
ಉದಯವಾಹಿನಿ,ಚಿಂಚೋಳಿ: 1950ರಲ್ಲಿ ಕರ್ನಾಟಕ ಏಕೀಕರಣ ಮಾಡುವ ಕನಸ್ಸು ಆಲೂರ ವೆಂಕಟರಾಯರು ಅವರು ಕಂಡಿದ್ದರು,ಮುಂದೆ 1973ರ ನವ್ಹಂಬರ್ 1ರಂದು ಕರ್ನಾಟಕ ಏಕೀಕರಣವಾಗಿತ್ತು ಆಗ ಮುದ್ರಣ ಮಾಧ್ಯಮಗಳ ಪಾತ್ರ ಬಹುಮುಖ್ಯವಾಗಿತ್ತು ಎಂದು ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ಹೇಳಿದರು.ಪಟ್ಟಣದ ತಹಸೀಲ್ ಅವರಣದಲ್ಲಿ ಹಮ್ಮಿಕೊಂಡಿದ್ದ ತಾಲ್ಲೂಕಾಡಳಿತ ವತಿಯಿಂದ 68ನೆ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಅಂಬೇಡ್ಕರ್ ವೃತ್ತದಿಂದ ತಹಸೀಲ್ ಅವರಣವರೆಗೆ ಭವನೇಶ್ವರಿ ಭಾವಚಿತ್ರಕ್ಕೆ ಮೆರವಣಿಗೆ ನಡೆಸಿ ತಹಸೀಲ್ ಅವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ಉಧ್ಘಾಟಿಸಿ ಮಾತನಾಡಿದ ಅವರು,ಕನ್ನಡ ಮಾತೃಭಾಷೆಗೆ ಎಲ್ಲೋರು ಹೆಚ್ಚಿನ ಒತ್ತು ನೀಡಬೇಕು ಮಕ್ಕಳಿಗೆ ಒಳ್ಳೆಯ ಕನ್ನಡದಲ್ಲಿ ಶಿಕ್ಷಣ ನೀಡಬೇಕು ಕನ್ನಡ ಶಿಕ್ಷಣ ಪಡೆದವರಿಗೆ ಮೀಸಲಾತಿ ಕೂಡ ಇದೆ ಎಂದರು.ವಿಶೇಷ ಉಪಾನ್ಯಾಸ ನೀಡಿದ ಶಿಕ್ಷಣ ಸಂಯೋಜಕ ಅಶೋಕ ಹೂವಿನಭಾವಿ ಮಾತನಾಡಿದ ಅವರು,1973ರ ಮುಂಚೆ ಮೈಸೂರು ಕರ್ನಾಟಕವಿದ್ದು ಅದರ ಮೊದಲು ಕನ್ನಡದ ಸುಮಾರು 20ಪ್ರಾಂತ್ಯಗಳು ಹಂಚ್ಚಿ ಹೋಗಿದ್ದವು.ನಂತರ 1973ರಲ್ಲಿ ಅಖಂಡ ಕರ್ನಾಟಕವನ್ನು ಏಕೀಕರಣವಾಯಿತು,ಕನ್ನಡಕ್ಕೆ 2500ವರ್ಷಗಳ ಹಿಂದಿನ ಕನ್ನಡ ಭಾಷೆ ಕ್ರಿ.ಶ.405ರಲ್ಲಿ ಕಲ್ಯಾಣ ಕರ್ನಾಟಕ ಸಂಸ್ಕೃತಿ ದೇಶದಲ್ಲಿಯೇ ಹೆಸರುವಾಗಿತ್ತು.
