ಉದಯವಾಹಿನಿ, ಸಿರವಾರ: ಸ್ವಚ್ಛ ಭಾರತ ಮಿಷನ್ (ಗ್ರಾಮೀಣ) ಅಭಿಯಾನದಡಿ ಗ್ರಾಮದಲ್ಲಿ ಸ್ವಚ್ಛತೆ ಕಾಪಾಡಲು, ಒಣ ಕಸ ಹಾಗೂ ಹಸಿ ಕಸ ವಿಂಗಡಿಸಿ, ಘನ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ತೆಗೆದುಕೊಂಡು ಹೋಗಲು ಪ್ರತಿ ಗ್ರಾಮ ಪಂಚಾಯಿತಿಗೆ ತ್ಯಾಜ್ಯ ವಿಲೇವಾರಿ ವಾಹನ ನೀಡಲಾಗಿದೆ. ಆ ವಾಹನಕ್ಕೆ ಮಹಿಳೆಯನ್ನು ಚಾಲಕಿಯಾಗಿ ನೇಮಕಗೊಳಿಸಿದ ಹಿನ್ನೆಲೆಯಲ್ಲಿ ಗುರುವಾರ ಕಸದ ವಾಹನಕ್ಕೆ ಚಾಲನೆ ನೀಡಲಾಯಿತು.
ಮಹಿಳಾ ಸ್ವ ಸಹಾಯ ಸಂಘದಿಂದ ಕಸದ ವಾಹನ ಚಾಲಕರನ್ನು ನೀಡಿದ್ದು ಅಭಿನಂದನರ‍್ಹವಾಗಿದೆ. ಮಹಿಳೆಯರು ಎಲ್ಲ ರಂಗದಲ್ಲೂ ಸೇವೆಸಲ್ಲಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಗ್ರಾಮ ಪಂಚಾಯ್ತಿ ಅಧ್ಯಕ್ಷ ಜಿ.ಸೂಗುರಯ್ಯ ಹೀರೆಮಠ ಹೇಳಿದರು. ಗ್ರಾಮ ಪಂಚಾಯತಿ ಕರ‍್ಯರ‍್ಶಿ ಮಲ್ಲಪ್ಪ ಮಾತನಾಡಿದರು.
ಮಹಿಳಾ ಸಂಘ ಹಾಗೂ ವಾಹನ ಚಾಲಕಿ ಅಂಬಮ್ಮ ಹನುಮೇಶ ಅವರಿಂದ ಅಧ್ಯಕ್ಷ ಜಿ.ಸೂಗುರಯ್ಯ ಹಿರೇಮಠ ಹಾಗೂ ಕರ‍್ಯರ‍್ಶಿ ಮಲ್ಲಪ್ಪ ಅವರಿಗೆ ಸನ್ಮಾನಿಸಲಾಯಿತು. ಗ್ರಾ.ಪಂ. ಅಧ್ಯಕ್ಷರು ವಾಹನ ಚಾಲಕಿ ಅಂಬಮ್ಮಗೆ ವಾಹನದ ಕೀಲಿ ನೀಡಿದರು. ಗ್ರಾ.ಪಂ ಸದಸ್ಯ ಮುದುಕಪ್ಪ ನಾಯಕ ಗರಡಿ, ಪ್ರಕಾಶ ನಾಯಕ, ಹನುಮಂತ, ಕರ ವಸೂಲಿಗಾರ ಆಂಜನೇಯ, ಆಪರೇಟರ್ ಮಲ್ಲೇಶ ಮಾಚನೂರು, ಸಿಬ್ಬಂದಿಗಳಾದ ಆಂಜಿನೇಯ ನಾಯಕ, ಹನುಮಂತಿ ವಾಟರ್ ಮ್ಯಾನ್ ಮೈಮೂದ್, ಸುರೇಶ ಇತರರಿದ್ದರು.
