ಉದಯವಾಹಿನಿ, ಕಾರವಾರ: ಬಾಕಿ ವೇತನ ನೀಡುವಂತೆ ಒತ್ತಾಯಿಸಿ ಡಯಾಲಿಸಿಸ್ ಕೇಂದ್ರದ ನೌಕರರು ಪ್ರತಿಭಟನೆ ನಡೆಸುತ್ತಿದ್ದಾರೆ. ಇದರಿಂದ ಕರ್ನಾಟಕದಾದ್ಯಂತ ಡಯಾಲಿಸಿಸ್ ಸೇವೆಯಲ್ಲಿ ತೀವ್ರ ವ್ಯತ್ಯಯ ಉಂಟಾಗಿದೆ, ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರೆಯದೆ ರೋಗಿ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. ಗುಂಜಾವತಿ ಗ್ರಾಮದ ಸೈಯದ್ ಮೊಹಮ್ಮದ್ ಗೌಸ್ (೫೮) ಮೃತ ವ್ಯಕ್ತಿ. ಈ ಮೂಲಕ ನೌಕರರು ಮತ್ತು ಸರ್ಕಾರದ ನಡುವಿನ ಜಟಾಪಟಿಗೆ ಜೀವ ಬಲಿಯಾಗಿದೆ.
ಎರಡು ತಿಂಗಳಿನಿಂದ ಮುಂಡಗೋಡಿ ಸರಕಾರಿ ಆಸ್ಪತ್ರೆಯಲ್ಲಿ ಸೈಯದ್ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದರು. ಆದರೆ, ಕಳೆದ ಮೂರ್ನಾಲ್ಕು ದಿನಗಳಿಂದ ನೌಕರರು ಕರ್ತವ್ಯ ತೊರೆದು ಪ್ರತಿಭಟನೆ ನಡೆಸುತ್ತಿದ್ದಾರೆ. ಇದರಿಂದ ಗುಂಜಾವತಿ ಗ್ರಾಮದ ಸೈಯದ್ ಮಹ್ಮದ ಗೌಸ್ ಮುಂಡಗೋಡು ಸರಕಾರಿ ಆಸ್ಪತ್ರೆಯ ಡಯಾಲಿಸಿಸ್ ಕೇಂದ್ರದಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
