ಉದಯವಾಹಿನಿ, ದೇವನಹಳ್ಳಿ: ಪುರಸಭೆ ವ್ಯಾಪ್ತಿಯಲ್ಲಿರುವ ಐದು ಸಾರ್ವಜನಿಕ ಶೌಚಾಲಯಗಳಲ್ಲಿ ಎರಡನ್ನು ಹೈಟೆಕ್ ಆಗಿ ಅಭಿವೃದ್ಧಿಗೊಳಿಸಿ ಬಳಕೆಗೆ ಮುಕ್ತಗೊಳಿಸಲಾಗಿದೆ. ಶುಲ್ಕ ರಹಿತವಾಗಿ ಶೌಚಾಲಯಗಳನ್ನು ಜನರು ಉಪಯೋಗಿಸಬಹುದು ಎಂದು ಪುರಸಭೆಯ ಹಿರಿಯ ಆರೋಗ್ಯ ನಿರೀಕ್ಷಕಿ ಶ್ರೀದೇವಿ ತಿಳಿಸಿದರು.ಪುರಸಭೆ ಹಮ್ಮಿಕೊಂಡಿರುವ ಸ್ವಚ್ಛ ಶೌಚಾಲಯ ಅಭಿಯಾನಕ್ಕೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.ಪುರಸಭೆ ವ್ಯಾಪ್ತಿಯಲ್ಲಿ ಕೆಲ ಶೌಚಾಲಯಗಳು ಹಳೆಯದಾಗಿದ್ದು, ಅವು ಬಳಕೆಗೆ ಯೋಗ್ಯವಾಗಿರಲಿಲ್ಲ. ತಾಲೂಕು ಕಚೇರಿ ಬಳಿ ಇರುವ ಶೌಚಾಲಯ ದುರಸ್ತಿಗೊಳಿಸಿ ಮನೆಯೇ ವಾತಾವರಣ ರೀತಿಯಲ್ಲಿ ಶುಚಿತ್ವ ಕಾಪಾಡಲಾಗುತ್ತಿದೆ.
ಬಜಾರ್ ರಸ್ತೆಯಲ್ಲಿರುವ ಶೌಚಾಲಯ ಬಳಕೆಯಾಗದೆ ಇತ್ತು. ಅದನ್ನು ಸಹ ದುರಸ್ತಿಗೊಳಿಸಿ, ಅಗತ್ಯ ಎಲ್ಲಾ ಮೂಲ ಸೌಕರ್ಯಗಳನ್ನು ಕಲ್ಪಿಸಿ ಮರು ಪ್ರಾರಂಭಿಸಲಾಗಿದೆ. ಉಳಿದ ಶೌಚಾಲಯಗಳನ್ನು ಸಹ ದುರಸ್ತಿ ಮಾಡಿಸಿ ಸಾರ್ವಜನಿಕ ಬಳಕೆಗೆ ಒದಗಿಸಲಾಗುವುದು. ಸಾರ್ವಜನಿಕರು ಬಯಲುಗಳಲ್ಲಿ ಶೌಚ ಮಾಡದೇ ಶೌಚಾಲಯಗಳನ್ನೇ ಬಳಸಬೇಕು. ಇದರಿಂದ ರೋಗರುಚಿನ ಹರಡದಂತೆ ಎಚ್ಚರವಹಿಸಬಹುದು ಎಂದು ಹೇಳಿದರು.
