ಉದಯವಾಹಿನಿ, ಕೋಲಾರ: ರಕ್ತದಾನ ಮಹಾದಾನಗಳಲ್ಲಿ ಒಂದಾಗಿದ್ದು, ಯುವಜನತೆ ನಿರಂತರವಾಗಿ ರಕ್ತದಾನ ಮಾಡುವ ಮೂಲಕ ಸಾಮಾಜಿಕ ಕಳಕಳಿಯನ್ನು ಹೆಚ್ಚಿಸಿಕೊಳ್ಳುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು ಎಂದು ಕೋಲಾರ ರೋಟರಿ ಸೆಂಟ್ರಲ್ ಅಧ್ಯಕ್ಷ ಕೆ.ಎನ್.ಪ್ರಕಾಶ್ ರವರು ತಿಳಿಸಿದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕೋಲಾರ ಜಿಲ್ಲಾ ಸಂಸ್ಥೆ ಹಾಗೂ ರೋಟರಿ ನಂದಿನಿ ಮತ್ತು ಕೋಲಾರ ರೋಟರಿ ಸೆಂಟ್ರಲ್ ವತಿಯಿಂದ ನಗರದ ಎಂಎನ್‌ಜಿ ಪದವಿ ಪೂರ್ವಕಾಲೇಜು ಹಾಗೂ ಸ್ಮಾರ್ಟ್ ಪದವಿ ಕಾಲೇಜು ಸಂಯುಕ್ತಾಶ್ರಯದಲ್ಲಿ ನಡೆದ ರಕ್ತದಾನ ಶಿಬಿರವನ್ನು ಅವರು ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬರು ತಮ್ಮ ಆರೋಗ್ಯದ ಕಡೇ ಹೆಚ್ಚಿ ಗಮನ ಹರಿಸಬೇಕು, ರಕ್ತವನ್ನು ಉತ್ಪಾದಿಸಲು ಸಾಧ್ಯವಿಲ್ಲ ಆದ್ದರಿಂದ ನಾವು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುವ ಮೂಲಕ ಇನ್ನೊಬ್ಬರ ಜೀವವನ್ನು ಉಳಿಸಬಹುದು.ಅದರಂತೆ ಸತ್ತಾಗ ದೇಹವನ್ನು ಮಣ್ಣುಪಾಲು ಮಾಡುವ ಮೊದಲು ನೇತ್ರದಾನ ಮಾಡಿದರೆ ಮತ್ತೊಬ್ಬರಿಗೆ ದೃಷ್ಟಿಯನ್ನು ನೀಡಬಹುದು ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಮುಖ್ಯ ಆಯುಕ್ತ ಪಿಜಿಆರ್ ಸಿಂಧ್ಯಾ ರವರು ರಕ್ತದಾನಿಗಳಿಗೆ ನೆನಪಿನ ಕಾಣಿಕೆ ಹಾಗೂ ಎಂಎನ್‌ಜಿ ಪದವಿ ಪೂರ್ವಕಾಲೇಜಿನಲ್ಲಿ ನಡೆದ ಕ್ರೀಡಾಕೂಟದ ವಿಜೇತರಿಗೆ ಬಹುಮಾನ ವಿತರಿಸಿದರು.
ಕಾರ್ಯಕ್ರಮದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಆಯುಕ್ತರಾದ ಕೆ.ವಿ.ಶಂಕರಪ್ಪ ಪದಾಧಿಕಾರಿಗಳಾದ ಸುರೇಶ್, ಉಮಾದೇವಿ, ಸ್ಕೌಟ್ಸ್ ಬಾಬು, ವಿಶ್ವನಾಥ, ರತ್ನಮ್ಮ, ಕಾಲೇಜು ಪ್ರಾಂಶುಪಾಲರು ಆರ್‌ಎಲ್ ಜಾಲಪ್ಪ ಆಸ್ಪತ್ರೆಯ ಸಿಬ್ಬಂದಿ, ಉಪಸ್ಥಿತರಿದ್ದರು.
