ಉದಯವಾಹಿನಿ, ಮೊಳಕಾಲ್ಮೂರು : ರೈತ ಈ ದೇಶದ ಬೆನ್ನೆಲುಬು ಎಂಬುವುದು ಸತ್ಯ, ನಮ್ಮ ದೇಶದಲ್ಲಿ ರೈತರು ಯಾರಿಗಿಂತಲೂ ಕಡಿಮೆ ಇಲ್ಲ ಕಾಯಕವೇ ಕೈಲಾಸ ಎಂದು ನಂಬಿದವರು ರೈತರು ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಪ್ರಕಾಶ್ ತಿಳಿಸಿದರು. ಪಟ್ಟಣದ ಶ್ರೀ ನುಂಗಿ ಮಲೆ ಸಿದ್ದೇಶ್ವರ ರೈತರ ಉತ್ಪಾದಕ ಕಂಪನಿ ಕಚೇರಿಯಲ್ಲಿ ನಡೆದ ರೈತರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಅಧ್ಯಕ್ಷ ಕೃಷ್ಣಪ್ಪ, ಉಪಾಧ್ಯಕ್ಷ ಗಂಗಾಧರಯ್ಯ,ಸದಸ್ಯರಾದ ಕಿರಣ್, ತಿಪ್ಪಣ್ಣ, ಸ್ವಾಮಿ ಇನ್ನು ಮುಂತಾದವರಿದರು.
