ಉದಯವಾಹಿನಿ, ಬೆಂಗಳೂರು: ನಗರದ ಎಲ್ಲಾ ವಿಭಾಗಗಳ ಪೊಲೀಸ್ ಠಾಣಾ ಸರಹದ್ದುಗಳಲ್ಲಿ ವಿಶೇಷ ಕಾರ್ಯಾಚರಣೆ ಕೈಗೊಂಡು, ವೈನ್‌ಸ್ಟೋರ್ಸ್, ಬಾರ್ & ರೆಸ್ಟೋರೆಂಟ್‌ಗಳು, ಸ್ಥಳೀಯ ಡಾಬ, ಹೋಟೆಲ್ ಮತ್ತು ಲಾಡ್ಜ್‌ಗಳು, ಬೇಕರಿ-ಟೀಸ್ಟಾಲ್‌ಗಳಲ್ಲಿ ಸೇರುವ, ರಾತ್ರಿ ವೇಳೆಯಲ್ಲಿ ಅನುಮಾನಾಸ್ಪದವಾಗಿ ಓಡಾಡುವ ವ್ಯಕ್ತಿಗಳನ್ನು ಪರಿಶೀಲಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ತಿಳಿಸಿದ್ದಾರೆ.
ನಿಯಮ ಉಲ್ಲಂಘನೆ ಕಂಡುಬಂದ ಸ್ಥಳಗಳಲ್ಲಿ ಕೋಟ್ಪಾ ಕಾಯ್ದೆ, ಕೆ.ಪಿ.ಆಕ್ಟ್., ಐಪಿಸಿ ಪ್ರಕರಣಗಳ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಿ ಕ್ರಮ ಕೈಗೊಳ್ಳಲಾಗಿದೆ. ನಗರದ ೫೭೭ ವೈನ್‌ಸ್ಟೋರ್ಸ್ ಗಳು ,೯೬೯ ಬಾರ್ & ರೆಸ್ಟೋರೆಂಟ್, ೭೦೪ ಲಾಡ್ಜ್ ಗಳು ,೧,೬೮೨ಬೇಕರಿ-ಟೀ ಸ್ಟಾಲ್‌ಗಳು ,೭೧೫ ಇತರೆ ಸ್ಥಳಗಳಲ್ಲಿ ಪರಿಶೀಲನೆ ಕೈಗೊಂಡು ೫,೧೧೧ಮಂದಿ ಅನುಮಾನಸ್ಪದ ವ್ಯಕ್ತಿಗಳು,೪,೨೮೨ ವಾಹನಗಳ ತಪಾಸಣೆ ನಡೆಸಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!