
ಉದಯವಾಹಿನಿ ಯಾದಗಿರಿ : ಈಶಾನ್ಯ ಪದವೀಧರ ಕ್ಷೇತ್ರದ ಮತದಾರರ ಪಟ್ಟಿಗೆ ಹೆಸರು ನೋಂದಾಯಿಸವ ಅವಧಿ ವಿಸ್ತರಿಸುವಂತೆ ವಿಕಲಚೇತನರ ವಿಭಾಗೀಯ ಅಧ್ಯಕ್ಷ ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಸಂಗನಗೌಡ ಧನರಡ್ಡಿ ರಾಜನಕೋಳೂರ ಒತ್ತಾಯಿಸಿದ್ದಾರೆ.ಈಶಾನ್ಯ ಪದವೀಧರ ಕ್ಷೇತ್ರದ ಅರ್ಹ ಮತದಾನರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಚುನಾವಣಾ ಆಯೋಗದ ನಿರ್ದೇಶನದಂತೆ ನವಂಬರ್ 6 ಕೊನೆಯ ದಿನವಾಗಿದ್ದು ತಿಳಿದು ಬಂದ ಈ ಹಿನ್ನೆಲೆಯಲ್ಲಿ ದಸಾರ ಹಾಗೂ ರಾಜ್ಯೋತ್ಸವ ಸೇರಿದಂತೆ ಸಂದರ್ಭದಲ್ಲಿ ಸಾಕಷ್ಟು ಜನರಿಗೆ ಹೆಸರು ನೋಂದಾಯಿಸಲು ಸಾಧ್ಯವಾಗಿಲ್ಲ ಅದ್ದರಿಂದ ಇನ್ನೂ 15 ದಿನಗಳ ಕಾಲ ಪದವೀಧರ ಹೆಸರು ಸೇರ್ಪಡೆಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.
