ಉದಯವಾಹಿನಿ, ಬೆಂಗಳೂರು: ಹೊಸ ವರ್ಷ ದಿನದಂದು ಮಧ್ಯ ಮಾರಾಟದಿಂದ ೧೯೩ ಕೋಟಿ ಆದಾಯ ಗಳಿಸಿದ ಅಬಕಾರಿ ಇಲಾಖೆ ಈಗ ಬಡವರ ಮಧ್ಯ ಮೇಲೆ ಕನ್ನ ಹಾಕಿ ದರ ಹೆಚ್ಚಳ ಮಾಡುವುದರ ಮೂಲಕ ಬಡ ಮಧ್ಯ ಪ್ರಿಯರಿಗೆ ಬಿಗ್ ಶಾಕ್ ನೀಡಿದೆ.
ನೂತನ ವರ್ಷದಲ್ಲಿ ಅತಿ ಹೆಚ್ಚು ಆದಾಯ ಸಂಗ್ರಹಣೆಯಾಗಿದೆ. ಇಂದಿನಿಂದ ಬಡವರು ಕುಡಿಯುವ ಮದ್ಯದ ದರದಲ್ಲಿ ೨೦ ರೂ ಏರಿಕೆಯಾಗಿದೆ.
ಅಬಕಾರಿ ಇಲಾಖೆ ಬಡವರ ಫೇವರೇಟ್ ಕೆಲ ಬ್ರ್ಯಾಂಡ್?ಗಳ ದರ ಹೆಚ್ಚಿಸಿದ ಈ ಮೂಲಕ ಮಧ್ಯಮ ವರ್ಗದ ಮದ್ಯ ಪ್ರಿಯರಿಗೆ ಶಾಕ್ ಮೇಲೆ ಶಾಕ್ ಕೊಟ್ಟಿದೆ. ಹೊಸ ವರ್ಷಕ್ಕೆ ಕಂಠ ಪೂರ್ತಿ ಕುಡಿದು ಕುಪ್ಪಳಿಸಿದ್ದ ಬಡವರು ಈಗ ಎಣ್ಣೆ ಖರೀದಿಸಲು ಯೋಚಿಸುವಂತಾಗಿದೆ.ದರ ಹೆಚ್ಚಳದಿಂದ ಬಡ ಮಧ್ಯ ಪ್ರಿಯರಲ್ಲಿ ಆತಂಕ ಸೃಷ್ಟಿಯಾಗಿದೆ. ೧೭% ರಷ್ಟು ಓವರ್ ಆಲ್ ಮಧ್ಯದ ಮೇಲೆ ದರ ಏರಿಕೆ ಮಾಡಲಾಗಿತ್ತು. ಈಗ ಮತ್ತೊಮ್ಮೆ ಬಡವರು ಹೆಚ್ಚಾಗಿ ಕುಡಿಯುವ ಮೂರು ಹಾಟ್ ಫೇವರೆಟ್ ಬ್ರ್ಯಾಂಡ್?ಗಳ ದರ ಹೆಚ್ಚಳ ಮಾಡಲಾಗಿದೆ. ಮದ್ಯ ಉತ್ವಾದನ ಕಂಪನಿಗಳು ಕ್ವಾಟರ್?ಗೆ ೨೦ ರಿಂದ ಮೂವತ್ತು ರೂಪಾಯಿ ಏರಿಸಿವೆ.
