ಉದಯವಾಹಿನಿ, ಬೆಂಗಳೂರು: ಕಳೆದ ವರ್ಷ ೨೦೨೩ರಲ್ಲಿ ನಗರದಲ್ಲಿ ೮೮೦ ಮಾರಣಾಂತಿಕ ರಸ್ತೆ ಅಪಘಾತಗಳು ಸಂಭವಿಸಿ ೯೦೯ ಮಂದಿ ಸಾವಿಗೀಡಾಗಿದ್ದಾರೆ. ಕಳೆದ ವರ್ಷ ನಗರದಲ್ಲಿ ೮೮೦ ಮಾರಣಾಂತಿಕ ಅಪಘಾತಗಳು ಸಂಭವಿಸಿದ್ದು, ೯೦೯ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಕಳೆದ ವರ್ಷ ನಗರದಲ್ಲಿ ೪,೦೯೫ ಮಾರಣಾಂತಿಕವಲ್ಲದ ಅಪಘಾತಗಳು ವರದಿಯಾಗಿದ್ದು, ಇದರಲ್ಲಿ ೪,೨೦೧ ಜನರು ಗಾಯಗೊಂಡಿದ್ದಾರೆ.
ಮುಖಾಮುಖಿ ಡಿಕ್ಕಿ ಅಪಘಾತಗಳಲ್ಲಿ ೨,೪೯,೬೨೪ ಪ್ರಕರಣಗಳು ದಾಖಲಾಗಿದ್ದರೆ, ಮುಖಾಮುಖಿಯಲ್ಲದ ಅಪಘಾತಗಳಲ್ಲಿ ೮೭,೨೫,೩೨೧ ಪ್ರಕರಣಗಳು ದಾಖಲಾಗಿವೆ. ಜಂಟಿ ಪೊಲೀಸ್ ಕಮೀಷನರ್ (ಸಂಚಾರ) ಕಚೇರಿಯ ಪತ್ರಿಕಾ ಪ್ರಕಟಣೆಯ ಪ್ರಕಾರ ವೈದ್ಯಕೀಯ ತುರ್ತು ಪರಿಸ್ಥಿತಿಗಳಿಗಾಗಿ ರಚಿಸಲಾದ ಗ್ರೀನ್ ಕಾರಿಡಾರ್‌ಗಳ ಸಂಖ್ಯೆ ೨೨ ಆಗಿದ್ದು, ನಗರದ ಸಂಚಾರ ಪೊಲೀಸರು ೨೦೨೩ರಲ್ಲಿ ವಿವಿಧ ಸಂಚಾರ ನಿಯಮ ಉಲ್ಲಂಘನೆಗಾಗಿ ೧೮೪.೮೩ ಕೋಟಿ ರೂ.ಗಳ ದಂಡವನ್ನು ಸಂಗ್ರಹಿಸಿದ್ದಾರೆ. ಕಳೆದ ವರ್ಷ ಸಂಚಾರ ಪೊಲೀಸರು ಸುಮಾರು ೭,೦೫೫ ಕುಡಿದು ವಾಹನ ಚಾಲನೆ ಪ್ರಕರಣಗಳನ್ನು ದಾಖಲಿಸಿದ್ದಾರೆ. ಅಪಘಾತಗಳು, ಕುಡಿದು ವಾಹನ ಚಲಾಯಿಸುವ ಪರಿಣಾಮವಾಗಿ ಸುಮಾರು ೧೬ ಮಂದಿ ಸಾವಿಗೀಡಾಗಿದ್ದಾರೆ.
