾರೆ.ರಾಜ್ ಕುಂದ್ರಾ ಮೊದಲ ಬಾರಿಗೆ ನಟರಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ವದಂತಿಗಳು ಹರಡಿದ್ದವು. ಅಕ್ಟೋಬರ್ ೧೦ ರಂದು ಫರಾ ಖಾನ್ ಈ ಸಿನಿಮಾವನ್ನು ಮಾಡುವುದಾಗಿ ಹೇಳಿದರು.ಕೆಲವು ದಿನಗಳಿಂದ ಅವರ ಜೈಲುವಾಸದ ಬಗ್ಗೆ ಸಿನಿಮಾ ಮಾಡುವ ಸುದ್ದಿ ಓಡಾಡುತ್ತಿತ್ತು. ಈಗ ರಾಜ್ ಕುಂದ್ರಾ ಅವರ ಅಭಿನಯದ ಯುಟಿ ೬೯ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ.
೨೦೨೧ ರಲ್ಲಿ ಉದ್ಯಮಿ ರಾಜ್ ಕುಂದ್ರಾ ಅವರನ್ನು ವಯಸ್ಕ ಚಲನಚಿತ್ರ ಪ್ರಕರಣದಲ್ಲಿ ಭಾಗಿಯಾದ ಆರೋಪದ ಮೇಲೆ ಬಂಧಿಸಲಾಗಿತ್ತು. ಆಗ ಅವರು ಮುಂಬೈನ ಆರ್ಥರ್ ರೋಡ್ ಜೈಲಿನಲ್ಲಿ ಕಳೆದ ೬೩ ದಿನಗಳ ಅನುಭವವನ್ನು ಇಟ್ಟುಕೊಂಡು ಸಿನಿಮಾ ಮಾಡಲಾಗಿದೆ. ಅದಕ್ಕೆ ಯುಟಿ ೬೯ಎಂದು ಹೆಸರಿಡಲಾಗಿದೆ.

Leave a Reply

Your email address will not be published. Required fields are marked *

error: Content is protected !!