ಕನ್ನಡವು ಕಾವೇರಿಯಿಂದ ಗೋಧಾವರಿವರೆಗೆ ವಿಸ್ತರಿಸಿತ್ತು 1797ರಲ್ಲಿ ಅನೇಕ ಸ್ವಾತಂತ್ರ್ಯ ಹೋರಾಟಗಾರರು ಹೋರಾಟ ಮಾಡಿದರು,ಆಲೂರು ವೆಂಕಟರಾಯರು ಕರ್ನಾಟಕ ಏಕೀಕರಣ ಬಗ್ಗೆ ಹೆಚ್ಚಿನ ಗಮನಹರಿಸಿದರು,ಕರ್ನಾಟಕ ಗತವೈಭವ ಪುಸ್ತಕ ಬರೆದು ವಿಧ್ಯಾವರ್ದಕ ಸಂಘದ ಕರ್ನಾಟಕ ಏಕೀಕರಣದಲ್ಲಿ ಮಹತ್ವದ ಪಾತ್ರ ವಹಿಸಿದರು,1915ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತವು ನಾಲ್ವಡಿ ಕೃಷ್ಣರಾಜ ಒಡೆಯರ್ ಮುಂದಾಳ್ತವದಲ್ಲಿ ಪ್ರಾರಂಭವಾಗಿ ರಚನೆಯಾಯಿತು.1956ರ ಫಜಲ್ ಉಲ್ ವರದಿ ಪ್ರಕಾರ ಹಾಗೂ ಮಹಾಜನ ವರದಿ ಪ್ರಕಾರ ಮಹಾರಾಷ್ಟ್ರದ 247 ಪ್ರಾಂತ್ಯಗಳು ಕರ್ನಾಟಕಕ್ಕೆ ಸೇರಬೇಕು,ಮುಂಬೈ ಪ್ರಾಂತ್ಯದ ಡೆಪ್ಯುಟಿ ಚನ್ನಬಸಪ್ಪರವರು ಅನೇಕ 600ಕನ್ನಡ ಶಾಲೆಗಳು ಪ್ರಾರಂಭಿಸಿದರು,1956ರ ಹಿಂದೆ ಉರ್ದು ಶಾಲೆಯ ಪರವಾನಿಗೆ ಪಡೆದು ಕನ್ನಡ ಶಾಲೆಗಳು ನಡೆಸುತ್ತಿದ್ದರು,ಈಗಿನ ಕಾಲದಲ್ಲಿ ಕನ್ನಡ ಶಾಲೆ ನಡೆಸಲು ಪರವಾನಿಗೆ ಪಡೆದು ಇಂಗ್ಲಿಷ್ ಶಾಲೆ ನಡೆಸುತ್ತಿದ್ದಾರೆ.
ಹಿಂದಿ ಮತ್ತು ಕನ್ನಡ ಭಾಷೆಗೆ ಸುಮಾರು 500ವರ್ಷಗಳ ವ್ಯತ್ಯಾಸವಿದೆ,22ಭಾಷೆಗಳು ರಾಷ್ಟ್ರೀಯ ಭಾಷೆಗಳಾಗಿವೆ,ಕನ್ನಡಕ್ಕೆ 8 ಜ್ಞಾನಪೀಠ ಪ್ರಶಸ್ತಿ ದೊರಕಿದರೆ ಹಿಂದಿ ಭಾಷೆಗೆ 11 ಜ್ಞಾನಪೀಠ ಪ್ರಶಸ್ತಿ ದೊರಕಿವೆ,ಕೇಂದ್ರಕ್ಕೆ ಅತಿಹೆಚ್ಚು ತೆರಿಗೆ ಕಟ್ಟುವ ರಾಜ್ಯ ಕರ್ನಾಟಕವಾಗಿದೆ,ಯಾವುದೇ ಸ್ವರ್ಧಾತ್ಮಕ ಪರೀಕ್ಷೆ ಗಳು ಕೆಎಎಸ್,ಐಪಿಎಸ್ ವೈದ್ಯರ,ಎಲ್ಲಾ ಪರೀಕ್ಷೆಗಳು ಕನ್ನಡದಲ್ಲಿ ಬರೆಯುವಂತೆ ಸರ್ಕಾರಗಳು ಕಾನೂನು ರಚಿಸಬೇಕು,ಜಪಾನ,ಚೀನಾ ದೇಶದಲ್ಲಿ ಮಾತೃಭಾಷೆಯಲ್ಲಿ ಪರೀಕ್ಷೆ ಬರೆಯುತ್ತಾರೆ ಆದರೆ ಭಾರತದಲ್ಲಿ ಯಾಕೆಯಿಲ್ಲಾ,ಸರೋಜಿನಿ ಮಹಿಷಾ ವರದಿ ಜಾರಿ ಮಾಡಬೇಕು,ಸಮರ್ಪಕವಾಗಿ ಅನುಸರಿಸಿ ಕಾರ್ಯರೂಪಕ್ಕೆ ತರಬೇಕು,ಕಲಿಯೋಕೆ ನೂರು ಭಾಷೆ ಆದರೆ ಆಡುವುದಕ್ಕೆ ಒಂದೇ ಕನ್ನಡ ಭಾಷೆ ಆಡಬೇಕು ಎಂದರು.ತಾಲ್ಲೂಕಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಶಂಕರ ರಾಠೋಡ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಚಾರ್ಯರಾದ ಮಲ್ಲಿಕಾರ್ಜುನ ಪಾಲಾಮೋರ್ ಸ್ವಾಗತಿಸಿದರು, ಶಂಕರಜೀ ಹೂವಿನ ಹಿಪ್ಪರಗಿ ನಿರೂಪಿಸಿದರು,ಬಸವರಾಜ ಐನೋಳಿ ವಂದಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಕಾಶಿನಾಥ ಧನ್ನಿ,ಸಿಡಿಪಿಓ ಗುರುಪ್ರಸಾದ್ ಕವಿತಾಳ, ಗ್ರೇಡ್2 ತಹಸೀಲ್ದಾರ್ ವೆಂಕಟೇಶ ದುಗ್ಗನ,ಟಿಹೆಚ್ಓ ಡಾ.ಮಹ್ಮುದ್ ಗಫಾರ್,ಸಮಾಜ ಕಲ್ಯಾಣ ಪ್ರಭುಲಿಂಗ ಬುಳ್ಳಾ,ಕ್ಷೇತ್ರ ಶಿಕ್ಷಣಾಧಿಕಾರಿ ಹಣಮಂತ ರಾಠೋಡ್,ಜಯಪ್ಪ ಚಾಪಲ್,ಸಚಿನ್ ಚವ್ಹಾಣ,ಕಸಾಪ ಅಧ್ಯಕ್ಷ ಸುರೇಶ ದೇಶಪಾಂಡೆ,ಶ್ರೀಕಾಂತ ಜಾನಕಿ,ಉಲ್ಲಾಸಕುಮಾರ ಕೆರೋಳ್ಳಿ,ಬಸವರಾಜ ವಾಡಿ,ವಿಠಲ ಕುಸಾಳೆ,ಶಿವಕುಮಾರ ಪೋಚಾಲಿ,ಭೀಮರೆಡ್ಡಿ,ಶ್ರೀಮಂತ ಕಟ್ಟಿಮನಿ,ಕೆಎಂ.ಬಾರಿ,ಲಕ್ಷ್ಮಣ ಆವುಂಟಿ,ಆರ್.ಗಣಪತರಾವ,ಅಬ್ದುಲ್ ಬಾಷೀದ್,ರೇವಣಸಿದ್ದಪ್ಪ ಮೋಘಾ,ಭೀಮಶೇಟ್ಟಿ ಮುರುಡಾ,ಭೀಮಶೇಟ್ಟಿ ಮುಕ್ಕಾ,ನಾಗೇಂದ್ರಪ್ಪಾ,ಸುಭಾಷ್ ನಿಡಗುಂದಿ,ಆರೀಫ್,ಶ್ರೀನಿವಾಸ,ಅನೇ ಕರಿದ್ದರು.
