ಉದಯವಾಹಿನಿ, ಹುಬ್ಬಳ್ಳಿ: ಹುಬ್ಬಳ್ಳಿ ಗಲಭೆ ಪ್ರಕರಣದ ಆರೋಪಿ, ಕರಸೇವಕ ಶ್ರೀಕಾಂತ್ ಪೂಜಾರಿಗೆ ಜಾಮೀನು ಮಂಜೂರಾಗಿರುವ ಹಿನ್ನೆಲೆಯಲ್ಲಿ ಬಿಡುಗಡೆ ಮಾಡುವಂತೆ ನ್ಯಾಯಾಲಯ ಆದೇಶ ನೀಡಿದೆ. ಹುಬ್ಬಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ 32 ವರ್ಷಗಳ ಬಳಿಕ ಶ್ರೀಕಾಂತ್ ಪೂಜಾರಿಯನ್ನು ಹುಬ್ಬಳ್ಳಿ ಶಹರ ಠಾಣೆ ಪೊಲೀಸರು ಬಂಧಿಸಿದ್ದರು.ಜ.5ರಂದು ಕೋರ್ಟ್ ಶ್ರೀಕಾಂತ್ ಪೂಜಾರಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು. ಇಬ್ಬರ ಶ್ಯೂರಿಟಿ, 1 ಲಕ್ಷ ಮೌಲ್ಯದ 2 ಬಾಂಡ್ ಸೇರಿದಂತೆ ಇದೀಗ ಜಾಮೀನು ಷರತ್ತು ಪೂರೈಸಿರುವ ಹಿನ್ನೆಲೆ ಶ್ರೀಕಾಂತ್ ಪೂಜಾರಿಯನ್ನು ಮಧ್ಯಾಹ್ನ 3:30ರಿಂದ 4 ಗಂಟೆಯೊಳಗೆ ಬಿಡುಗಡೆ ಮಾಡುವಂತೆ ನ್ಯಾಯಾಲಯ ಆದೇಶ ನೀಡಿದೆ.
