
ಉದಯವಾಹಿನಿ, ಕಲಬುರಗಿ: ಕರ್ನಾಟಕ ಕಲಾ ಸಾಹಿತ್ಯ ಸಂಸ್ಕøತಿ ಸೇವಾ ಸಂಸ್ಥೆ ಕಲಬುರ್ಗಿ ವತಿಯಿಂದ ಶ್ರೀ ಮಲ್ಲಯ್ಯ ದೇವಸ್ಥಾನ ಆವರಣ ಸೊನ್ನ ಗ್ರಾಮದಲ್ಲಿ ಜಾನಪದ ಸಂಗೀತೋತ್ಸವ ಕಾರ್ಯಕ್ರಮ ಜನಮನ ಸೆಳೆಯಿತು
ಮರೆಪ್ಪ ಹೆಗಡೆಯವರು ಕಾರ್ಯಕ್ರಮ ಉದ್ಘಾಟಿಸಿದರು ಮುಖ್ಯ ಅತಿಥಿಗಳಾಗಿ ಕಾಂಗ್ರೆಸ್ ಮುಖಂಡರಾದ ನಭಿ ಕುಕನೂರ. ಬಸವರಾಜ್ ಹೆಗ್ಗನಾಳ. ಶರಣು ಸೋನ್ನ. ಸಂಸ್ಥೆಯ ಅಧ್ಯಕ್ಷರಾದ ಬಾಬುರಾವ್ ಕೋಬಾಳ್ ಮುಂತಾದವರು ಉಪಸ್ಥಿತರಿದ್ದರು. ಜಾನಪದ ಸಂಗೀತೋತ್ಸವ ಸಂಸ್ಕೃತಿಕ ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದರಾದ ಮಾಂತಪ್ಪ ಮಂದೆ?ವಾಲ್. ಆಕಾಶ್ ವಾಣಿ ಕಲಾವಿದರಾದ ಬಲಭೀಮ್ ನೇಲೋಗಿ. ರಾಜಪ್ಪ ಜಡಗಿ. ಭೀಮರಾಯ ಕಟ್ಟಿಮನಿ ಪವನ್. ಬಿ ನೆಲೋಗಿ ಇವರಿಂದ ಜಾನಪದ ಸಂಗೀತ ತತ್ವಪದ ದಾಸವಾಣಿ ವಚನ ಗಾಯನ ಹಾಡಿ ಜನಮನ ಸೆಳೆದರು ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.
