ಉದಯವಾಹಿನಿ, ಹುಬ್ಬಳ್ಳಿ : ಶ್ರೀಕಾಂತ ಪೂಜಾರಿ ಹೆಸರಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಸಚಿವ ದಿನೇಶ ಗುಂಡೂರಾವ್ ಕಿಡಿಕಾರಿದ್ದಾರೆ. ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಮಗೆ ಶ್ರೀಕಾಂತ ಪೂಜಾರಿ ಯಾರು ಎನ್ನುವುದೇ ಗೊತ್ತಿಲ್ಲ. ಆತನಿಗಾಗಿ ಸುಮ್ಮನೇ ರಾಜ್ಯಾದ್ಯಂತ ಹೋರಾಟ ಮಾಡುತ್ತಿದ್ದಾರೆ ಎಂದು ನುಡಿದರು.
ಶ್ರೀಕಾಂತ್ ಪೂಜಾರಿ ಒಬ್ಬ ರೌಡಿಶೀಟರ್, ಕ್ರಿಮಿನಲ್. ಆತನ ಮೇಲಿನ ರೌಡಿಶೀಟರ್ ಪಟ್ಟದಿಂದ ಮುಕ್ತಿ ಕೊಟ್ಟಿರುವುದು ಕಾಂಗ್ರೆಸ್. ಸದ್ಯ ನ್ಯಾಯಾಲಯದ ಆದೇಶ ಇದೆ. ಹೀಗಾಗಿ ಬಂಧನ ಮಾಡಿದ್ದಾರೆ ಎಂದು ಅವರು ಹೇಳಿದರು. ರಾಮಮಂದಿರ ಉದ್ಘಾಟನೆಯಾಗುತ್ತಿರುವುದು ಸಂತೋಷದ ವಿಷಯ. ಪ್ರತಿ ಗ್ರಾಮದಲ್ಲಿಯೂ ರಾಮಮಂದಿರ ಇವೆ. ಹಿಂದೂತ್ವ ಒಬ್ಬರ ಆಸ್ತಿ ಅಲ್ಲ. ಯಾವ ಪಕ್ಷದ ಆಸ್ತಿಯೂ ಅಲ್ಲ ಎಂದು ಸಚಿವರು ಹೇಳಿದರು.
