ಉದಯವಾಹಿನಿ, ರಾಯಚೂರು: ತಾಲೂಕಿನ ದೇವಸುಗೂರು ಗ್ರಾಮದ ಶ್ರೀ ಸೂಗೂರೇಶ್ವರ ಜಾತ್ರಾ ಮಹೋತ್ಸವದಂಗವಾಗಿ ಡಿ.೧೩ರಂದು ಸೂಗೂರೇಶ್ವರ ದೇವಸ್ಥಾನದಲ್ಲಿ ಪಲ್ಲಕ್ಕಿ ಮೆರವಣಿಗೆ, ಕೃಷ್ಣಾ ನದಿಯಲ್ಲಿ ಗಂಗಾಸ್ಥಾನ, ದೇವಸ್ಥಾನದಲ್ಲಿ ಕಡುಬಿನ ಕಾಳಗ ನಂತರ ಮಹಾರುದ್ರಾಭಿಶೇಕ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳು ಜರುಗಿದವು.ದೇವಸ್ಥಾನದ ಆವರಣದಲ್ಲಿರುವ ಜೋಡು ರಥೋತ್ಸವವನ್ನು ಹೊರತೆಗೆದು ಶುಚಿಗೊಳಿಸಲಾಯಿತು. ನಂತರ ಪಲ್ಲಕ್ಕಿ ಸೇವೆ ಸೇರಿದಂತೆ ಇನ್ನಿತರ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು. ದೇವಸ್ಥಾನದ ಆವರಣದಲ್ಲಿ ಶಿವಕುಮಾರ ಅರೋಲಿ ಹಾಗೂ ಸಂಗಡಿಗರಿಂದ ತತ್ವಪದಗಳ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಡಿ.೧೪ರಂದು ಬೆಳಿಗ್ಗೆ ೬:೦೦ ಗಂಟೆಗೆ ಸುಗೂರೇಶ್ವರ ಸ್ವಾಮಿಗೆ ಮಹಾರುದ್ರಾಭಿಷೇಕ ಪೂಜೆ, ರಾತ್ರಿ ೯:೦೦ರಿಂದ ೧೦:೩೦ರವರೆಗೆ ಪಲ್ಲಕ್ಕಿ ನಂದಿಕೋಲು ಪುರವಂತಿಗೆ ಸೇವೆ ಜರುಗುವುದು ರಾತ್ರಿ ೧೦:೩೦ರಿಂದ ಸುರಪುರದ ರತ್ನಾಕರ್ ವಿಶೇಷ ಚೇತನ ಕಲಾ ತಂಡದಿಂದ ಸುಗಮ ಸಂಗೀತ ಕಾರ್ಯಕ್ರಮ ಜರುಗಲಿದೆ. ಎಂದು ದೇವಸ್ಥಾನದ ಆಡಳಿತಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!